ಬೆಳಾಲು ಅರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಫೆ 9 ರಿಂದ ಫೆ 15 ರವರೆಗೆ ಬ್ರಹ್ಮಕಲಶೋತ್ಸವದ ಸಂಭ್ರಮ

ಬೆಳ್ತಂಗಡಿ ತಾಲೂಕು, ಬೆಳಾಲು ಗ್ರಾಮದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಳೆ 09/02/20 ರಿಂದ ಆರಂಭವಾಗುವ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು 15/02/20 ರವರೆಗೆ ನಡೆಯಲಿದೆ.

ಬ್ರಹ್ಮಕಲಶೋತ್ಸವದ ಅಂಗವಾಗಿ ತಾರೀಕು 10/02/20, ಸೋಮವಾರದಂದು ರಾತ್ರಿ 9:30 ಕ್ಕೆ ವಿಷ್ಣು ಕಲಾವಿದರು ಮದ್ದಡ್ಕ ಇವರ ಅಭಿನಯದ ಶ್ರೀ ಕ್ಷೇತ್ರ ಆರಿಕೊಡಿ ಶ್ರೀ ಚಾಮುಂಡೇಶ್ವರಿ ಚರಿತ್ರೆ ಎಂಬ ಭಕ್ತಿಪ್ರಧಾನ ಜಾನಪದ ಶೈಲಿಯ ನಾಟಕ ಪ್ರದರ್ಶನ ನಡೆಯಲಿದೆ.,

ಭಕ್ತಾದಿಗಳು ಮತ್ತು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಚಾಮುಂಡೇಶ್ವರಿಯ ಆಶೀರ್ವಾದವನ್ನು ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.

Leave A Reply

Your email address will not be published.