ಹೊಸಮಠ ಸಿ.ಎ.ಬ್ಯಾಂಕ್: ಸಹಕಾರ ಭಾರತಿ ಕ್ಲೀನ್‌ಸ್ವೀಪ್

0 10

ಕಡಬ: ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಫೆ.9ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಎಲ್ಲಾ 12 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಒಟ್ಟು 12 ಸ್ಥಾನಗಳಿಗೆ ಒಟ್ಟು 20 ಅಭ್ಯರ್ಥಿಗಳು ಕಣದಲ್ಲಿದ್ದರು. ಪರಿಶಿಷ್ಠ ಪಂಗಡ 1 ಸ್ಥಾನಕ್ಕೆ ನೀಲಯ್ಯ ಮಲೆಕುಡಿಯ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದಿತ್ಯವಾರ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲೂ ಸಹಕಾರ ಭಾರತಿ ಬೆಂಬಲಿಗರು ಆಯ್ಕೆಯಾಗಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದ 19 ಅಭ್ಯರ್ಥಿಗಳು ಪಡೆದ ಮತಗಳ ವಿವರ: ಸಾಲಗಾರ ಸಾಮಾನ್ಯ ಸ್ಥಾನ ಸಹಕಾರ ಭಾರತೀಯ ಶಶಾಂಕ ಗೋಖಲೆ ಮಾರ್ಗದಮನೆ(548), ಶಿವಪ್ರಸಾದ್ ಪಿ.ವಿ(484), ಜಯಚಂದ್ರ ರೈ.ಕೆ,(503), ಕೃಷ್ಣಪ್ಪ ದೇವಾಡಿಗ(474), ಪದ್ಮಯ್ಯ ಪೂಜಾರಿ(469), ಕಾಂಗ್ರೆಸ್ ಬೆಂಬಲಿತ ಕೊರಗಪ್ಪ ಗೌಡ ಪುಳಿತ್ತಡಿ(235), ಸತೀಶ್ಚಂದ್ರ ಶೆಟ್ಟಿ ಬಿರುಕ್ಕು(213), ಹರೀಶ್ ರೈ ಹಳ್ಳಿ(213) ಸಾಲಗಾರ ಕ್ಷೇತ್ರ ಮಹಿಳೆ ಸಹಕಾರ ಭಾರತೀಯ ಅಭ್ಯರ್ಥಿಗಳಾದ ಸವಿತಾ ಸಿ.ಜೆ(445), ಸೀತಮ್ಮ ಹಳ್ಳಿ(455), ಕಾಂಗ್ರೆಸ್ ಬೆಂಬಲಿತ ಜಯಂತಿ(238) ಹಿಂದುಳಿದ ವರ್ಗ ಎ ಸಹಕಾರ ಭಾರತೀಯ ಅಭ್ಯರ್ಥಿ ಕುಶ ಕುಮಾರ(461), ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುದೀರ್ ದೇವಾಡಿಗ(216) ಹಿಂದುಳಿದ ವರ್ಗ ಬಿ ಸಹಕಾರ ಭಾರತೀಯ ಅಭ್ಯರ್ಥಿ ಸೀತಾರಾಮ ಡಿ.ಪಿ(427), ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬೆಳ್ಯಪ್ಪ ಗೌಡ, ಎಂ.(245) ಸಾಲಗಾರ ಕ್ಷೇತ್ರ ಪರಿಶಿಷ್ಟ ಜಾತಿ ಸಹಕಾರ ಭಾರತಿಯ ಅಭ್ಯರ್ಥಿ ಕುಕ್ಕ ನಾಡೋಳಿ(449), ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ತನಿಯ ಮುಗೇರ(233) ಸಾಲಗಾರರಲ್ಲದ ಕ್ಷೇತ್ರ ಸಹಕಾರ ಭಾರತೀಯ ಜಗನ್ನಾಥ ಗುಂಡಿಜಾಲು(106 ಕಾಂಗ್ರೆಸ್ ಬೆಂಬಲಿತ ಅನಿಲ್ ವರ್ಗೀಸ್ (43).

Leave A Reply