ಮಂಗಳೂರು ಪಂಪ್‌ವೆಲ್‌ ಫ್ಲೈ ಓವರ್ ನಿಂದ ಕಾರು ಕೆಳಕ್ಕೆ ಪಲ್ಟಿ : ಹೊಚ್ಚ ಹೊಸ ರೋಡಿನಲ್ಲಿ ಮೊದಲ ಆಕ್ಸಿಡೆಂಟ್ !

ಮಂಗಳೂರು: ಮಂಗಳೂರು ಪಂಪ್‌ವೆಲ್‌ ಹೊಸ ಫ್ಲೈ ಓವರ್ ನಲ್ಲಿ ಕಾರೊಂದು ಪಲ್ಟಿಯಾದ ಘಟನೆ ಫೆ.8 ರ ಸಂಜೆ ನಡೆದಿದೆ.

ವೇಗದ ಕಾರು ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ವೇಗವಾಗಿ ಬಂದ ಕಾರು ಡಿವೈಡರ್ ಗೆ ಬಡಿದು ಆನಂತರ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ನಂತರ ಅಲ್ಲಿಂದ ಕೆಳಕ್ಕೆ ಬಿದ್ದಿದೆ . ಘಟನೆಯಲ್ಲಿ ಇಬ್ಬರಿಗೆ ತೀವ್ರ ಗಾಯಗಳಾಗಿವೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ನಂತೂರಿನಲ್ಲಿ ಸ್ವಾಗತ್ ಗ್ಯಾರೇಜ್ಲ್ ಹಾಕಿಕೊಂಡಿರುವ, ಬಜಾಲ್ ನಿವಾಸಿ ಪ್ರವೀಣ್ ಫರ್ನಾಂಡಿಸ್ ಎಂದು ಗುರುತಿಸಲಾಗಿದೆ.

ಮೊದಲು ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಆಲ್ಟೋ ಕಾರು ಪಕ್ಕದಲ್ಲಿ ಬರುತ್ತಿದ್ದ ರೆನಾಲ್ಟ್ ಡಸ್ಟರ್ ಕಾರಿಗೆ ಡಿಕ್ಕಿ ಹೊಡೆದು ಆನಂತರ ಕೆಳಗೆ ಬಿದ್ದಿದೆ.

ಇಷ್ಟು ದಿನ ಪಂಪ್ವೇಲ್ ಫ್ಲೈ ಓವರ್ ಕಾರ್ಯ ಮುಗಿದಿಲ್ಲ ಎಂದು ಜನರು ದೂರುತ್ತಿದ್ದರು. ಈಗ ಫ್ಲೈಓವರ್ ಜನಬಳಕೆಗೆ ಲಭ್ಯವಾದ ಕೂಡಲೇ ವಾಹನ ಸವಾರರು ಅಧಿಕ ವೇಗದಿಂದ ಸಂಚರಿಸಿ ಅಪಘಾತಕ್ಕೆ ಈಡಾಗುವುದು ದುರಂತವೇ ಸರಿ.

Leave A Reply