ಮಂಗಳೂರಿಗೆ RSS ವರಿಷ್ಠ ಮೋಹನ್ ಭಾಗವತ್ – ಭಾಸ್ಕರ್ ಆಚಾರ್ ಹಿಂದಾರ್ ಭೇಟಿ

ಮಂಗಳೂರು: ರಾಷ್ಟ್ರೀಯ ಸ್ವಯಂಸೇವಾ ಸಂಘದ ಸರಸಂಘ ಚಾಲಕ್ ಮೋಹನ ಭಾಗವತ್ ರವರು ಇಂದು ಮಂಗಳೂರಿಗೆ ಭೇಟಿ ನೀಡಿದರು. ಶೃಂಗೇರಿ ಸಮೀಪ ಅರ್.ಎಸ್. ಎಸ್ ವತಿಯಿಂದ ನಿರ್ಮಿಸಲ್ಪಟ್ಟ ಗುರುಕುಲದ ಉದ್ಘಾಟನೆಗೆ ಆಗಮಿಸಿದ ಅವರು ಮಂಗಳೂರಿನ ಕಾವೂರಿನ ರಂಗನಾಥ ಅಂಗಿತ್ತಾಯರವರ ಮನೆಯಲ್ಲಿ ಕೆಲಕಾಲ ತಂಗಿದ್ದರು.

ಮಧ್ಯಾಹ್ನದ ಭೋಜನವನ್ನು ಸ್ವೀಕರಿಸಿದ ಅವರು ಅಲ್ಲಿಯೇ ಕೆಲ ಕಾಲ ವಿಶ್ರಾಂತಿಯನ್ನು ಪಡೆದರು. ಜ್ಞಾನ ಭಾರತೀಯ ಪ್ರಮುಖರಾದ ಭಾನು ಪ್ರಕಾಶ್, ಪುತ್ತೂರಿನ ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು , ಜಯರಾಮ ಕೆದಿಲಾಯ, ದಿವಾಕರ ಆಚಾರ್ , ಜಯಗುರು ಆಚಾರ್ ಮತ್ತಿತ್ತರರು ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಧ್ಯಾಹ್ನ ಊಟೋಪಚಾರ ನಡೆಸಿದ್ದಲ್ಲದ್ದೆ ಭಾಸ್ಕರ ಆಚಾರ್ ಅವರ ಜೊತೆ ಉಭಯ ಕುಶಲೋಪಹರಿ ನಡೆಸಿದರು.

Leave a Reply

error: Content is protected !!
Scroll to Top
%d bloggers like this: