Ration Card: ರೇಷನ್‌ಕಾರ್ಡ್‌ನಲ್ಲಿ ನಿಮ್ಮ ಮನೆ ಸದಸ್ಯರ ಹೆಸರು ಸೇರಿಸಲು ಹೀಗೆ ಮಾಡಿ

Share the Article

Ration Card: ಪಡಿತರ ಚೀಟಿಯಲ್ಲಿ ಹೆಸರು ನೋಂದಾಯಿಸುವುದು ಯಾವ ರೀತಿ ಎನ್ನುವುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಪಡಿತರ ಚೀಟಿಗಳಲ್ಲಿ ಹೆಸರುಗಳನ್ನು ಸೇರಿಸಲು ಆನ್ಲೈನ್‌ ಮತ್ತು ಆಫ್ಲೈನ್‌ ಸೇವೆ ಇದೆ.

ಹೆಸರನ್ನು ಸೇರಿಸುವುದು ಹೇಗೆ?

ಆಫ್‌ಲೈನ್ ಆಹಾರ ಇಲಾಖೆಯ ಕಚೇರಿಗೆ ತೆರಳಿ ಫಾರ್ಮ್‌ ಪಡೆದು, ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
ಅಗತ್ಯ ದಾಖಲೆಯೊಂದಿಗೆ ಆಹಾರ ಇಲಾಖೆ ಕೇಂದ್ರಕ್ಕೆ ಸಲ್ಲಿಸಿ
ಈ ಫಾರ್ಮ್‌ ಕೊಟ್ಟ ನಂತರ ರಸೀದಿ ಪಡೆಯೋದನ್ನು ಮರೆಯಬೇಡಿ.
ಇದಾದ ನಂತರ ದಾಖಲೆಗಳನ್ನು ಪರಿಶೀಲನೆ ಮಾಡಿ ಹೊಸ ಪಡಿತರ ಚೀಟಿ ಪಡೆಯಿರಿ.‌

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ರೀತಿ;
ಮೊದಲಿಗೆ ನೀವು https://fcs.up.gov.in/FoodPortal.aspx ವೆಬ್ಸೈಟ್‌ ಓಪನ್‌ ಮಾಡಿ
ಲಾಗಿನ್‌ ಆಗಿ. ನೀವು ಈಗಾಗಲೇ ಲಾಗಿನ್‌ ಐಡಿ ಹೊಂದಿದ್ದರೆ ಲಾಗಿನ ಸುಲಭ.
ಮುಖಪುಟದಲ್ಲಿ ಹೊಸ ಸದಸ್ಯರ ಹೆಸರು ನೋಂದಾಯಿಸುವ ಆಯ್ಕೆ ಇರುತ್ತದೆ. ಅಲ್ಲಿ ಕ್ಲಿಕ್‌ ಮಾಡಿ.
ನಂತರ ಅಲ್ಲಿ ಒಂದು ಫಾರ್ಮ್‌ ಓಪನ್‌ ಮಾಡಿ. ಹೊಸ ಸದಸ್ಯರ ಕುರಿತು ಅಗತ್ಯ ಮಾಹಿತಿ ಭರ್ತಿ ಮಾಡಿ. ಎಲ್ಲಾ ದಾಖಲೆಗಳನ್ನು ಅಪ್ಲೋಡ್‌ ಮಾಡಿ
ನಂತರ ಸಬ್ಮಿಟ್‌ ಆಯ್ಕೆ ಕ್ಲಿಕ್‌ ಮಾಡಿ
ಫಾರ್ಮ್‌ ಸಲ್ಲಿಸಿದ ನಂತರ ನೋಂದಣಿ ಸಂಖ್ಯೆ ಬರುತ್ತದೆ. ನೋಂದಣಿ ಸಂಖ್ಯೆಯಿಂದ ನಿಮಗೆ ನಿಮ್ಮ ಫಾರ್ಮ್‌ನ ಸ್ಥಿತಿಗತಿ ಟ್ರ್ಯಾಕ್‌ ಮಾಡಬಹುದು. ಮಾಹಿತಿ ಎಲ್ಲವೂ ಸರಿಯಿದ್ದರೆ ಅಂಚೆ ಮೂಲಕ ಹೊಸ ರೇಷನ್‌ ಕಾರ್ಡ್‌ ಕಳುಹಿಸಲಾಗುತ್ತದೆ.

ಬೇಕಾಗುವ ದಾಖಲೆಗಳು:
ಕಾರ್ಡ್‌ನಲ್ಲಿ ಹೆಸರು ಸೇರ್ಪಡೆಗೆ ಆಧಾರ ಜೊತೆಗೆ ಆದಾಯ ಪ್ರಮಾಣ ಪತ್ರ ಬೇಕು. ಆರು ವರ್ಷದೊಳಗಿನ ಮಕ್ಕಳ ಸೇರ್ಪಡೆಗೆ ಮೊಬೈಲ್‌ನಂಬರ್‌ ಜೋಡಣೆಯಾಗಿರುವ ಆಧಾರ್‌ ಸಂಖ್ಯೆ, ಜನನ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.
ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರ ಜೊತೆಗೆ ಮಗುವಿನ ಪೋಷಕರ ಆಧಾರ್‌ ಕಾರ್ಡ್‌ ಬೇಕು.
ಹೆಂಡತಿ ಹೆಸರು ಸೇರ್ಪಡೆಗೆ ಮಹಿಳೆಯ ಆಧಾರ್‌ ಕಾರ್ಡ್‌, ಗಂಡನ ಮನೆಯ ಪಡಿತರ ಚೀಟಿ ಪ್ರತಿ ನೀಡಬೇಕು.

Comments are closed.