Day: December 3, 2019

ಮಹಾಭಾರತ | ರಾಕ್ಷಸ ಪ್ರವೃತ್ತಿ ಯಾರದ್ದು ಪಾಂಡವರದ್ದಾ ಘಟೋತ್ಕಚನದಾ ?

ಘಟೋತ್ಕಚನೆಂಬ ಹೆಸರು ಕೇಳಿದರೆ ಸಾಕು, ಮೈ ಮನಸ್ಸುಗಳಲ್ಲಿ ಒಂದು ವಿಚಿತ್ರ ರೋಮಾಂಚನ. ಅಬ್ಬಬ್ಬಾ ಆತನದೆಂತಹ ವ್ಯಕ್ತಿತ್ವ. ಅರಗಿನ ಮನೆಯಿಂದ ತಪ್ಪಿಸಿಕೊಂಡು ಪಾಂಡವರು ಬ್ರಾಹ್ಮಣ ವೇಷದಲ್ಲಿ ಸಂಚರಿಸುತ್ತಿದ್ದರು. ಅವರಿಗೆ ಎತ್ತ ಹೋಗಬೆಕೆಂಬ ಸ್ಪಷ್ಟತೆಯಿರಲಿಲ್ಲ. ಹಾಗೆ ಗೊತ್ತು ಗುರಿಯಿಲ್ಲದೆ ಅಂಡಲೆಯುತ್ತಿರುವಾಗ ಕಾಮ್ಯಕ ಗೊಂಡಾರಣ್ಯವನ್ನು ಪ್ರವೇಶಿಸುತ್ತಾರೆ. ದಟ್ಟ ನಿಭಿಡ ಭಯಾನಕ ಕಾಡದು. ಅದನ್ನು ಆಳುತ್ತಿದವನು ದುಷ್ಟ ರಾಕ್ಷಸ ದೊರೆ ಹಿಡಿ೦ಬ. ಪಾಂಡವರು ತೀರಾ ಬಳಲಿ ಮರದ ಕೆಳಗೆ ವಿಶ್ರಾಂತಿಗೆಂದು ಕುಳಿತುಬಿಡುತ್ತಾರೆ. ಆಗ ನಿಧಾನವಾಗಿ ಕತ್ತಲಾಗುತ್ತದೆ. ಎಲ್ಲರೂ ನಿದ್ರೆಗೆ ಜಾರುತ್ತಾರೆ. ಆದರೆ ಭೀಮನು …

ಮಹಾಭಾರತ | ರಾಕ್ಷಸ ಪ್ರವೃತ್ತಿ ಯಾರದ್ದು ಪಾಂಡವರದ್ದಾ ಘಟೋತ್ಕಚನದಾ ? Read More »

ದ್ವೇಷ ಕೆಟ್ಟದ್ದಲ್ಲ । ಆಂತರಿಕ ದೇಶದ್ರೋಹಿಗಳೆಡೆ ಇರಲಿ ಒಂದು ಆಕ್ರೋಶಭರಿತ ಹುಚ್ಚು ಕೇಕೆ !

ಅವಳು ಭಾರತಲ್ಲಿ ಹುಟ್ಟಿ ಬೆಳೆದು, ಇಲ್ಲಿನ ಅನ್ನ ನೀರು ತಿಂದು ಬೆಳೆದ ಹುಡುಗಿ. ಭಾರತದ ಸಾಂಪ್ರದಾಯಿಕ ಮನೆತನದಲ್ಲಿ ಒಳ್ಳೆಯ ಅಪ್ಪ ಅಮ್ಮ ಮತ್ತು ವಿದ್ಯಾಭ್ಯಾಸವನ್ನು ಪಡೆದು ಬೆಳೆದವಳು. ಮುಂದೊಂದು ದಿನ ಸ್ಕಾಲರ್ಶಿಪ್ ಪಡೆದು ಓದಲು ಅಮೆರಿಕಾ ದೇಶಕ್ಕೆ ಹೋಗುತ್ತಾಳೆ. ಓದಲು ಅಲ್ಲಿಗೆ ಹೋದಾಗ, ಮನದಲ್ಲಿ ಓದು ಒಂದೇ ಇರುತ್ತದೆ; ಬೇರೇನೂ ಇರುವುದಿಲ್ಲ. ಅಲ್ಲಿ ಓದುತ್ತ ಓದುತ್ತಾ ಆಕೆಗೆ ಭಾರತದ ಬಗ್ಗೆ ಜಿಗುಪ್ಸೆಯಾಗುತ್ತದೆ. ಮತ್ತೆ ಭಾರತಕ್ಕೆ ಬರಲೇ ಬಾರದೆಂದು ಆಕೆ ಅಂದುಕೊಳ್ಳುತ್ತಾಳೆ. ಈಗ ಅವಳಿಗೆ ಭಾರತದ ರಸ್ತೆಗಳು ಕಿರಿದಾಗಿಯೂ …

ದ್ವೇಷ ಕೆಟ್ಟದ್ದಲ್ಲ । ಆಂತರಿಕ ದೇಶದ್ರೋಹಿಗಳೆಡೆ ಇರಲಿ ಒಂದು ಆಕ್ರೋಶಭರಿತ ಹುಚ್ಚು ಕೇಕೆ ! Read More »

ಮನೀಶ್ ