Day: February 8, 2020

ಲಾರಿ ಹರಿದು ವ್ಯಕ್ತಿಯ ಸಾವು

ಬೆಂಗಳೂರು, ಫೆ.8: ಲಾರಿಯೊಂದು ರಸ್ತೆಯ ಬದಿಯಲ್ಲಿ ಮಲಗಿದ್ದ ಕಾರ್ಮಿಕ ನ ಮೇಲೆ ಹರಿದು ಆತ ಮೃತಪಟ್ಟ ಘಟನೆ ಬೆಂಗಳೂರಿನ ರಾಜಾಜಿನಗರ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಚಾಮರಾಜನಗರದ ಮನೋಜ್ ಕುಮಾರ್(27) ಮೃತ ಕಾರ್ಮಿಕ ಎಂದು ಗುರುತಿಸಲಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಂಪ್‌ವೆಲ್ ಕಾರು ಪಲ್ಟಿ: ಗಾಯಾಳು ಪ್ರವೀಣ್ ಫರ್ನಾಂಡೀಸ್ ಮೃತ್ಯು

ಪಂಪ್‌ವೆಲ್ ಕಾರು ಪಲ್ಟಿ: ಗಾಯಾಳು ಪ್ರವೀಣ್ ಫರ್ನಾಂಡೀಸ್ ಮೃತ್ಯು ಮಂಗಳೂರು: ಮಂಗಳೂರು ಪಂಪ್‌ವೆಲ್‌ ಹೊಸ ಫ್ಲೈ ಓವರ್ ನಲ್ಲಿ ಕಾರೊಂದು ಪಲ್ಟಿಯಾದ ಘಟನೆ ಫೆ.8 ರ ಸಂಜೆ ನಡೆದಿತ್ತು.ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪ್ರವೀಣ್ ಫರ್ನಾಂಡೀಸ್ ಆಸ್ಪತ್ರೆಯಲ್ಲಿ ನಿಧನರಾದರು. ವೇಗದ ಕಾರು ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವೇಗವಾಗಿ ಬಂದ ಕಾರು ಡಿವೈಡರ್ ಗೆ ಬಡಿದು ಆನಂತರ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ನಂತರ ಅಲ್ಲಿಂದ ಕೆಳಕ್ಕೆ ಬಿದ್ದು,ಗಂಭೀರ ಗಾಯಗೊಂಡಿದ್ದ ನಂತೂರಿನಲ್ಲಿ ಸ್ವಾಗತ್ ಗ್ಯಾರೇಜ್ ಹಾಕಿಕೊಂಡಿರುವ, ಬಜಾಲ್ …

ಪಂಪ್‌ವೆಲ್ ಕಾರು ಪಲ್ಟಿ: ಗಾಯಾಳು ಪ್ರವೀಣ್ ಫರ್ನಾಂಡೀಸ್ ಮೃತ್ಯು Read More »

ಬೆಳಾಲು ಅರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಫೆ 9 ರಿಂದ ಫೆ 15 ರವರೆಗೆ ಬ್ರಹ್ಮಕಲಶೋತ್ಸವದ ಸಂಭ್ರಮ

ಬೆಳ್ತಂಗಡಿ ತಾಲೂಕು, ಬೆಳಾಲು ಗ್ರಾಮದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಳೆ 09/02/20 ರಿಂದ ಆರಂಭವಾಗುವ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು 15/02/20 ರವರೆಗೆ ನಡೆಯಲಿದೆ. ಬ್ರಹ್ಮಕಲಶೋತ್ಸವದ ಅಂಗವಾಗಿ ತಾರೀಕು 10/02/20, ಸೋಮವಾರದಂದು ರಾತ್ರಿ 9:30 ಕ್ಕೆ ವಿಷ್ಣು ಕಲಾವಿದರು ಮದ್ದಡ್ಕ ಇವರ ಅಭಿನಯದ ಶ್ರೀ ಕ್ಷೇತ್ರ ಆರಿಕೊಡಿ ಶ್ರೀ ಚಾಮುಂಡೇಶ್ವರಿ ಚರಿತ್ರೆ ಎಂಬ ಭಕ್ತಿಪ್ರಧಾನ ಜಾನಪದ ಶೈಲಿಯ ನಾಟಕ ಪ್ರದರ್ಶನ ನಡೆಯಲಿದೆ., ಭಕ್ತಾದಿಗಳು ಮತ್ತು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಚಾಮುಂಡೇಶ್ವರಿಯ ಆಶೀರ್ವಾದವನ್ನು ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.

ಅರಂತೋಡಿನಲ್ಲಿ ಬೈಕ್ – ಬಸ್ ಢಿಕ್ಕಿ, ಬೈಕ್ ಸವಾರ ಮೃತ್ಯು, ಇನ್ನೋರ್ವ ಗಂಭೀರ

ಅರಂತೋಡಿನಲ್ಲಿ ಬೈಕ್ – ಬಸ್ ಢಿಕ್ಕಿ, ಬೈಕ್ ಸವಾರ ಮೃತ್ಯು, ಇನ್ನೋರ್ವ ಗಂಭೀರ ಸುಳ್ಯ: ಅರಂತೋಡಿನಲ್ಲಿ ಬಸ್ ಮತ್ತು ಬೈಕ್ ಢಿಕ್ಕಿ ಹೊಡೆದುಕೊಂಡು ಬೈಕ್‌ನಲ್ಲಿದ್ದ ಓರ್ವ ಮೃತಪಟ್ಟ ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಫೆ.8 ರಂದು ಸಂಜೆ ನಡೆದಿದೆ. ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಯುವಕರು ಜೋಡುಪಾಲ ಬಳಿಯ 2ನೇ ಮೊಣ್ಣಂಗೇರಿಯವರಾಗಿದ್ದು, ಮೃತಪಟ್ಟ ವ್ಯಕ್ತಿಯನ್ನು ವಿನುತ್ ಎಂದು ಗುರುತಿಸಲಾಗಿದೆ. ಗಾಯಗೊಂಡವರು ರಾಜಪ್ಪ ಎಂದು ತಿಳಿದು ಬಂದಿದೆ.

ಮಂಗಳೂರು ಪಂಪ್‌ವೆಲ್‌ ಫ್ಲೈ ಓವರ್ ನಿಂದ ಕಾರು ಕೆಳಕ್ಕೆ ಪಲ್ಟಿ : ಹೊಚ್ಚ ಹೊಸ ರೋಡಿನಲ್ಲಿ ಮೊದಲ ಆಕ್ಸಿಡೆಂಟ್ !

ಮಂಗಳೂರು: ಮಂಗಳೂರು ಪಂಪ್‌ವೆಲ್‌ ಹೊಸ ಫ್ಲೈ ಓವರ್ ನಲ್ಲಿ ಕಾರೊಂದು ಪಲ್ಟಿಯಾದ ಘಟನೆ ಫೆ.8 ರ ಸಂಜೆ ನಡೆದಿದೆ. ವೇಗದ ಕಾರು ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವೇಗವಾಗಿ ಬಂದ ಕಾರು ಡಿವೈಡರ್ ಗೆ ಬಡಿದು ಆನಂತರ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ನಂತರ ಅಲ್ಲಿಂದ ಕೆಳಕ್ಕೆ ಬಿದ್ದಿದೆ . ಘಟನೆಯಲ್ಲಿ ಇಬ್ಬರಿಗೆ ತೀವ್ರ ಗಾಯಗಳಾಗಿವೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ನಂತೂರಿನಲ್ಲಿ ಸ್ವಾಗತ್ ಗ್ಯಾರೇಜ್ಲ್ ಹಾಕಿಕೊಂಡಿರುವ, ಬಜಾಲ್ ನಿವಾಸಿ ಪ್ರವೀಣ್ ಫರ್ನಾಂಡಿಸ್ ಎಂದು ಗುರುತಿಸಲಾಗಿದೆ. ಮೊದಲು ಚಾಲಕನ …

ಮಂಗಳೂರು ಪಂಪ್‌ವೆಲ್‌ ಫ್ಲೈ ಓವರ್ ನಿಂದ ಕಾರು ಕೆಳಕ್ಕೆ ಪಲ್ಟಿ : ಹೊಚ್ಚ ಹೊಸ ರೋಡಿನಲ್ಲಿ ಮೊದಲ ಆಕ್ಸಿಡೆಂಟ್ ! Read More »

ಮಂಗಳೂರಿಗೆ RSS ವರಿಷ್ಠ ಮೋಹನ್ ಭಾಗವತ್ – ಭಾಸ್ಕರ್ ಆಚಾರ್ ಹಿಂದಾರ್ ಭೇಟಿ

ಮಂಗಳೂರು: ರಾಷ್ಟ್ರೀಯ ಸ್ವಯಂಸೇವಾ ಸಂಘದ ಸರಸಂಘ ಚಾಲಕ್ ಮೋಹನ ಭಾಗವತ್ ರವರು ಇಂದು ಮಂಗಳೂರಿಗೆ ಭೇಟಿ ನೀಡಿದರು. ಶೃಂಗೇರಿ ಸಮೀಪ ಅರ್.ಎಸ್. ಎಸ್ ವತಿಯಿಂದ ನಿರ್ಮಿಸಲ್ಪಟ್ಟ ಗುರುಕುಲದ ಉದ್ಘಾಟನೆಗೆ ಆಗಮಿಸಿದ ಅವರು ಮಂಗಳೂರಿನ ಕಾವೂರಿನ ರಂಗನಾಥ ಅಂಗಿತ್ತಾಯರವರ ಮನೆಯಲ್ಲಿ ಕೆಲಕಾಲ ತಂಗಿದ್ದರು. ಮಧ್ಯಾಹ್ನದ ಭೋಜನವನ್ನು ಸ್ವೀಕರಿಸಿದ ಅವರು ಅಲ್ಲಿಯೇ ಕೆಲ ಕಾಲ ವಿಶ್ರಾಂತಿಯನ್ನು ಪಡೆದರು. ಜ್ಞಾನ ಭಾರತೀಯ ಪ್ರಮುಖರಾದ ಭಾನು ಪ್ರಕಾಶ್, ಪುತ್ತೂರಿನ ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು , ಜಯರಾಮ ಕೆದಿಲಾಯ, ದಿವಾಕರ …

ಮಂಗಳೂರಿಗೆ RSS ವರಿಷ್ಠ ಮೋಹನ್ ಭಾಗವತ್ – ಭಾಸ್ಕರ್ ಆಚಾರ್ ಹಿಂದಾರ್ ಭೇಟಿ Read More »

ದೈಪಿಲ : ಶಿರಾಡಿ ರಾಜನ್ ದೈವದ ನೇಮೋತ್ಸವ

ಪುತ್ತೂರು: ಚಾರ್ವಾಕ ಗ್ರಾಮದ ದೈಪಿಲದಲ್ಲಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಕೊಡಮಣಿತ್ತಾಯ ದೈವಗಳ ನೇಮೋತ್ಸವವು ಫೆ.೦೮ ರಂದು ನಡೆಯಿತು. ಬೆಳಿಗ್ಗೆ ಸೇವೆಗಳನ್ನು ಮತ್ತು ಹರಕೆಗಳನ್ನು ಒಪ್ಪಿಸಲಾಯಿತು. ಅಪರಾಹ್ನ ಗಡಿಗೆ ಬಿಂದು ಒಪ್ಪಿಸಿ ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಚಂದ್ರಕಲಾ ಜಯರಾಮ್ ಅರುವಗುತ್ತು, ಪ್ರದೀಪ್ ಆರ್.ಗೌಡ, ವಚನಾ ಪ್ರದೀಪ್ ಅರುವಗುತ್ತು ಮತ್ತು ನಾಲ್ಕು ಮನೆಯವರು, ೧೪ ವರ್ಗದವರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

ಪುತ್ತೂರಿನಲ್ಲಿ ನಡೆದ ವಿರಾಟ್ ಭಜನಾ ಸತ್ಸಂಗ ಸಮಾವೇಶ : ಭಜಕರಿಂದ ತುಂಬಿಹೋಯಿತು ಸಭಾಂಗಣ

ಪ್ರಸಾದ್ ಬಲ್ನಾಡ್ ಪುತ್ತೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಹಾಗೂ ಭಜನಾ ಸತ್ಸಂಗ ಸಮಾವೇಶ ಸಮಿತಿ2020 ಪುತ್ತೂರು ವತಿಯಿಂದ ಭಜನಾ ಸತ್ಸಂಗ ಸಮಾವೇಶ ಮತ್ತು ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ ಹಾಗೂ ಭಜನಾ ಸಂಕಿರ್ತನಾ ಮೆರವಣಿಗೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಂದು ಪುತ್ತೂರಿನ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಡಾ.ಡಿ ವೀರೇಂದ್ರ …

ಪುತ್ತೂರಿನಲ್ಲಿ ನಡೆದ ವಿರಾಟ್ ಭಜನಾ ಸತ್ಸಂಗ ಸಮಾವೇಶ : ಭಜಕರಿಂದ ತುಂಬಿಹೋಯಿತು ಸಭಾಂಗಣ Read More »

1908 ರಿಂದ ಇಂದಿನವರೆಗೆ ಭಾರತದ ಹಲವು ಸ್ಥಿತ್ಯಂತರಗಳನ್ನು ಕಂಡ 111 ವರ್ಷದ ಹಿರಿಯಜ್ಜಿಯಲ್ಲಿ ಇನ್ನೂ ಕುಂದಿಲ್ಲ ಮತದಾನದ ಉತ್ಸಾಹ : ದೆಹಲಿ ಅಸೆಂಬ್ಲಿ ಚುನಾವಣೆ

