ಪ್ರೇಮಿಗಳ ದಿನಾಚರಣೆ ಮಾಡುವ ಬದಲು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸೋಣ

✍ ಭಾಸ್ಕರ ಜೋಗಿಬೆಟ್ಟು

ಭಾರತ ದೇಶವು ಪುಣ್ಯ ಭೂಮಿ. ವೈಶಿಷ್ಟ್ಯವಾದ ಸಂಸ್ಕೃತಿ – ಸಂಸ್ಕಾರವನ್ನು ನಮ್ಮ ದೇಶ ಹೊಂದಿದೆ. ಅಲ್ಲದೆ ನಮ್ಮ ಸಂಸ್ಕೃತಿ, ಆಚರಣೆಗಳಿಗೆ ಅದರದ್ದೆ ಆದ ಮಹತ್ವವಿದ್ದು,ಶತಮಾನಗಳ ಇತಿಹಾಸ ಹೊಂದಿದೆ. ಅಲ್ಲದೆ ಪ್ರತಿಯೊಂದು ಆಚರಣೆಗು ಅದರದ್ದೆ ಆದ ಮೂಲ ತತ್ವ ಸಿದ್ಧಾಂತಗಳಿವೆ. ಅದಾಗ್ಯೂ ಭಾರತೀಯ ಸಂಸ್ಕೃತಿಗೆ ಸಡ್ಡು ಹೊಡೆಯುತ್ತಾ ಪಾಶ್ಚಾತ್ಯ ಸಂಸ್ಕೃತಿಗಳು ದಾಳಿ ಮಾಡುತ್ತಿವೆ. ಯುವ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿವೆ. ಒಳಗೊಳಗೆ ನಮ್ಮ ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವುದು ಬೇಸರದ ಸಂಗತಿ. ನಮ್ಮ ಅಮೂಲ್ಯವಾದ ಸಂಸ್ಕೃತಿ, ಆಚರಣೆ, ಪದ್ಧತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಪ್ರೇಮಿಗಳ ದಿನಾಚರಣೆ.

ಏನಿದು ಪ್ರೇಮಿಗಳ ದಿನಾಚರಣೆ ?

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ರೋಮನ್ ದೊರೆಗಳ ಕೈಯಲ್ಲಿ ಕೊಲ್ಲಲ್ಪಟ್ಟ ಕ್ರೈಸ್ತ ಸಂತರೆ ಹುತಾತ್ಮರು ಅಥಾವ ವ್ಯಾಲೆಂಟೈನ್. ವ್ಯಾಲೆಂಟೈನ್ ಮೂಲದಿಂದ ವ್ಯಾಲೆಂಟೈನ್ ಡೇ ಅಥಾವ ಪ್ರೇಮಿಗಳ ದಿನಾಚರಣೆ ಎಂದು ಕರೆಯುತ್ತಾರೆ.

ಪ್ರೇಮಿಗಳ ದಿನಾಚರಣೆಗೂ ಕ್ರೈಸ್ತ ಸಂತರಿಗೂ ಯಾವುದೆ ಸಂಬಂಧವಿಲ್ಲ…!! ಆದರೂ ಇಂದಿನ ಸಮುದಾಯ ಈ ಅರ್ಥವಿಲ್ಲದ ಆಚರಣೆಯನ್ನು ಆಚರಿಸುವುದು ಯಾಕೆ ? ಇದೊಂದು ಮೂರ್ಖತನದ ಪರಮಾವಧಿಯಲ್ಲವೆ….!!

ದಾಳಿ ಫೆಬ್ರವರಿ 14,2019 ಭಾರತೀಯರ ಮನಸ್ಸಿನಲ್ಲಿ ಮರೆಯಲಾಗದ ಕಹಿ ಘಟನೆಯಾದ ದಿನವಾಗಿದೆ. ಜೈಷ್ – ಎ – ಮೊಹಮ್ಮದ್ ಎಂಬ ಉಗ್ರಗಾಮಿ ಸಂಘಟನೆ ಈ ದಾಳಿಯನ್ನು ಹೊತ್ತುಕೊಂಡಿತು. ಆದಿಲ್ ಅಹ್ಮದ್ ಧರ್ ಎಂಬ ಉಗ್ರನು ಸೇನಾ ವಾಹನದ ಮೇಲೆ ಎರಗಿ ಆತ್ಮಾಹುತಿ ದಾಳಿ ನಡೆಸಿದ್ದನು. ಇದರಲ್ಲಿ 40 ಹೆಚ್ಚು ಸೈನಿಕರು ಹುತಾತ್ಮರಾದರು.

ಯಾವುದೇ ಅರ್ಥವಿಲ್ಲದ, ನಮ್ಮ ಪವಿತ್ರವಾದ ಸಂಸ್ಕೃತಿಯನ್ನು ಅಪವಿತ್ರರನ್ನಾಗಿಸುವ ಆಚರಣೆಗಳನ್ನು ಮಾಡದೆ , ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸೋಣ. ನಾವು ಇಷ್ಟು ಸುರಕ್ಷಿತವಾಗಿ ಇರಬೇಕಾದರೆ ತನ್ನ ಜೀವವನ್ನೆ ಮುಡಿಪಾಗಿಟ್ಟು ಗಡಿ ಕಾಯುವ ಸೈನಿಕರೆ ಕಾರಣ. ಆದುದರಿಂದ ಫೆಬ್ರವರಿ ೧೪ ರಂದು ಪುಲ್ವಾಮ ದಾಳಿಯಲ್ಲಿ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸೋಣ.

ಅಲ್ಲದೆ ದಿನವನ್ನು ‌ಹುತಾತ್ಮರ ದಿನವನ್ನಾಗಿ ಆಚರಿಸೋಣ. ಇದಲ್ಲವೆ ನಾವು ನಮ್ಮ ಸೈನಿಕರಿಗೆ ಕೊಡುವ ಗೌರವ…? ನಮ್ಮ ಸಂಸ್ಕೃತಿ ಉಳಿಸೋಣ – ಬೆಳೆಸೋಣ.

Leave a Reply

error: Content is protected !!
Scroll to Top
%d bloggers like this: