ಉಜಿರೆಯಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ನುಡಿ ನಮನ | ತುಳು ಶಿವಳ್ಳಿ ಸಂಘದಿಂದ

ಉಜಿರೆ : ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಯಾವುದೇ ವರ್ಗವನ್ನು ಮಾತ್ರ ಬೆಂಬಲಿಸಿದವರಲ್ಲ. ಎಲ್ಲ ವರ್ಗದವರೂ ಮುಂದುವರೆಯಬೇಕೆಂದು ಬಯಸಿ ಧರ್ಮ ಮಾರ್ಗದಲ್ಲಿನಡೆಸಿದವರು. ಅವರು ಯಾರಿಗೂ, ಯಾವತ್ತೂ ಮನಸ್ಸಿಗೆ ಬೇಸರವಾಗದಂತೆ ನೋಡಿಕೊಳ್ಳುತ್ತಿದ್ದರು. ಪ್ರಥಮ ಬಾರಿ ಅಸ್ಪ್ರಶ್ಯತೆ ಹೋಗಲಾಡಿಸಲು ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತಂದವರವರು. ಎಲ್ಲ ಧರ್ಮವನ್ನೂ ಒಗ್ಗೂಡಿಸಿ, ಒಂದೇ ಪಥದಲ್ಲಿ ಕೊಂಡೊಯ್ದುಆದರ್ಶಪ್ರಾಯರಾದವರು, ಎಂದು ಪೇಜಾವರ ಶ್ರೀಗಳ ಶಿಷ್ಯ ಹರಿಪ್ರಸಾದ್ ಆರ್ಮುಡೆತ್ತಾಯರವರು ನುಡಿದರು.

ಅವರು ಇಂದು ಉಜಿರೆಯ ಜನಾರ್ಧನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಂಗಣದಲ್ಲಿ, ಊರ ನಾಗರಿಕರ ವತಿಯಿಂದ. ತಾಲೂಕು ತುಳು ಶಿವಳ್ಳಿ ಸಭಾ ಸಹಯೋಗದೊಂದಿಗೆ ಸಮಾರಂಭದಲ್ಲಿ ಶ್ರೀಗಳಿಗೆ ನುಡಿನಮನ ಸಲ್ಲಿಸುತ್ತಾ ಮಾತನಾಡಿದರು. ಸ್ವಾಮೀಜಿಯವರು ಗಾಂಧೀ, ಖಾದಿಯನ್ನೇ ಧರಿಸಿದವರು. ಬೆಂಗಳೂರಿನ ನಿರ್ಜನ ಸ್ಮಶಾನ ಸದೃಶ ಪ್ರದೇಶದಲ್ಲಿ ಪ್ರಾರಂಭವಾದ – ಮಕ್ಕಳಿಂದ ಪ್ರಾರಂಭವಾದ ಪೂರ್ಣ ಪ್ರಜ್ಞ ವಿದ್ಯಾ ಪೀಠವು ಇಂದು ಹೆಮ್ಮರವಾಗಿ ಬೆಳೆದಿದೆ. ಮಧ್ವಾಚಾರ್ಯರಂತೆ ಅವರಿಗೂ ಜಗದ್ಗುರುಗಳ ಸಾಲಿಗೆ ಸೇರ್ಪಡೆಯಾಗಬೇಕಾದವರು ಅವರ ಆದರ್ಶವನ್ನು ವಿದ್ಯಾರ್ಥಿಗಳು ಪ್ರೇರಣೆ ಹೊಂದಿ ಸನ್ಮಾರ್ಗದಲ್ಲಿ ನಡೆಯುವಂತಾಗಲಿ ಎಂದು ನುಡಿ ನಮನ ಸಲ್ಲಿಸಿದರು.

ಪ್ರಸ್ತಾವನೆ ಭಾಷಣ ಮಾಡಿದ ಎಸ್ ಡಿ ಎಂ ಕಾಲೇಜು ಸಂಸ್ಕೃತ ಉಪನ್ಯಾಸಕ ಡಾ। ಶ್ರೀಧರ್ ಭಟ್ ಅವರು ಪೇಜಾವರ ಶ್ರೀಗಳವರು ಉಜಿರೆಯಲ್ಲಿ ಮಧ್ವಾಚಾರ್ಯರ ಪ್ರತಿಮೆ ನಿರ್ಮಿಸಿ, ಅವರ ನೆನಪು ಶಾಶ್ವತವಾಗಿ ಉಳಿಯುವಂತೆ ಮಾಡಿದರು ಎಂದರು.

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಉಜಿರೆ ದೇವಸ್ಥಾನದ ಮೊಕ್ತೇಸರರಾದ ವಿಜಯ ರಾಘವ ಪದ್ವೆತ್ನಾಯರವರು ಅಧ್ಯಕ್ಷತೆ ವಹಿಸಿದ್ದರು. ಶಿವಳ್ಳಿ ಉಜಿರೆ ವಲಯಾಧ್ಯಕ್ಷ ಶರತ್ ಕೃಷ್ಣಸ್ವಾಗತಿಸಿ, ನಿರೂಪಿಸಿ ವಂದಿಸಿದರು. ತಾಲೂಕಿನ ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಪರಾರಿ ವೆಂಕಟ್ರನ ಹೆಬ್ಬಾರ್, ಮೋಹನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!
Scroll to Top
%d bloggers like this: