ಸವಣೂರು ಯುವಕ ಮಂಡಲದಿಂದ ವಿವೇಕಾನಂದ ಜಯಂತಿ ಆಚರಣೆ

ಸವಣೂರು : ಸವಣೂರು ಯುವಕ ಮಂಡಲದ ವತಿಯಿಂದ ಸ್ವಾಮಿ ವಿವೇಕಾನಂದ  157 ನೇ ಜನ್ಮದಿನಾಚರಣೆ ರಾಷ್ಟ್ರೀಯ ಯುವ ದಿನಾಚರಣೆ  ಆಚರಿಸಲಾಯಿತು.

ಕಾರ್ಯಕ್ರಮ ವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಬಿ.ಕೆ ಇವರು ಮಾತನಾಡಿ ಸ್ವಾಮಿ ವಿವೇಕಾನಂದರ ಆದರ್ಶ ಇಂದಿಗೂ ಯುವಕರಿಗೆ ಸ್ಪೂರ್ತಿದಾಯಕ. ಯುವಶಕ್ತಿ ದೇಶದ ಸಂಪತ್ತು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಸವಣೂರು ಯುವಕ ಮಂಡಲದ ಅಧ್ಯಕ್ಷ ತಾರಾನಾಥ ಸವಣೂರು ಮಾತನಾಡಿ, ಕಾಲದ ಜೊತೆಗೆ ದಾಖಲೆಯಾಗುತ್ತಾ ಹೋಗುವುದು ಅನಿವಾರ್ಯವಾಗಿದೆ. ಸ್ವಾಮಿ ವಿವೇಕಾನಂದರು ತಮ್ಮ ಅಲ್ಪಕಾಲದ ಅವಧಿಯಲ್ಲಿಯು ಇಡೀ ಜಗತ್ತಿನಲ್ಲಿಯೇ ದಾಖಲಾದರು. ಅವರ ಸತ್ ಚಿಂತನೆಗಳು ನಮಗೆ ಪ್ರೇರಕ ಶಕ್ತಿ ಎಂದರು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಜನಜಾಗೃತಿ ವೇದಿಕೆಯ ಸವಣೂರು ವಲಯದ ಅಧ್ಯಕ್ಷ ಮಹೇಶ್ ಕೆ ಸವಣೂರು, ಸಿ.ಎ ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಗ್ರಾಮ ಪಂಚಾಯತ್ ಸದಸ್ಯರಾದ  ಸತೀಶ್ ಬಲ್ಯಾಯ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರರ ಪರೀಕ್ಷೆಯಲ್ಲಿ ತೇರ್ಗಡೆಯಾದ ಕುಲಪ್ರಕಾಶ್ ಮೆದು ಮತ್ತು ರಕ್ಷಿತ್ ಸವಣೂರು ಇವರನ್ನು ಗೌರವಿಸಲಾಯಿತು. ಸವಣೂರು ಗ್ರಾಮಪಂಚಾಯತ್ ನಿಂದ ಸವಣೂರು ಯುವಕಮಂಡಲದ ಯುವಸಭಾಭವನಕ್ಕೆ ಸೋಲಾರ್ ದೀಪ ಅಳವಡಿಸಲಾಯಿತು.

ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಬಿ.ಕೆ ಉದ್ಘಾಟಿಸಿದರು. ಗ್ರಾಮ‌ಪಂಚಾಯತ್ ಸದಸ್ಯ  ಶ್ರೀ ಸತೀಶ್ ಬಲ್ಯಾಯ, ಸವಣೂರು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ ಸವಣೂರು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ರಾಕೇಶ್ ರೈ ಕೆಡೆಂಜಿ,  ಬಾಲಚಂದ್ರ ಸವಣೂರು, ಪ್ರವೀಣ್ ಬಲ್ಯಾಯ, ದಿವಾಕರ ಬಸ್ತಿ, ಕುಲಪ್ರಕಾಶ್ ಮೆದು, ರಾಮಕೃಷ್ಣ ಪ್ರಭು, ರಕ್ಷಿತ್ ಸವಣೂರು,ಪ್ರಜ್ವಲ ಕೆ ಆರ್, ದಯಾನಂದ ಮೆದು,ಉಪಸ್ಥಿತರಿದ್ದರು.
ಬಾಲಚಂದ್ರ ಕನಡಕುಮೇರು ಸ್ವಾಗತಿಸಿ, ಪ್ರವೀಣ್ ಬಲ್ಯಾಯ ವಂದಿಸಿದರು.

Leave a Reply

error: Content is protected !!
Scroll to Top
%d bloggers like this: