Holiday: ನಾಳೆ ಅರ್ಧ ದಿನ ರಜೆ ಘೋಷಣೆ!!

Holiday : ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ರಾಜ್ಯ ಹಾಗೂ ದೇಶಾದ್ಯಂತ ಎಲ್ಲಾ ಶಾಲಾ- ಕಾಲೇಜು ಕಚೇರಿಗಳಿಗೆ ರಜೆಯನ್ನು ನೀಡಲಾಗಿತ್ತು. ಈ ಮೂಲಕ ಅಗಲಿದ ಮಹಾನ್ ನಾಯಕನಿಗೆ ಸಂತಾಪ ಸೂಚಿಸಲಾಗಿತ್ತು. ಅಲ್ಲದೆ ಮನಮೋಹನ್ ಸಿಂಗ್ ಅವರ ನಿಧನದ ಕಾರಣ ಭಾರತ ಸರ್ಕಾರ 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

 

ಇದೀಗ ಮುಂದುವರಿದು ನಾಳೆ (ಡಿಸೆಂಬರ್ 28) ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಯುತ್ತಿರುವ ಕಾರಣ ಕೇಂದ್ರ ಸರ್ಕಾರದ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ಹೌದು, ಕೇಂದ್ರ ಸರ್ಕಾರದ ಪ್ರಕಾರ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಶನಿವಾರ ಅರ್ಧ ದಿನ ರಜೆ ಇರುತ್ತದೆ. ಅಂತ್ಯಕ್ರಿಯೆಯ ದಿನದಂದು ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ(CPSU) ಅರ್ಧ ದಿನದ ರಜೆಯನ್ನು ಘೋಷಿಸಲಾಗಿದೆ.

 

ಇನ್ನು ಮಾಹಿತಿ ಪ್ರಕಾರ ಮನಮೋಹನ್ ಸಿಂಗ್( Manmohan Singh) ಅವರ ಅಂತ್ಯಕ್ರಿಯೆ ಶನಿವಾರದಂದು ನಡೆಯಲಿದೆ. ಅವರ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಪ್ರಧಾನ ಕಚೇರಿಗೆ ತರಲಾಗುವುದು, ಅಲ್ಲಿಂದ ಅಂತಿಮ ಯಾತ್ರೆ ನಡೆಯಲಿದೆ. ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರ ರಾಜ್‌ಘಾಟ್‌ನಲ್ಲಿ ನಡೆಯಲಿದೆ. ರಾಜ್‌ಘಾಟ್‌ ಮಹಾತ್ಮಾ ಗಾಂಧಿಯವರ ಸಮಾಧಿಯಾಗಿದೆ. ಹಲವು ಮಾಜಿ ಪ್ರಧಾನಿಗಳ ಅಂತಿಮ ಸಂಸ್ಕಾರವನ್ನು ಇದೇ ಸ್ಥಳದಲ್ಲಿ ನೆರವೇರಿಸಲಾಗಿದೆ.

Leave A Reply

Your email address will not be published.