ನಳೀಲು ಶ್ರೀ ಸುಬ್ರಹ್ಮಣ್ಯ ದೇವರ ಜಾತ್ರೆಗೆ ಗೊನೆ ಮುಹೂರ್ತ

0 2

ಪುತ್ತೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಹಾಗೂ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾ ಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಹಾಗೂ 29ನೇ ವರ್ಷದ ಸತ್ಯನಾರಾಯಣ ಪೂಜೆ,ಪರಿವಾರ ದೈವಗಳ ನೇಮೋತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.23 ಮತ್ತು ಫೆ 24 ರಂದು ನಡೆಯಲಿದೆ.ಇದರ ಪೂರ್ವಭಾವಿಯಾಗಿ ಫೆ.16ರಂದು ಗೊನೆ ಮುಹೂರ್ತ ನಡೆಯಿತು.

ದೇವಸ್ಥಾನದ ಅರ್ಚಕ ಹರಿನಾರಾಯಣ ಮನೋಳಿತ್ತಾಯ ಅವರು ಧಾರ್ಮಿಕ ವಿಽವಿದಾನ ನೆರವೇರಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು,ಮೊಕ್ತೇಸರರಾದ ಮೋಹನ್‌ದಾಸ್ ರೈ ನಳೀಲು,ಕಿಶೋರ್ ಕುಮಾರ್,ಅರುಣ ಕುಮಾರ್ ರೈ, ಸತೀಶ್ ರೈ ನಳೀಲು, ಪ್ರವೀಣ್ ಕುಮಾರ್,ಪಾಲ್ತಾಡು ನಡುಮನೆ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ನವೀನ್ ರೈ ನಡುಮನೆ,ಸುರೇಶ್ಚಂದ್ರ ರೈ ನಳೀಲು,ದೈವದ ಪರಿಚಾರಕರಾದ ಹರೀಶ್ ಮಡಿವಾಳ,ಬಾಲಕೃಷ್ಣ ಗೌಡ ಪೂಜಾರಿಮನೆ,ಉದಯ, ಮುಂಡಪ್ಪ ಪೂಜಾರಿ ಮೊದಲಾದವರಿದ್ದರು.

ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಬ್ರಹ್ಮ ಶ್ರೀ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಫೆ.೨೩ ,೨೪ರಂದು ನಡೆಯಲಿದ್ದು,ಇದರ ಪೂರ್ವಭಾವಿಯಾಗಿ ಹಸಿರುವಾಣಿ ಸಮರ್ಪಣೆ ಫೆ.೨೨ರಂದು ನಡೆಯಲಿದೆ. ಫೆ.೨೩ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ದೈವಗಳ ಭಂಡಾರ ತೆಗೆದ ಬಳಿಕ ವಲ್ಮೀಕ ರೂಪಿ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ ನಡೆಯಲಿದೆ.ಸಂಜೆ ೭ರಿಂದ ಗುರುಪ್ರಿಯಾ ಶಿವಾನಂದ ನಾಯಕ್ ನಿರ್ದೆಶನದಲ್ಲಿ ಗುರುಕು ಕಲಾಕೇಂದ್ರ ಪುತ್ತೂರು ತಂಡದ ಭಕ್ತಿ ಗೀತಾ ಗಾಯನ ನಡೆಯಲಿದೆ.ವಿಶೇಷ ಅತಿಥಿಯಾಗಿ ಕಲರ್ಸ್ ಕನ್ನಡ ಕನ್ನಡ ಕೋಗಿಲೆಯ ಅಪೇಕ್ಷಾ ಪೈ ಭಕ್ತಿ ಗೀತೆಗಳನ್ನು ಹಾಡಲಿದ್ದಾರೆ.ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ.೨೪ರಂದು ಪ್ರಾತಃ ಕಾಲ ವ್ಯಾಘ್ರ ಚಾಮುಂಡಿಯ ನೇಮೋತ್ಸವ,ಬೆಳಿಗ್ಗೆ ರುದ್ರ ಚಾಮುಂಡಿಯ ನೇಮೋತ್ಸವ ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯಲಿದೆ.

Leave A Reply