‘ಪುರುಷರ’ಕಟ್ಟೆಯಲ್ಲಿ ಹುಡುಗಿಯರೂ ಇದ್ದಾರೆ, ಕಬಡ್ಡಿನೂ ಆಡ್ತಾರೆ | ಗೆದ್ದೂ ಬೀಗ್ತಾರೆ !!

ನರಿಮೊಗರು : ಇಲ್ಲಿನ ಪುರುಷರಕಟ್ಟೆಯ ಸರಸ್ವತಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆಯ ಕಬಡ್ಡಿ ತಂಡ ಗುತ್ತಿಗಾರಿನಲ್ಲಿ ನಡೆದ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ರನ್ನರ್ ಅಪ್ ಮತ್ತು ಬಾಲಕರ ವಿಭಾಗದಲ್ಲಿ ಪ್ರಥಮ ರನ್ನರ್ ಅಪ್ ಸ್ಥಾನ ಪಡೆದು ಪ್ರಶಸ್ತಿ ಗಳಿಸಿರುತ್ತಾರೆ.

 

ಪುರುಷರಕಟ್ಟೆಯಲ್ಲಿ ಪುರುಷರು ಮಾತ್ರ ಅಲ್ಲ ಇರುವುದು, ಮಹಿಳೆಯರೂ ಇದ್ದಾರೆ ಎಂದು ನಮಗೆ ದಕ್ಷಿಣ ಕನ್ನಡದವರಿಗೆ ಗೊತ್ತಿತ್ತು. ಇವತ್ತು ಬಾಲಕಿಯರು ಕಬಡ್ಡಿಯಲ್ಲಿ ಪ್ರೈಸ್ ತಂದದ್ದು ನೋಡಿ, ಫುಲ್ ಕರ್ನಾಟಕಕ್ಕೇ ಗೊತ್ತಾಗಿದೆ !!

ಶಾಲಾ ಸಂಚಾಲಕರಾದ ಅವಿನಾಶ ಕೊಡಂಕಿರಿ ಮಾರ್ಗದರ್ಶನ ದಲ್ಲಿ ಆಡಳಿತ ಅಧಿಕಾರಿ ಶುಭಾ ಅವಿನಾಶ್ ಮತ್ತು ಮುಖ್ಯ ಗುರು ರಾಜಾರಾಮ ವರ್ಮ ತಂಡಕ್ಕೆ ಸಹಕರಿಸಿದ್ದರು. ಕ್ರೀಡಾ ಶಿಕ್ಷಕ ಮಾಯಿಲಪ್ಪ ತರಬೇತಿ ನೀಡಿದ್ದರು.

ಮಗುವನ್ನು ನೆಲಕ್ಕೆ ಒಗೆದ ಕಿರಾತಕ ತಂದೆ । ಪುತ್ತೂರು

Leave A Reply

Your email address will not be published.