Operation Sindhoor :’ ಆಪರೇಷನ್ ಸಿಂಧೂರ್’ ಹೆಸರಿಟ್ಟಿದ್ದು ಯಾರು? ಕೊನೆಗೂ ಬಹಿರಂಗಪಡಿಸಿದ ರಾಜನಾಥ್ ಸಿಂಗ್

Operation Sindhoor: ಪೆಹಾಲ್ಗಮ್ ದಾಳಿಯ ಪರೀತಿಕರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ನಡೆಸಿ ಸುಮಾರು ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ಬಲಿಪಡೆದಿತ್ತು. ಇದು ಪಾಕಿಸ್ತಾನದ ಮೇಲೆ ಭಾರತೀಯ ಸೇನೆಯು ಯುದ್ಧ ನಡೆಸಲು ಮುನ್ನುಡಿ ಬರೆದಂತಾಗಿತ್ತು. ಆದರೆ ಈ ಆಪರೇಷನ್ ಗೆ ಸಿಂಧೂರ್ ಎಂದು ಹೆಸರಿಟ್ಟಿದ್ದು ಯಾರು ಎಂಬುದ ಕುತೂಹಲ ವಿಚಾರವಾಗಿತ್ತು. ಇದೀಗ ಈ ಹೆಸರನ್ನು ಸೂಚಿಸಿದ್ದು ಯಾರೆಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಹೌದು, ಈ ಆಪರೇಷನ್ ಗೆ ಸಿಂಧೂರ್ ಹೆಸರು ಸೂಚಿಸಿದ್ದು ಪ್ರಧಾನಿ ಮೋದಿ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಗುಜರಾತ್ ನ ಭುಜ್ ವಾಯುನೆಲೆಯಲ್ಲಿ ಇಂದು ಯೋಧರನ್ನುದ್ದೇಶಿಸಿ ಮಾತನಾಡಿರುವ ರಾಜನಾಥ್ ಸಿಂಗ್, ‘ಆಪರೇಷನ್ ಸಿಂಧೂರ್ ಹೆಸರು ನೀಡಿದ್ದು ಪ್ರಧಾನಿ ಮೋದಿ. ಈ ದಾಳಿ ಭಾರತೀಯರೆಲ್ಲರೂ ಹೆಮ್ಮೆಪಡುವಂತೆ ಮಾಡಿದೆ. ಪಾಕಿಸ್ತಾನದಲ್ಲಿರುವ ಉಗ್ರರ ಅಡಗುದಾಣಗಳನ್ನು ಸೇನೆ ಕೇವಲ 23 ನಿಮಿಷದಲ್ಲಿ ಹೊಡೆದು ಹಾಕಿದೆ. ಬ್ರೇಕ್ ಫಾಸ್ಟ್ ಮಾಡುವಷ್ಟೇ ಸಮಯದಲ್ಲಿ ಶತ್ರುಗಳ ಕೋಟೆಯನ್ನು ಬೇಧಿಸಿದೆ’ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
Comments are closed.