Day: February 17, 2020

ಪಾಲ್ತಾಡು : ಒತ್ತೆಕೋಲದ ಆಮಂತ್ರಣ ಬಿಡುಗಡೆ,ಕೊಲ್ಲಿ ಮುಹೂರ್ತ

ಸವಣೂರು : ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ವರ್ಷಾವ„ ಒತ್ತೆಕೋಲವು ಮಾ.24ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಆಮಂತ್ರಣ ಬಿಡುಗಡೆ ಪಾಲ್ತಾಡು ವಿಷ್ಣುನಗರದಲ್ಲಿ ನಡೆಯಿತು. ಕೊಲ್ಲಿ ಮುಹೂರ್ತ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ವರ್ಷಾವಧಿ ಒತ್ತೆಕೋಲವು ಮಾ.24ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಕೊಲ್ಲಿ ಮುಹೂರ್ತ ನಡೆಯಿತು. ಮುಖ್ಯ ದೈವ ಪಾತ್ರಿ ಕೃಷ್ಣ ಮಣಿಯಾಣಿ ಮೊಗಪ್ಪೆ ಮುಹೂರ್ತ ನೆರವೇರಿಸಿದರು. ಪರಿಚಾರಕರಾದ ಬಾಬು ಎರ್ಕ,ಸೇಸಪ್ಪ ಮಡಿವಾಳ,ನವೀನ್ ಆಚಾರ್ಯ ವಿವಿಧ ಕಾರ್ಯ ನೆರವೇರಿಸಿದರು. ಈ ಸಂದರ್ಭ ದೈವಸ್ಥಾನದ ಆಡಳಿತ ಮೊಕ್ತೇಸರ ನವೀನ್ ರೈ …

ಪಾಲ್ತಾಡು : ಒತ್ತೆಕೋಲದ ಆಮಂತ್ರಣ ಬಿಡುಗಡೆ,ಕೊಲ್ಲಿ ಮುಹೂರ್ತ Read More »

ನಳೀಲು ಶ್ರೀ ಸುಬ್ರಹ್ಮಣ್ಯ ದೇವರ ಜಾತ್ರೆಗೆ ಗೊನೆ ಮುಹೂರ್ತ

ಪುತ್ತೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಹಾಗೂ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾ ಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಹಾಗೂ 29ನೇ ವರ್ಷದ ಸತ್ಯನಾರಾಯಣ ಪೂಜೆ,ಪರಿವಾರ ದೈವಗಳ ನೇಮೋತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.23 ಮತ್ತು ಫೆ 24 ರಂದು ನಡೆಯಲಿದೆ.ಇದರ ಪೂರ್ವಭಾವಿಯಾಗಿ ಫೆ.16ರಂದು ಗೊನೆ ಮುಹೂರ್ತ ನಡೆಯಿತು. ದೇವಸ್ಥಾನದ ಅರ್ಚಕ ಹರಿನಾರಾಯಣ ಮನೋಳಿತ್ತಾಯ ಅವರು ಧಾರ್ಮಿಕ ವಿಽವಿದಾನ ನೆರವೇರಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ …

ನಳೀಲು ಶ್ರೀ ಸುಬ್ರಹ್ಮಣ್ಯ ದೇವರ ಜಾತ್ರೆಗೆ ಗೊನೆ ಮುಹೂರ್ತ Read More »

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಗ್ನಿಗುಳಿಗ ನೇಮೋತ್ಸವ

ಸುಳ್ಯ : ಇತಿಹಾಸ ಪ್ರಸಿದ್ಧ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಬ್ರಹ್ಮ ಶ್ರೀ ವೇ.ಮೂ.ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.13 ರಂದು ಪ್ರಾರಂಭಗೊಂಡಿದ್ದು ಫೆ.17ರಂದು ರಾತ್ರಿ ಅಗ್ನಿ ಗುಳಿಗ ದೈವದ ನೇಮೋತ್ಸವ ನಡೆಯಿತು. ದೇವಸ್ಥಾನದ ಅರ್ಚಕ ಉದಯಕುಮಾರ್ ಕೆ.ಟಿ.ಪೂಜಾಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ,ಸದಸ್ಯರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ವಿಠಲದಾಸ್ ಎನ್.ಎಸ್.ಡಿ, ಜಯರಾಮ ಉಮಿಕ್ಕಳ,ಜನಾರ್ಧನ ಗೌರಿಹೊಳೆ,ನಾಗೇಶ್ ಕುಲಾಲ್ ತಡಗಜೆ,ಗುಣವತಿ ಶೆಟ್ಟಿ ಮಂಡೆಪು,ಶಶಿಕಲಾ ರೈ ಚಾವಡಿಬಾಗಿಲು ಹಾಗೂ …

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಗ್ನಿಗುಳಿಗ ನೇಮೋತ್ಸವ Read More »

ಸರ್ವೆ: ಹಿಂ.ಜಾ.ವೇ.ಯಿಂದ ನೆರವು

ಪುತ್ತೂರು: ಹಿಂದೂ ಜಾಗರಣ ವೇದಿಕೆ ಸರ್ವೆಯ ಕಾರ್ಯಕರ್ತನ ತಾಯಿಯು ಅನಾರೋಗ್ಯದಿಂದ ತೀರಿ ಹೋಗಿದ್ದು ಫೆ.17ರಂದು ಅವರ ಮನೆಗೆ ಭೇಟಿ ನೀಡಿ ಹಿಂದು ಜಾಗರಣ ವೇದಿಕೆ ಸರ್ವೆ ರಕ್ತೇಶ್ವರಿ ಶಾಖೆಯಿಂದ ಮತ್ತು ಊರಿನವರು ಸಹಕಾರದಿಂದ ರೂ.15200 ಚೆಕ್ ನೀಡಲಾಯಿತು. ಈ ಸಂದರ್ಭದಲ್ಲಿ ಮುಂಡೂರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾಶಿವ ಭಂಡಾರಿ ಬೋಟ್ಯಾಡಿ,ಹಿಂ.ಜಾ. ವೇ. ರಕ್ತೇಶ್ವರಿಯ ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ಸರ್ವೆ,ಬಿ.ಜೆ.ಪಿ ಬೂತ್ ಅಧ್ಯಕ್ಷ ಗೌತಮ್ ರೈ ಸರ್ವೆ,ಹಿಂ.ಜಾ.ವೇ ಮಾಜಿ ಅಧ್ಯಕ್ಷ ಪದ್ಮನಾಭ ಗೌಡ ಸರ್ವೆ,ಸಂಚಾಲಕ ವಿನಯ್ ಕುಮಾರ್ …

ಸರ್ವೆ: ಹಿಂ.ಜಾ.ವೇ.ಯಿಂದ ನೆರವು Read More »

ವೀರಮಂಗಲ ಮಹಾವಿಷ್ಣು ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಸಂಪನ್ನ

ನರಿಮೊಗರು : ಶಾಂತಿಗೋಡು ಗ್ರಾಮದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಳದಲ್ಲಿ ವರ್ಷಾವಧಿ ಜಾತ್ರೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಿತು. ಜಾತ್ರೆ ಪ್ರಯುಕ್ತ ಫೆ.15ರಂದು ರಾತ್ರಿ ರಂಗ ಪೂಜೆ ನಡೆಯಿತು. ಫೆ.16ರಂದು ಬೆಳಿಗ್ಗೆ ಗಣಪತಿ ಹವನ, ಸೀಯಾಳಾಭೀಷಕ, ಪವಮಾನಾಭಿಷೇಕ, ನವಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರಗಿತು. ಫೆ.17 ರಂದು ನೇಮೋತ್ಸವ ನಡೆಯಿತು. ಫೆ.16ರಂದು ನಡೆದ ಮಧ್ಯಾಹ್ನ ಧಾರ್ಮಿಕ ಸಭೆಯಲ್ಲಿ ಪ್ರಾಧ್ಯಾಪಕ ಡಾ.ಶ್ರೀಶ ಕುಮಾರ್ ಧಾರ್ಮಿಕ ಉಪನ್ಯಾಸ ನೀಡಿದರು. ಉತ್ಸವ ಸಮಿತಿ ಗೌರವಾಧ್ಯಕ್ಷ ಶಿವರಾಮ ಭಟ್ ಬಾವ ಆಧ್ಯಕ್ಷತೆ …

ವೀರಮಂಗಲ ಮಹಾವಿಷ್ಣು ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಸಂಪನ್ನ Read More »

ಮಾ.1 : ಮುಕ್ಕೂರಿನಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

ಬೆಳ್ಳಾರೆ : ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ,‌‌ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ ಆಶ್ರಯದಲ್ಲಿ ಮಾ.1 ರಂದು ಬೆಳಗ್ಗೆ 8 ರಿಂದ ಸಂಜೆ‌ 4 ರ ತನಕ ಮುಕ್ಕೂರು ಶಾಲಾ ವಠಾರದಲ್ಲಿ‌‌ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ನಡೆಯಲಿದೆ. ಈ ಸಂದರ್ಭದಲ್ಲಿ ಆಧಾರ್ ಹೊಸ ನೋಂದಣಿ, ವಿಳಾಸ ಬದಲಾವಣೆ, ಜನ್ಮದಿನಾಂಕ ಬದಲಾವಣೆ, ಹೆಸರು ಬದಲಾವಣೆಗೆ ಅವಕಾಶ ಇದೆ. ಇದಕ್ಕಾಗಿ ಅಗತ್ಯ ದಾಖಲೆ ಪತ್ರಗಳನ್ನು ಸಲ್ಲಿಸಿ ಪ್ರಯೋಜನ ‌ಪಡೆದುಕೊಳ್ಳಬಹುದು.  ಪೂರ್ವಭಾವಿಯಾಗಿ …

ಮಾ.1 : ಮುಕ್ಕೂರಿನಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ Read More »

ಬೆಳ್ತಂಗಡಿ ತಾಲೂಕು 17 ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹೊಸಂಗಡಿಯ ಪಡ್ಯಾರಬೆಟ್ಟುವಿನಲ್ಲಿ | ಮಾ. 24 ರಂದು

ಬೆಳ್ತಂಗಡಿ :  ಬೆಳ್ತಂಗಡಿ ತಾಲೂಕಿನ 17 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೊಸಂಗಡಿ ಪಡ್ಯಾರಬೆಟ್ಟು ಸಂತೃಪ್ತಿ ಸಭಾಭವನದಲ್ಲಿ 2020 ಮಾರ್ಚ್ 24 ನೇ ಮಂಗಳವಾರ ನಡೆಸುವುದೆಂದು ತೀರ್ಮಾನಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ ಪ್ರದೀಪ ಕುಮಾರ ಕಲ್ಕೂರ, ತಾ| ಅಧ್ಯಕ್ಷ ಡಾ. ಬಿ ಯಶೋವರ್ಮ, ಸಮ್ಮೇಳನ ಸಂಯೋಜನಾ ಸಮಿತಿ ಗೌರವಾಧ್ಯಕ್ಷ ಜೀವಂಧರ ಕುಮಾರ್, ಅಧ್ಯಕ್ಷ ಜಯರಾಜ್ ಕಂಬಳಿ, ಕಾರ್ಯದರ್ಶಿ ಪಿ ಧರಣೇಂದ್ರ ಕುಮಾರ್ ಇವರು ಈ ಬಗ್ಗೆ ತಿಳಿಸಿರುತ್ತಾರೆ. ಈ ಬಗ್ಗೆ ಪ್ರಥಮ ಹಂತದ …

ಬೆಳ್ತಂಗಡಿ ತಾಲೂಕು 17 ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹೊಸಂಗಡಿಯ ಪಡ್ಯಾರಬೆಟ್ಟುವಿನಲ್ಲಿ | ಮಾ. 24 ರಂದು Read More »

ಮಾಡನ್ನೂರು ಉವೈಸ್ ಸಖಾಫಿ ನಿಧನ

ಪುತ್ತೂರು : ಮಾಡನ್ನೂರು ಗ್ರಾಮದ ನಡುವಡ್ಕ ದಿ.ಅಬ್ಬಾಸ್ ಅವರ ಪುತ್ರ ಉವೈಸ್ ಸಖಾಫಿ ಹೃದಯಾಘಾತದಿಂದ ಫೆ.16ರಂದು ರಾತ್ರಿ ನಿಧನರಾದರು. ಇಸ್ಲಾಂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ ಇವರು ಎಲ್ಲರೊಂದಿಗೂ ಅತ್ಮೀಯತೆಯಿಂದ ಇರುತ್ತಿದ್ದರು. ಇವರ ಅಕಾಲಿಕ ನಿಧನದಿಂದ ಒಬ್ಬ ಮುಸ್ಲಿಂ ಧಾರ್ಮಿಕ ಗುರುವನ್ನು ಕಳೆದು ಕೊಂಡಂತಾಗಿದೆ. ಕುಂದಾಪುರ ತಾಲೂಕಿನ ಹಾಲಾಡಿ ಮಸೀದಿಯಲ್ಲಿ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಕುಂದಾಪುರ ವಲಯದ ತರಬೇತಿ ವಿಭಾಗದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಫೆ.16ರಂದು ಇತಿಹಾಸ ಪ್ರಸಿದ್ಧ ಬೆಳ್ತಂಗಡಿ ತಾಲೂಕಿನ ಕಾಜೂರು ದರ್ಗಾ …

ಮಾಡನ್ನೂರು ಉವೈಸ್ ಸಖಾಫಿ ನಿಧನ Read More »

ಬೆಳ್ತಂಗಡಿಯ ಇಂದಬೆಟ್ಟು : ಆಳವಾದ ಕಮರಿಗೆ ರಿಕ್ಷಾ ಬಿದ್ದು ಇಬ್ಬರು ಮಹಿಳೆಯರ ಸಾವು, ಮೂವರಿಗೆ ಗಾಯ

ಬೆಳ್ತಂಗಡಿ: ಇಲ್ಲಿನ ಇಂದಬೆಟ್ಟು ಪಡಂಬಿಲ ಪಾಲೆದಬೆಟ್ಟು ಎಂಬಲ್ಲಿ ವೇಗವಾಗಿ ಚಲಿಸುತ್ತಿದ್ದ ರಿಕ್ಷಾವೊಂದು ಸ್ಕಿಡ್ ಆಗಿ 25 ಅಡಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮರಣ ಹೊಂದಿದ್ದಾರೆ. ಮೃತಪಟ್ಟವರು ನಡ ಗ್ರಾಮದ ಕೊಲ್ಲೊಟ್ಟು ನಿವಾಸಿ ಹಾಜಿರಾಬಿ (55) ಮತ್ತು ಅದೇ ಗ್ರಾಮದ ಬೈಲು ದರ್ಕಾಸು ನಿವಾಸಿ ಸಾಜಿದಾಬಿ (56). ಇವರೆಲ್ಲ ಒಂದೇ ಕುಟುಂಬದ ನಿವಾಸಿಗಳಾಗಿದ್ದು ಮಮ್ತಾಝ್ (30), ಶೈನಾಝ್ (29) ಎಂಬವರು ಗಂಭೀರ ಗಾಯಗೊಂಡಿದ್ದು ಅವರನ್ನು …

ಬೆಳ್ತಂಗಡಿಯ ಇಂದಬೆಟ್ಟು : ಆಳವಾದ ಕಮರಿಗೆ ರಿಕ್ಷಾ ಬಿದ್ದು ಇಬ್ಬರು ಮಹಿಳೆಯರ ಸಾವು, ಮೂವರಿಗೆ ಗಾಯ Read More »

ಕಾಣಿಯೂರಿನ ಹಿರಿಯ ಕಾರು ಚಾಲಕ ಲಿಂಗಪ್ಪ ಗೌಡ ಪೈಕ ನಿಧನ

ಕಾಣಿಯೂರು: ಕಾಣಿಯೂರು ಗ್ರಾಮದ ಪುಣ್ಚತ್ತಾರು ಪೈಕ ನಿವಾಸಿ ಲಿಂಗಪ್ಪ ಗೌಡ (62ವ.)ರವರು ನಿಧನಹೊಂದಿದ್ದಾರೆ. ಮೂಲತಃ ಈಶ್ವರಮಂಗಲದ ಕೊಂಬೆಟ್ಟುದವರಾಗಿದ್ದು, ಪ್ರಸ್ತುತ ಲಿಂಗಪ್ಪರವರು ಪುಣ್ಚತ್ತಾರು ಪೈಕ ನಿವಾಸಿಯಾಗಿದ್ದರು. ಎಲ್ಲರೊಂದಿಗೆ ಆತ್ಮಿಯರಾಗಿದ್ದ ಮೃತರು 40 ವರ್ಷಗಳಿಂದ ಕಾಣಿಯೂರು- ಪುತ್ತೂರು ಮಧ್ಯೆ ಕಾರು ಚಾಲಕ ವೃತ್ತಿ ಮಾಡುತ್ತಿದ್ದು, ಹಿರಿಯ ಕಾರು ಚಾಲಕರೆಂದೇ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಹರಿಣಾಕ್ಷೀ, ಪುತ್ರರಾದ ಪ್ರಜ್ಞೇಶ್, ಯಜ್ಞೇಶ್, ಸಹೋದರರಾದ ಬಾಬು ಗೌಡ, ಸುಂದರ ಗೌಡ, ಆನಂದ ಗೌಡ, ಸಹೋದರಿ ಅಕ್ಕಯ್ಯ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ವಾಹನ ಸಂಚಾರ …

ಕಾಣಿಯೂರಿನ ಹಿರಿಯ ಕಾರು ಚಾಲಕ ಲಿಂಗಪ್ಪ ಗೌಡ ಪೈಕ ನಿಧನ Read More »

error: Content is protected !!
Scroll to Top