ದಿನವಿಡೀ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿ ಇರುವ ಯುವಜನತೆಯು ಮತದಾನದಿಂದ ವಿಮುಖವಾಗುತ್ತಿರುವ ಈ ಸಂದರ್ಭದಲ್ಲಿ 111 ವಯಸ್ಸಿನ ಅಜ್ಜಿಯೊಬ್ಬರು ನವೋತ್ಸಾಹದಿಂದ ಮತಚಲಾಯಿಸಿದ್ದಾರೆ. ಇವತ್ತು ನವದೆಹಲಿಯಲ್ಲಿ ಕೇಜ್ರಿವಾಲ್ ಮತ್ತು ಕಾಂಗ್ರೆಸ್- ಬಿಜೆಪಿಗಳ ನಡುವೆ ಅಧಿಕಾರಕ್ಕಾಗಿ ಜಿದ್ದಾಜಿದ್ದಿನ ಚುನಾವಣೆ ನಡೆಯುತ್ತಿದೆ. ದೆಹಲಿಯ ವಿಧಾನಸಭಾ ಚುನಾವಣೆಯ ಒಟ್ಟು 70 ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಈಕೆಯೆ ಅತ್ಯಂತ ಹಿರಿಯ ಮತದಾರ್ತಿ ಎಂದು ಹೇಳಲಾಗುತ್ತಿದೆ.ಕಾಳಿತರು ಮಂಡಲ್ ಎಂಬ ಹೆಸರಿನ ದೆಹಲಿಯ ಈ ಹಿರಿಯಜ್ಜಿ ದೆಹಲಿಯ ಗ್ರೇಟರ್ ಕೈಲಾಶ್ ವಿಧಾನಸಭಾ ಕ್ಷೇತ್ರದ ಚಿತ್ತರಂಜನ್ …

1908 ರಿಂದ ಇಂದಿನವರೆಗೆ ಭಾರತದ ಹಲವು ಸ್ಥಿತ್ಯಂತರಗಳನ್ನು ಕಂಡ 111 ವರ್ಷದ ಹಿರಿಯಜ್ಜಿಯಲ್ಲಿ ಇನ್ನೂ ಕುಂದಿಲ್ಲ ಮತದಾನದ ಉತ್ಸಾಹ : ದೆಹಲಿ ಅಸೆಂಬ್ಲಿ ಚುನಾವಣೆ Read More »

ಸವಣೂರು: ಪಂಚಾಯತ್ ರಾಜ್ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡುವಿಕೆ ,ಮಾಹಿತಿ ಕಾರ್ಯಗಾರ

ಸವಣೂರು: ಪಂಚಾಯತ್ ರಾಜ್ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡುವಿಕೆ ,ಮಾಹಿತಿ ಕಾರ್ಯಗಾರ ಸವಣೂರು: ಸವಣೂರು ಗ್ರಾಮ ಪಂಚಾಯತ್ ನ ಕುಮಾರದಾರ ಸಭಾಂಗಣದಲ್ಲಿ ಪಂಚಾಯತ್ ರಾಜ್ ಸಂಸ್ಥೆ-ಸ್ವಸಹಾಯ ಸಂಘಗಳ ಒಗ್ಗೂಡಿಸುವಿಕೆ ದೃಷ್ಟಿಯಿಂದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಮತ್ತು ಗ್ರಾ.ಪಂ.ಸದಸ್ಯರಿಗೆ ಒಂದು ದಿನದ ಮುಖಾಮುಖಿ ತರಬೇತಿ ಕಾರ್ಯಕ್ರಮ ಫೆ.8ರಂದು ನಡೆಯಿತು. ಕಾರ್ಯಕ್ರಮವನ್ನು ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ ಅವರು ಉದ್ಘಾಟಿಸಿ,ಗ್ರಾ.ಪಂ ಸಾರ್ವಜನಿಕರೊಂದಿಗೆ ಬೆರೆತು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಇಂತಹ ತರಬೇತಿ ಕಾರ್ಯಗಳು ಪೂರಕ ಎಂದರು. ತಾ.ಪಂ.ಸದಸ್ಯೆ ರಾಜೇಶ್ವರಿ ಕನ್ಯಾಮಂಗಲ ಸಂಧರ್ಬೋಚಿತವಾಗಿ …

ಸವಣೂರು: ಪಂಚಾಯತ್ ರಾಜ್ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡುವಿಕೆ ,ಮಾಹಿತಿ ಕಾರ್ಯಗಾರ Read More »

error: Content is protected !!
Scroll to Top