ವೀರಮಂಗಲ ಮಹಾವಿಷ್ಣು ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಸಂಪನ್ನ

0 8

ನರಿಮೊಗರು : ಶಾಂತಿಗೋಡು ಗ್ರಾಮದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಳದಲ್ಲಿ ವರ್ಷಾವಧಿ ಜಾತ್ರೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಿತು. ಜಾತ್ರೆ ಪ್ರಯುಕ್ತ ಫೆ.15ರಂದು ರಾತ್ರಿ ರಂಗ ಪೂಜೆ ನಡೆಯಿತು.

ಫೆ.16ರಂದು ಬೆಳಿಗ್ಗೆ ಗಣಪತಿ ಹವನ, ಸೀಯಾಳಾಭೀಷಕ, ಪವಮಾನಾಭಿಷೇಕ, ನವಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರಗಿತು.

ಫೆ.17 ರಂದು ನೇಮೋತ್ಸವ ನಡೆಯಿತು. ಫೆ.16ರಂದು ನಡೆದ ಮಧ್ಯಾಹ್ನ ಧಾರ್ಮಿಕ ಸಭೆಯಲ್ಲಿ ಪ್ರಾಧ್ಯಾಪಕ ಡಾ.ಶ್ರೀಶ ಕುಮಾರ್ ಧಾರ್ಮಿಕ ಉಪನ್ಯಾಸ ನೀಡಿದರು. ಉತ್ಸವ ಸಮಿತಿ ಗೌರವಾಧ್ಯಕ್ಷ ಶಿವರಾಮ ಭಟ್ ಬಾವ ಆಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತಾ„ಕಾರಿ ನಮಿತ ಪ್ರಕಾಶ್ ಉಪಸ್ಥಿತರಿದ್ದರು.

ದೇವಸ್ಥಾನದ ಕುಮಾರಧಾರಾ ಸಭಾಂಗಣಕ್ಕೆ 25 ಸಾವಿರಕ್ಕಿಂತ ಅ„ಕ ಮೊತ್ತದ ದೇಣಿಗೆ ನೀಡಿದ ಉತ್ಸವ ಸಮಿತಿಯ ಗೌರವಾಧ್ಯಕ್ಷ ಶಿವರಾಮ ಭಟ್ ಬಾವ,ಲೀಲಾವತಿ ರಘುನಾಥ ನಾೈಕ್,ಪದ್ಮನಾಭ ಗೌಡ ಗುತ್ತು ಅವರನ್ನು ಗೌರವಿಸಲಾಯಿತು. ಸ್ನೇಹ ಬಲ್ಯಾಯ ಪ್ರಾರ್ಥಿಸಿದರು. ಉತ್ಸವ ಸಮಿತಿಯ ಅಧ್ಯಕ್ಷ ಬೆಳಿಯಪ್ಪ ಗೌಡ ಪೆಲತ್ತಡಿ ಸ್ವಾಗತಿಸಿದರು.ದೇವಸ್ಥಾನದ ವಿಶ್ವಸ್ತ್ಯ ಮಂಡಳಿಯ ಅಧ್ಯಕ್ಷ ಇ.ಎಸ್.ವಾಸುದೇವ ಇಡ್ಯಾಡಿ ವಂದಿಸಿದರು. ಜಗನ್ನಾಥ ರೈ ಆನಾಜೆ, ರಘುನಾಥ ವೀರಮಂಗಲ ಮತ್ತು ಜಾನಕಿ ಹೊಸಮನೆ ಅತಿಥಿಗಳನ್ನು ತಾಂಬೂಲ ನೀಡಿ ಗೌರವಿಸಿದರು. ಉಮೇಶ್ ಕೋಡಿಬೈಲು ಕಾರ್ಯಕ್ರಮ ನಿರೂಪಿಸಿದರು.ವಸಂತ ಎಸ್‍ವೀರಮಂಗಲ,ಗೋಪಾಲಕೃಷ್ಣ ವೀರಮಂಗಲ ಸಹಕರಿಸಿದರು.

Leave A Reply