ಕನಕಪುರದಲ್ಲಿ ಕಲ್ಲಡ್ಕ ಘರ್ಜನೆ । ಸಂಘ ಪರಿವಾರ ಬಂಡೆಯ ಬುಡಕ್ಕೇ ಇಟ್ಟಿದೆ ಡೈನಮೈಟ್ !

ಕನಕಪುರದ ಹೆಬ್ಬಂಡೆ ಡಿ ಕೆ ಶಿವಕುಮಾರ್ ಅವರ ಕ್ಷೇತ್ರದಲ್ಲಿ ಬಂಡೆ ಸಿಗಿದು ಹಾಕಲು ಬಿಜೆಪಿಗೆ ಒಂದು ದೊಡ್ಡ ಡೈನಮೈಟ್ ನೇ ಸಿಕ್ಕಿಬಿಟ್ಟಿದೆ. ಖುಷಿಯಿಂದ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಗಹಗಹಿಸಿ ನಗುತ್ತಿವೆ.


Ad Widget

Ad Widget

Ad Widget

Ad Widget
Ad Widget

Ad Widget

ಮೊನ್ನೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯಕ್ಕೆ ರಾಜ್ಯವನ್ನೇ ಪೂಜಿಕೊಂಡು ಬಿಜೆಪಿ ಗೆದ್ದುಕೊಂಡು ಬಂದಿತ್ತಾದರೂ ಮಂಡ್ಯದಲ್ಲಿ ಮುದ್ದೇಗೌಡರ ಮೊಮ್ಮಗ ಮತ್ತು ಕನಕಪುರದಲ್ಲಿ ಡಿ ಕೆ ಶಿವಕುಮಾರ್ ನ ತಮ್ಮ ಡಿ ಕೆ ಸುರೇಶ್ – ಈ ಇಬ್ಬರನ್ನು ಅಲುಗಾಡಿಸಲಿಕ್ಕಾಗಲಿಲ್ಲ. ಇಬ್ಬರೂ ಹೆಬ್ಬಂಡೆಯಂತೆ ಮಿಸುಕದೆ ನಿಂತಿದ್ದರು.


Ad Widget

ಆದರೆ, ಈಗ ಕನಕಪುರದ ಬಂಡೆಯ ಬುಡಕ್ಕೆ ಡೈನಮೈಟ್ ನ ಬತ್ತಿ ಇಟ್ಟು ಬೆಂಕಿ ಕೊಟ್ಟಾಗಿದೆ. ಸುರು-ಸುರು, ಸುರ್ಸುರು ಬೆಂಕಿ ಸಿಡಿದುಕೊಂಡು ಒಳನುಗ್ಗುತ್ತಿದೆ. ಸಿಡಿದು ಚಿಪ್ಪುಡ್ ಚೀರ್ ಆಗೋದನ್ನೇ ಬಿಜೆಪಿ-ಸಂಘ ಪರಿವಾರಗಳು ಕಿವಿ ಮುಚ್ಚಿಕೊಂಡು ಕಾಯುತ್ತಿವೆ.

ಏಸು ಪ್ರತಿಮೆ ಸ್ಥಾಪಿಸುವ ವಿರುದ್ಧ ಇಂದು ಕನಕಪುರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇಂದಿನ ಪ್ರತಿಭಟನೆಯ ಕರೆಯನ್ನು ಹಿಂದೂ ಜಾಗರಣಾ ವೇದಿಕೆ ಹೊರಡಿಸಿತ್ತು. ಹಿರಿಯ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ವಿಶ್ವ ಹಿಂದೂ ಪರಿಷತ್ ಹಿಂದೂ ಜಾಗರಣಾ ವೇದಿಕೆ ಮತ್ತುಇತರ ಹಿಂದೂ ಪರ ಸಂಘಟನೆಗಳಿಗೆ ಸೇರಿದ ಪ್ರತಿಭಟನಾಕಾರರ ಗುಂಪನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪ್ರತಿಭಟನೆಯಲ್ಲಿ ತೊಡಗಿಕೊಂಡ ಸಾಲು ಸಾಲು ಕೇಸರಿ ಶಾಲುಗಳು

 ಇವತ್ತು ಕನಕಪುರದಲ್ಲಿನಡೆದ ಹಿಂದೂ ಪರ ಸಂಘಟನೆಗಳ ಪ್ರತಿಭಟನಾ ರಾಲಿಯಲ್ಲಿ ಮಾತನಾಡಿದ ಕಲ್ಲಡ್ಕ ಭಟ್ಟರು, ಕಪಾಲ ಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಏಸು ಪ್ರತಿಮೆ ಮಾಡಲು ಬಿಡುವುದಿಲ್ಲ ಅಂದಿದ್ದಾರೆ. ಏಸು ಪ್ರತಿಮೆಯೇ ಏಕಾಗಬೇಕು? ಅದೇ, ಜಾಗದಲ್ಲಿ ಪೇಜಾವರ ಸ್ವಾಮೀಜಿ, ಮಹಾತ್ಮ ಗಾಂಧೀ, ಬಾಲಗಂಗಾಧರ ಸ್ವಾಮೀಜಿ, ಬಸವಣ್ಣನವರು ಹೀಗೆ ಎಷ್ಟೋ ಜನರ ಪ್ರತಿಮೆ ಮಾಡಬಹುದಿತ್ತು. ಮತಾಂತರ ಮಾಡುವ ಉದ್ದೇಶದಿಂದೇ ಈಗ ಏಸು ಪ್ರತಿಮೆಯ ಹುನ್ನಾರ ನಡೆದಿದೆ ಎಂದು ಕಲ್ಲಡ್ಕ ಭಟ್ಟರು ಆಪಾದಿಸಿದರು.

ಡಿ ಕೆ ಶಿವಕುಮಾರ್ ಅವರು ಕಪಾಲ ಬೆಟ್ಟದಲ್ಲಿ 114 ಅಡಿಗಳ ಏಸು ಪ್ರತಿಮೆ ಪ್ರತಿಷ್ಠಾಪಿಸಲು ಉದ್ದೇಶಿದ ಜಾಗ ಬರಡು ಭೂಮಿ ಅಂದಿದ್ದರು. ಆದರೆ ಸಚಿವ ಅಶೋಕ್ ಅವರು, ಆ ಜಾಗವು, ಬಂಜರು ಭೂಮಿಯಲ್ಲ; ಅದೊಂದು ಗೋಮಾಳ ಎಂದಿದ್ದಾರೆ.

ಅತ್ತ ಕಪಾಲ ಬೆಟ್ಟಕ್ಕೆ ಯಾಕೆ ಕೈ ಹಾಕಿದ್ನೋ ಅಂತ ಡಿ ಕೆ ಮಮ್ಮಲ ಮರುಗುತ್ತಿದ್ದಾರೆ. ಅದು ಅವರ ಭಾವ ಭಂಗಿಗಳಲ್ಲೇ ಸ್ಪಷ್ಟವಾಗುತ್ತಿದೆ. ಸುಮ್ಮನೆ ಸೋನಿಯಾ ಅವರನ್ನು ಮೆಚ್ಚಿಸಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನ ಪಡೆದುಕೊಂಡು, ಮುಂದಿನ ಚುನಾವಣೆಯಲ್ಲಿ ಗೆದ್ದು ಬಂದು ಮುಖ್ಯಮಂತ್ರಿ ಆಗಿಬಿಡುವ ಉತ್ಸಾಹದಲ್ಲಿದ್ದ ಡಿಕೆಗೆ ಈಗ ಆವರ ಏಸು ಪ್ರತಿಮೆ ವಿವಾದವೇ ದೊಡ್ಡ ತೊಡಕಾಗುವ ಎಲ್ಲ ಲಕ್ಷಣವಿದೆ.

ಡಿಕೆಯ ಸ್ವಪಕ್ಷ ಕಾಂಗ್ರೆಸ್ಸಿನಲ್ಲೇ, ಸಿದ್ದು ಪಾಳಯ ಕೂಡ ಆಂತರಿಕವಾಗಿ ಖುಷಿಯಲ್ಲಿದ್ದಾರಂತೆ. ಏನಕೇನ ಪ್ರಕಾರೇಣ ಡಿಕೆಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ತಪ್ಪಿಸಲು ತಂತ್ರ ಮತ್ತು ಕಾರಣಗಳನ್ನು ಹೊಸೆಯುತ್ತಿರುವ ಸಿದ್ದುವಿಗೆ ಈ ವಿವಾದದಿಂದ ಲಾಭವಾಗಿದೆ.

ಈಗ ಡಿಕೆಯದು ಇಬ್ಬಂಧಿ ಸ್ಥಿತಿ. ಪ್ರತಿಮೆ ಸ್ಥಾಪನೆಯಿಂದ ಹಿಂದೆ ಸರಿದರೆ, ಸೋತು ಹೋದ ಅವಮಾನ. ಮಾಡಿಯೇ ಸಿದ್ದ ಎಂದು ಹಠಕ್ಕೆ ಬಿದ್ದರೆ, ಬಿಜೆಪಿಯ ಮತ್ತು ಸಂಘ ಪರಿವಾರದವರು ಮತ್ತಷ್ಟು ಅಗ್ರೆಸ್ಸಿವ್ ಆಗಿ ಕಣಕ್ಕಿಳಿಯುತ್ತಾರೆ. ಹಿಂದೂ ಮತಗಳು ಮತ್ತಷ್ಟು ಪೊಲರೈಸ್ ಆಗುತ್ತವೆ. ಡಿಕೆಯ ಇವತ್ತಿನ ಪರಿಸ್ಥಿತಿ ಕುಂಬು ಬಜ್ಜೆಯಿ ಯನ್ನುಅಡಿಕೆ ಕತ್ತರಿಯಲ್ಲಿ ಹಾಕಿ ನರ್ಗಯಿನ ಲೆಕ ಆಗಿದೆ.  

ಸುಬ್ರಮಣ್ಯದಲ್ಲಿ ವಸ್ತ್ರ ಸಂಹಿತೆ ಬೇಕು : ಸಂಘ ಪರಿವಾರ

0 thoughts on “ಕನಕಪುರದಲ್ಲಿ ಕಲ್ಲಡ್ಕ ಘರ್ಜನೆ । ಸಂಘ ಪರಿವಾರ ಬಂಡೆಯ ಬುಡಕ್ಕೇ ಇಟ್ಟಿದೆ ಡೈನಮೈಟ್ !”

  1. Pingback: ಕಾವಿನಮೂಲೆಯ ಬಳಿ ರಸ್ತೆ ಅಪಘಾತ । ಕೊಲ್ಲಮೊಗ್ರುವಿನ ಸ್ಕೂಟಿ ಸವಾರ ಗಂಭೀರ - ಹೊಸ ಕನ್ನಡ

error: Content is protected !!
Scroll to Top
%d bloggers like this: