ಸುಳ್ಯ : ಇತಿಹಾಸ ಪ್ರಸಿದ್ಧ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಬ್ರಹ್ಮ ಶ್ರೀ ವೇ.ಮೂ.ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.13 ರಂದು ಪ್ರಾರಂಭಗೊಂಡಿದ್ದು ಫೆ.17ರಂದು ರಾತ್ರಿ ಅಗ್ನಿ ಗುಳಿಗ ದೈವದ ನೇಮೋತ್ಸವ ನಡೆಯಿತು.

ದೇವಸ್ಥಾನದ ಅರ್ಚಕ ಉದಯಕುಮಾರ್ ಕೆ.ಟಿ.ಪೂಜಾಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ,ಸದಸ್ಯರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ವಿಠಲದಾಸ್ ಎನ್.ಎಸ್.ಡಿ, ಜಯರಾಮ ಉಮಿಕ್ಕಳ,ಜನಾರ್ಧನ ಗೌರಿಹೊಳೆ,ನಾಗೇಶ್ ಕುಲಾಲ್ ತಡಗಜೆ,ಗುಣವತಿ ಶೆಟ್ಟಿ ಮಂಡೆಪು,ಶಶಿಕಲಾ ರೈ ಚಾವಡಿಬಾಗಿಲು ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.