ಉಜಿರೆ SDM ನ ಸಹಾಯಕ ಪ್ರಾಧ್ಯಾಪಿಕೆ ಬೆದ್ರೋಡಿಯಲ್ಲಿ ಲಾರಿ-ಕಾರ್ ಅಪಘಾತದಲ್ಲಿ ಸಾವು

0 11

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿ ಎಂಬಲ್ಲಿ ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ಭೀಕರ ಅಪಘಾತ ನಡೆದಿದ್ದು ಇಬ್ಬರು ಮೃತಪಟ್ಟು ಒರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮೃತಪಟ್ಟವರನ್ನು ನೆಲ್ಯಾಡಿಯ ಉದ್ಯಮಿ ಯು.ಪಿ ವರ್ಗೀಸ್ ಅವರ ಸೊಸೆ ಕಾಂಚನ ನಿವಾಸಿ ಶಾಜಿ ಎಂಬವರ ಪತ್ನಿ ಡಾ. ಜೈನೀ ಶಾಜಿ (30) ಮತ್ತು ಜಿಸನ್ (40) ಎಂಬವರು ಎಂದು ಗುರುತಿಸಲಾಗಿದೆ.

ಡಾ. ಜೈನೀ ಶಾಜಿ ಯವರು ಉಜಿರೆಯ ನ್ಯಾಚುರೋಪತಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.

ಸರ್ವೀನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಜಿಸನ್ ಎಂಬವರು ಧರ್ಮಗುರುದೀಕ್ಷೆ ಪಡೆಯಲು ತರಬೇತಿಯಲ್ಲಿದ್ದರು.

ಇವರು ಉಪ್ಪಿನಂಗಡಿ ಕಡೆ ಸಂಚರಿಸುವಾಗ ವಿರುದ್ಧ ದಿಕ್ಕಿನಲ್ಲಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

ನಜ್ಜುಗುಜ್ಜಾದ ಕಾರು

ಪರಸ್ಪರ ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೋಲೀಸರು ಹಾಗೂ ಪುತ್ತೂರು ಸಂಚಾರಿ ಪೋಲೀಸರು ಆಗಮಿಸಿ ಮಾಹಿತಿ ಪಡೆಯುತ್ತಿದ್ದಾರೆ.

Leave A Reply