Day: February 9, 2020

ಪುತ್ತೂರಿನ ವಿಡಿಯೋಗ್ರಾಫರ್ ಪ್ರಸನ್ನ ಅಜೇಯನಗರ ಆತ್ಮಹತ್ಯೆ

ಪುತ್ತೂರು: ನೆಹರುನಗರ ಅಜೇಯನಗರ ನಿವಾಸಿ ದಿ.ಬಾಬು ಗೌಡರ ಪುತ್ರ ವಿಡಿಯೋಗ್ರಾಫರ್ ಪ್ರಸನ್ನ ಅಜೇಯನಗರ(35ವ) ಫೆ. 9ರಂದು ರಾತ್ರಿ ಆತ್ಮಹತ್ಯೆ ‌ಮಾಡಿ ಕೊಂಡಿರುವ ಮಾಹಿತಿ ಲಭ್ಯವಾಗಿದೆ. ಪ್ರಸನ್ನ ಅಜೇಯನಗರ ಹಲವು ವರ್ಷಗಳಿಂದ ವಿಡಿಯೋಗ್ರಾಫರ್ ಆಗಿದ್ದು, ವಿಡಿಯೋಗ್ರಾಫರ್ ಅಸೋಸಿಯೇಷನ್ನಿನ ಸದಸ್ಯರಾಗಿದ್ದರು. ಅಲ್ಲದೆ ಸಂಘಪರಿವಾರದ ಜೊತೆ ಗುರುತಿಸಿ ಕೊಂಡಿದ್ದರು. ಆತ್ಮಹತ್ಯೆಗೆ ಖಚಿತ ಕಾರಣ ತಿಳಿದುಬಂದಿಲ್ಲ. ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ.

ಕಾರಿಂಜ ಕ್ಷೇತ್ರದಲ್ಲಿ ಕಳವಳ : ಕೆರೆಯಲ್ಲಿ ಮುಳುಗಿ ಸಿದ್ದಕಟ್ಟೆಯ ಯುವಕ ಮೃತ್ಯು

ಬಂಟ್ವಾಳ : ಗೆಳೆಯರೊಂದಿಗೆ ಕಾರಿಂಜದ ದೇವಸ್ಥಾನ ಕ್ಕೆ ಹೋಗಿದ್ದ ಯುವಕನೋರ್ವ ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಫೆ.9ರಂದು ನಡೆದಿದೆ. ಸಿದ್ದಕಟ್ಟೆಯ ವಕ್ಕಾಡಗೋಳಿ ನಿವಾಸಿ ಸೇಸಪ್ಪ ಎಂಬವರ ಪುತ್ರ ಸುಕೇಶ್ ಮೃತ ದುರ್ದೈವಿ. ಆದಿತ್ಯವಾರ ರಜಾದಿನವಾದರಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಕಾರಿಂಜದ ದೇವಾಲಯ ಕ್ಕೆ ಬಂದಿದ್ದರು. ಕಾಲು ತೊಳೆಯಲೆಂದು ಕೆರೆಯ ನೀರಿಗೆ ಇಳಿದಾಗ ಮುಳುಗಿದ್ದಾನೆ‌ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿ ಮೃತದೇಹವನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಪುಂಜಾಲಕಟ್ಟೆಯ ಪೋಲಿಸರು ಪ್ರಕರಣವನ್ನು ದಾಖಲಿಕೊಂಡು ತನಿಖೆ ನಡೆಸುತ್ತಿದ್ದಾರೆ. …

ಕಾರಿಂಜ ಕ್ಷೇತ್ರದಲ್ಲಿ ಕಳವಳ : ಕೆರೆಯಲ್ಲಿ ಮುಳುಗಿ ಸಿದ್ದಕಟ್ಟೆಯ ಯುವಕ ಮೃತ್ಯು Read More »

ಹೊಸಮಠ ಸಿ.ಎ.ಬ್ಯಾಂಕ್: ಸಹಕಾರ ಭಾರತಿ ಕ್ಲೀನ್‌ಸ್ವೀಪ್

ಕಡಬ: ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಫೆ.9ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಎಲ್ಲಾ 12 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಒಟ್ಟು 12 ಸ್ಥಾನಗಳಿಗೆ ಒಟ್ಟು 20 ಅಭ್ಯರ್ಥಿಗಳು ಕಣದಲ್ಲಿದ್ದರು. ಪರಿಶಿಷ್ಠ ಪಂಗಡ 1 ಸ್ಥಾನಕ್ಕೆ ನೀಲಯ್ಯ ಮಲೆಕುಡಿಯ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದಿತ್ಯವಾರ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲೂ ಸಹಕಾರ ಭಾರತಿ ಬೆಂಬಲಿಗರು ಆಯ್ಕೆಯಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ 19 ಅಭ್ಯರ್ಥಿಗಳು ಪಡೆದ ಮತಗಳ ವಿವರ: ಸಾಲಗಾರ ಸಾಮಾನ್ಯ ಸ್ಥಾನ ಸಹಕಾರ …

ಹೊಸಮಠ ಸಿ.ಎ.ಬ್ಯಾಂಕ್: ಸಹಕಾರ ಭಾರತಿ ಕ್ಲೀನ್‌ಸ್ವೀಪ್ Read More »

ಅಮೈಗುತ್ತು ಪೊನ್ನಕ್ಕ ನಿಧನ

ಪೊನ್ನಕ್ಕ ಅಮೈಗುತ್ತು ಪುತ್ತೂರು: ಕಡಬ ತಾಲೂಕು ಬೆಳಂದೂರು ಗ್ರಾಮದ ಅಮೈಗುತ್ತು ದಿ.ದಾಸಪ್ಪ ಗೌಡರ ಪತ್ನಿ ಪೊನ್ನಕ್ಕ ಫೆ.7ರಂದು ನಿಧನರಾದರು. ಮೃತರು 5 ಪುತ್ರರು,ಓರ್ವ ಪುತ್ರಿಯನ್ನು ಹಾಗೂ ಮೊಮ್ಮಕ್ಕಳನ್ನು,ಮರಿಮಕ್ಕಳನ್ನು ಅಮೈಗುತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಕ್ರೀಡಾಕೂಟದ ಆಮಂತ್ರಣ ಬಿಡುಗಡೆ

ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಕ್ರೀಡಾಕೂಟದ ಆಮಂತ್ರಣ ಬಿಡುಗಡೆ ಪುತ್ತೂರು: ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಮಾ.1ರಂದು ನೆಹರು ನಗರ ಸುದಾನ ವಸತಿ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು,ಇದರ ಆಮಂತ್ರಣ ಬಿಡುಗಡೆ ಕುಲಾಲ ಸಹಕಾರ ಭವನದಲ್ಲಿ ಆದಿತ್ಯವಾರ ನಡೆಯಿತು. ಕುಲಾಲ ಸಂಘದ ಅಧ್ಯಕ್ಷ ಕೃಷ್ಣಪ್ಪ ಕೆ,ಕಾರ್ಯದರ್ಶಿ ಮಹೇಶ್ ಕೆ.ಸವಣೂರು ,ಉಪಾಧ್ಯಕ್ಷ ಕೃಷ್ಣ ಎಂ ಅಳಿಕೆ,ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ದಿನಕರ್,ರೇಷ್ಮಾ ವಸಂತ್ ನೆಹರು ನಗರ,ಸುಧಾಕರ ಕುಲಾಲ್, ಧರ್ಣಪ್ಪ ಮೂಲ್ಯ …

ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಕ್ರೀಡಾಕೂಟದ ಆಮಂತ್ರಣ ಬಿಡುಗಡೆ Read More »

ಇದ್ಪಾಡಿಯಲ್ಲಿ ಸಾರ್ವಜನಿಕ ಶ್ರೀ ದುರ್ಗಾಪೂಜೆ, ಮಾರಿ ಪೂಜೆ

ಇದ್ಪಾಡಿಯಲ್ಲಿ ಸಾರ್ವಜನಿಕ ಶ್ರೀ ದುರ್ಗಾಪೂಜೆ, ಮಾರಿ ಪೂಜೆ ಪುತ್ತೂರು: ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಶ್ರೀ ಶಿರಾಡಿ ದೈವಸ್ಥಾನ ಇದ್ಪಾಡಿ ಮಂಜಕೊಟ್ಯ ಇದರ ವಾರ್ಷಿಕ ಮಾರಿ ನೇಮೋತ್ಸವ ವಿಜ್ರಂಬಣೆಯಿಂದ ನಡೆಯಿತು. ಶನಿವಾರ ಸಂಜೆ ವೇದಮೂರ್ತಿ ಕೆ.ಕೃಷ್ಣಕುಮಾರ್ ಉಪಾಧ್ಯಾಯ ಪಟ್ಲಮೂಲೆ ಇವರ ನೇತೃತ್ವದಲ್ಲಿ ಶ್ರೀ ದುರ್ಗಾಪೂಜೆ ಬಳಿಕ ಸಭಾ ಕಾರ್ಯಕ್ರಮ, ಸನ್ಮಾನ ನಡೆಯಿತು. ಶ್ರೀ ಶಿರಾಡಿ ಭಕ್ತವೃಂದದ ಅಧ್ಯಕ್ಷ ಜಗದೀಶ್ ಅಮೀನ್ ಮಾರುತಿಪುರರವರ ಸಭಾಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಅವರು ದುರ್ಗಾಪೂಜೆಯ ಮಹತ್ವ ಎಂಬ …

ಇದ್ಪಾಡಿಯಲ್ಲಿ ಸಾರ್ವಜನಿಕ ಶ್ರೀ ದುರ್ಗಾಪೂಜೆ, ಮಾರಿ ಪೂಜೆ Read More »

ಕರಿಂಜೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆ

ಕರಿಂಜೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆ ಪುತ್ತೂರು: ಮೂಡಬಿದಿರೆ ಕರಿಂಜಿ ಶ್ರೀ ಲಕ್ಷ್ಮೀನಾರಾಯಣ ವೀರಾಂಜನೇಯ ಸ್ವಾಮಿ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕಲಶಾಭಿಷೇಕ ಹಾಗೂ ಅಷ್ಟಪವಿತ್ರ ನಾಗಮಂಡಲ ಕಾರ್ಯಕ್ರಮದ ಸಲುವಾಗಿ ಫೆ.9 ರಂದು ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ನಡೆಯಿತು. ಮೂಡಬಿದಿರೆಯ ಕರಿಂಜೆ ಓಂ ಶ್ರೀ ಶಕ್ತಿಗುರುಮಠ ಶ್ರೀ ಜಗದ್ಗುರು ರಾಘವೇಂದ್ರ ಪೀಠದಲ್ಲಿ ಫೆ 9 ರಿಂದ 19 ರ ವರೆಗೆ ನಡೆಯಲಿರುವ ನೂತನ ಗರ್ಭಗುಡಿಯಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ ಅಷ್ಟಬಂಧ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ …

ಕರಿಂಜೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆ Read More »

ಪ್ರೇಮಿಗಳ ದಿನಾಚರಣೆ ಮಾಡುವ ಬದಲು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸೋಣ

✍ ಭಾಸ್ಕರ ಜೋಗಿಬೆಟ್ಟು ಭಾರತ ದೇಶವು ಪುಣ್ಯ ಭೂಮಿ. ವೈಶಿಷ್ಟ್ಯವಾದ ಸಂಸ್ಕೃತಿ – ಸಂಸ್ಕಾರವನ್ನು ನಮ್ಮ ದೇಶ ಹೊಂದಿದೆ. ಅಲ್ಲದೆ ನಮ್ಮ ಸಂಸ್ಕೃತಿ, ಆಚರಣೆಗಳಿಗೆ ಅದರದ್ದೆ ಆದ ಮಹತ್ವವಿದ್ದು,ಶತಮಾನಗಳ ಇತಿಹಾಸ ಹೊಂದಿದೆ. ಅಲ್ಲದೆ ಪ್ರತಿಯೊಂದು ಆಚರಣೆಗು ಅದರದ್ದೆ ಆದ ಮೂಲ ತತ್ವ ಸಿದ್ಧಾಂತಗಳಿವೆ. ಅದಾಗ್ಯೂ ಭಾರತೀಯ ಸಂಸ್ಕೃತಿಗೆ ಸಡ್ಡು ಹೊಡೆಯುತ್ತಾ ಪಾಶ್ಚಾತ್ಯ ಸಂಸ್ಕೃತಿಗಳು ದಾಳಿ ಮಾಡುತ್ತಿವೆ. ಯುವ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿವೆ. ಒಳಗೊಳಗೆ ನಮ್ಮ ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವುದು ಬೇಸರದ ಸಂಗತಿ. ನಮ್ಮ …

ಪ್ರೇಮಿಗಳ ದಿನಾಚರಣೆ ಮಾಡುವ ಬದಲು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸೋಣ Read More »

ಉಜಿರೆ SDM ನ ಸಹಾಯಕ ಪ್ರಾಧ್ಯಾಪಿಕೆ ಬೆದ್ರೋಡಿಯಲ್ಲಿ ಲಾರಿ-ಕಾರ್ ಅಪಘಾತದಲ್ಲಿ ಸಾವು

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿ ಎಂಬಲ್ಲಿ ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ಭೀಕರ ಅಪಘಾತ ನಡೆದಿದ್ದು ಇಬ್ಬರು ಮೃತಪಟ್ಟು ಒರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತಪಟ್ಟವರನ್ನು ನೆಲ್ಯಾಡಿಯ ಉದ್ಯಮಿ ಯು.ಪಿ ವರ್ಗೀಸ್ ಅವರ ಸೊಸೆ ಕಾಂಚನ ನಿವಾಸಿ ಶಾಜಿ ಎಂಬವರ ಪತ್ನಿ ಡಾ. ಜೈನೀ ಶಾಜಿ (30) ಮತ್ತು ಜಿಸನ್ (40) ಎಂಬವರು ಎಂದು ಗುರುತಿಸಲಾಗಿದೆ. ಡಾ. ಜೈನೀ ಶಾಜಿ ಯವರು ಉಜಿರೆಯ ನ್ಯಾಚುರೋಪತಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ …

ಉಜಿರೆ SDM ನ ಸಹಾಯಕ ಪ್ರಾಧ್ಯಾಪಿಕೆ ಬೆದ್ರೋಡಿಯಲ್ಲಿ ಲಾರಿ-ಕಾರ್ ಅಪಘಾತದಲ್ಲಿ ಸಾವು Read More »

ಈಶ್ವರಮಂಗಲ : ಶ್ರೀಪಂಚಲಿಂಗೇಶ್ವರ ದೇವರ ಜಾತ್ರೆಗೆ ಗೊನೆಮುಹೂರ್ತ

ಈಶ್ವರಮಂಗಲ : ಶ್ರೀಪಂಚಲಿಂಗೇಶ್ವರ ದೇವರ ಜಾತ್ರೆಗೆ ಗೊನೆಮುಹೂರ್ತ ಪುತ್ತೂರು : ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವರ ವರ್ಷಾವಽ ಜಾತ್ರೋತ್ಸವವು ಫೆ.19ರಿಂದ ಫೆ.27ರವರೆಗೆ ನಡೆಯಲಿದ್ದು,ಇದರ ಪೂರ್ವಕಾರ್ಯಕ್ರಮದ ಅಂಗವಾಗಿ ಗೊನೆಮುಹೂರ್ತವು ಶಂಕರ ಮುಖಾರಿ ಅವರ ತೋಟದಲ್ಲಿ ಶನಿವಾರ ನಡೆಯಿತು. ಅರ್ಚಕ ರವೀಂದ್ರ ಮಾನಿಲತ್ತಾಯ,ಸುಬ್ರಹ್ಮಣ್ಯ ರಾವ್,ಉತ್ಸವ ಸಮಿತಿ ಅಧ್ಯಕ್ಷ ನಡುಬಲು ಸದಾಶಿವ ರೈ,ಕಾರ್ಯದರ್ಶಿ ಮುಂಡ್ಯ ದೀಪಕ್ ಕುಮಾರ್,ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ರವಿಕಿರಣ್ ಸೆಟಇ ಬೆದ್ರಾಡಿ,ಪ್ರಮುಖರಾದ ಚಿನ್ಮಯ್ ರೈ ಈಶ್ವರಮಂಗಲ,ಆನಂದ ರೈ ಸಾಂತ್ಯ,ರತನ್ ಕುಮಾರ್ ರೈ ಕರ್ನೂರುಗುತ್ತು,ನಾರಾಯಣ ರೈ ಅಂಕೊತ್ತಿಮಾರು,ರಾಮ ಮೇನಾಲ,ಚಲ್ಲ ಮೇನಾಲ,ಉದಯ …

ಈಶ್ವರಮಂಗಲ : ಶ್ರೀಪಂಚಲಿಂಗೇಶ್ವರ ದೇವರ ಜಾತ್ರೆಗೆ ಗೊನೆಮುಹೂರ್ತ Read More »

error: Content is protected !!
Scroll to Top