1908 ರಿಂದ ಇಂದಿನವರೆಗೆ ಭಾರತದ ಹಲವು ಸ್ಥಿತ್ಯಂತರಗಳನ್ನು ಕಂಡ 111 ವರ್ಷದ ಹಿರಿಯಜ್ಜಿಯಲ್ಲಿ ಇನ್ನೂ ಕುಂದಿಲ್ಲ ಮತದಾನದ ಉತ್ಸಾಹ : ದೆಹಲಿ ಅಸೆಂಬ್ಲಿ ಚುನಾವಣೆ

ದಿನವಿಡೀ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿ ಇರುವ ಯುವಜನತೆಯು ಮತದಾನದಿಂದ ವಿಮುಖವಾಗುತ್ತಿರುವ ಈ ಸಂದರ್ಭದಲ್ಲಿ 111 ವಯಸ್ಸಿನ ಅಜ್ಜಿಯೊಬ್ಬರು ನವೋತ್ಸಾಹದಿಂದ ಮತಚಲಾಯಿಸಿದ್ದಾರೆ.

ಇವತ್ತು ನವದೆಹಲಿಯಲ್ಲಿ ಕೇಜ್ರಿವಾಲ್ ಮತ್ತು ಕಾಂಗ್ರೆಸ್- ಬಿಜೆಪಿಗಳ ನಡುವೆ ಅಧಿಕಾರಕ್ಕಾಗಿ ಜಿದ್ದಾಜಿದ್ದಿನ ಚುನಾವಣೆ ನಡೆಯುತ್ತಿದೆ.

ದೆಹಲಿಯ ವಿಧಾನಸಭಾ ಚುನಾವಣೆಯ ಒಟ್ಟು 70 ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಈಕೆಯೆ ಅತ್ಯಂತ ಹಿರಿಯ ಮತದಾರ್ತಿ ಎಂದು ಹೇಳಲಾಗುತ್ತಿದೆ.
ಕಾಳಿತರು ಮಂಡಲ್ ಎಂಬ ಹೆಸರಿನ ದೆಹಲಿಯ ಈ ಹಿರಿಯಜ್ಜಿ ದೆಹಲಿಯ ಗ್ರೇಟರ್ ಕೈಲಾಶ್ ವಿಧಾನಸಭಾ ಕ್ಷೇತ್ರದ ಚಿತ್ತರಂಜನ್ ಪಾರ್ಕ್ ನಲ್ಲಿರುವ ಸ್ಕೂಲ್ ಒಂದರಲ್ಲಿ ಕುಟುಂಬ ಸಮೇತ ಬಂದು ಮತ ಚಲಾಯಿಸಿದರು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಈ ಸಂದರ್ಭದಲ್ಲಿ ಸುದ್ದಿಮಾಧ್ಯಮಗಳೊಂದಿಗೆ ಮಾತನಾಡಿದ ಈ ಅಜ್ಜಿ , ತಾನು ಹಲವು ಬಾರಿ ಮತ ಚಲಾಯಿಸಿದ್ದೇನೆ. ಈಗ ಕೂಡ ಅನಾರೋಗ್ಯವಿದ್ದರೂ ಮತಚಲಾಯಿಸಲು ಬಂದಿದ್ದೇನೆ. ಎಲ್ಲರೂ ಮತ ಚಲಾಯಿಸಿ ತಮ್ಮ ಕರ್ತವ್ಯವನ್ನು ಪಾಲಿಸಬೇಕೆಂದು ಈ ಸಂದರ್ಭದಲ್ಲಿ ಯುವಜನತೆಗೆ ಕಿವಿಮಾತು ಹೇಳಿದರು.
ಅವಿಭಜಿತ ಭಾರತದ ಭಾರತದಲ್ಲಿ 1908 ರಲ್ಲಿ ಜನಿಸಿದ ಈ ಹಿರಿಯಜ್ಜಿಯು ದೇಶದ ಹಲವು ಸ್ಥಿತ್ಯಂತರಗಳನ್ನು ಕಣ್ಣಾರೆ ಕಂಡವಳು.

ಸ್ವಾತಂತ್ರ್ಯ ಪೂರ್ವ ಭಾರತದ ಸ್ವಾತಂತ್ರ್ಯ ಚಳವಳಿ, ಮತ್ತು ಕಳೆದ 70 ವರ್ಷಗಳ ಸ್ವಾತಂತ್ರ್ಯೋತ್ಸವ ರಾಜಕೀಯ ಬದಲಾವಣೆಗಳಿಗೆ ಸಮಾನವಾಗಿ ಒಗ್ಗಿಕೊಂಡವಳು. ಆಕೆ ಮೈಲುಗಟ್ಟಲೆ ನಡೆದುಕೊಂಡು ಹೋಗಿ ಮತ ಚಲಾಯಿಸುತ್ತಿದ್ದ ಕಾಲವೊಂದಿತ್ತು. ಇವಾಗ ಮತದಾರರರು ವಾಸಿಸುತ್ತಿರುವ ಕೂಗಳತೆಯ ದೂರದಲ್ಲಿ ಮತಗಟ್ಟೆಗಳು ಬಂದು ಕೂತಿವೆ.

ಈ ಬಾರಿಯ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 132 ಶತಾಯುಷಿಗಳು ಮತದಾರರ ಪಟ್ಟಿಯಲ್ಲಿದ್ದು ಆ ಪೈಕಿ 68 ಮಂದಿ ಪುರುಷರೂ 64 ಮಹಿಳೆಯರೂ ಇದ್ದಾರೆ.

Leave a Reply

error: Content is protected !!
Scroll to Top
%d bloggers like this: