Puttur: ಪುತ್ತೂರು; ಕಂದಕಕ್ಕೆ ಉರುಳಿದ ಕಾರು-ಸುಳ್ಯದ ಮೂವರು ಸಾವು

Puttur: ಪರ್ಲಡ್ಕ ಜಂಕ್ಷನ್ ಬಳಿ ಇರುವ ಬೈಪಾಸ್ ರಸ್ತೆಯಲ್ಲಿ ಕಾರೊಂದು ಹೊಂಡಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟ ಘಟನೆಯೊಂದು ನಡೆದಿದೆ. ಈ ಘಟನೆ ಇಂದು ನಸುಕಿನ ಜಾವ ಸರಿ ಸುಮಾರು 4.30ರ ಸುಮಾರಿಗೆ ಈ ಅಪಘಾತ ನಡೆದಿದೆ ಎನ್ನಲಾಗಿದೆ.
ಮೃತಪಟ್ಟರನ್ನು ಸುಳ್ಯ ಮೂಲದವರು ಎಂದು ವರದಿಯಾಗಿದೆ. ಪ್ರಾಥಮಿಕ ಮಾಹಿತಿಯ ಅನುಸಾರ ಅಣ್ಣು ನಾಯ್ಕ, ರಮೇಶ್ ನಾಯ್ಕ್ ಎಂಬುವವರು ಮೃತಪಟ್ಟಿದ್ದಾರೆ. ಇನ್ನೋರ್ವ ವ್ಯಕ್ತಿಯ ಗುರುತು ಇನ್ನೂ ತಿಳಿದು ಬಂದಿಲ್ಲ
ಬೈಪಾಸ್ ರಸ್ತೆಯ ಪರ್ಲಡ್ಕ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ. ಮಾಣಿ-ಮೈಸೂರು ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಪರ್ಲಡ್ಕ ಬಳಿಯ ಕಾವೇರಿ ಎಂಟರ್‌ಪ್ರೈಸಸ್‌ನ ಮುಂಭಾಗದಲ್ಲಿ ಸುಳ್ಯ ಮೂಲದ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ಗುಂಡಿಗೆ ಉರುಳಿ ಬಿದ್ದಿದೆ.
ಘಟನೆ ನಡೆದ ಸ್ಥಳದಲ್ಲಿ ನಸುಕಿನ ಜಾವ 4.30 ಕ್ಕೆ ದೊಡ್ಡ ಶಬ್ದವೊಂದು ಕೇಳಿ ಬಂದಿದ್ದು, ಆದರೆ ಅಪಘಾತದ ಕುರಿತು ಬೆಳಿಗ್ಗೆ ಆದಮೇಲಷ್ಟೇ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿರುವ ಕುರಿತು ವರದಿಯಾಗಿದೆ. ಕಾರಿನಲ್ಲಿದ್ದವರು ಬುಲೇರಿಕಟ್ಟೆಗೆ ಅಡುಗೆ ಕೆಲಸಕ್ಕೆ ಹೋದವರು ಎಂದು ವರದಿಯಾಗಿದೆ.