ಮಾ.1 : ಮುಕ್ಕೂರಿನಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

ಬೆಳ್ಳಾರೆ : ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ,‌‌ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ ಆಶ್ರಯದಲ್ಲಿ ಮಾ.1 ರಂದು ಬೆಳಗ್ಗೆ 8 ರಿಂದ ಸಂಜೆ‌ 4 ರ ತನಕ ಮುಕ್ಕೂರು ಶಾಲಾ ವಠಾರದಲ್ಲಿ‌‌ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ನಡೆಯಲಿದೆ. ಈ ಸಂದರ್ಭದಲ್ಲಿ ಆಧಾರ್ ಹೊಸ ನೋಂದಣಿ, ವಿಳಾಸ ಬದಲಾವಣೆ, ಜನ್ಮದಿನಾಂಕ ಬದಲಾವಣೆ, ಹೆಸರು ಬದಲಾವಣೆಗೆ ಅವಕಾಶ ಇದೆ. ಇದಕ್ಕಾಗಿ ಅಗತ್ಯ ದಾಖಲೆ ಪತ್ರಗಳನ್ನು ಸಲ್ಲಿಸಿ ಪ್ರಯೋಜನ ‌ಪಡೆದುಕೊಳ್ಳಬಹುದು.  ಪೂರ್ವಭಾವಿಯಾಗಿ ಫೆ.23 ರಂದು‌ ಮುಕ್ಕೂರು ಶಾಲೆಯಲ್ಲಿ ಅರ್ಜಿ‌ ವಿತರಣೆ ‌ಮತ್ತು‌ ಅರ್ಜಿ ಭರ್ತಿ ಮಾಡಿಕೊಡಲಾಗುವುದು.

ಬೆಳಗ್ಗೆ ಸಭಾ ಕಾರ್ಯಕ್ರಮವನ್ನು ಖ್ಯಾತ ವೈದ್ಯ ಡಾ: ನರಸಿಂಹ‌ ಶರ್ಮಾ ಕಾನಾವು ಉದ್ಘಾಟಿಸಲಿದ್ದಾರೆ. ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ‌ಕಾನಾವು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೆರುವಾಜೆ ಗ್ರಾ.ಪಂ. ಅಧ್ಯಕ್ಷೆ ಅನುಸೂಯ, ಸದಸ್ಯ ಉಮೇಶ್ ಕೆಎಂಬಿ, ಮುಕ್ಕೂರು ಹಾ.ಉ.ಸ.ಸಂಘದ ಅಧ್ಯಕ್ಷ ಕುಂಬ್ರ‌ ದಯಾಕರ ಆಳ್ವ,  ಸುಳ್ಯ ಉಪವಿಭಾಗ ‌ಅಂಚೆ ನಿರೀಕ್ಷಕ ಸುದೀಪ್ ‌ಕುಮಾರ್ ಬಿ,‌ ನೇಸರ ಯುವಕ ಮಂಡಲ‌ ಗೌರವಾಧ್ಯಕ್ಷ ಜಗನ್ನಾಥ ‌ಪೂಜಾರಿ ಮುಕ್ಕೂರು, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ‌ಅಧ್ಯಕ್ಷ ಪೂವಪ್ಪ ನಾಯ್ಕ‌ ಕೊಂಡೆಪ್ಪಾಡಿ ಭಾಗವಹಿಸಲಿದ್ದಾರೆ

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: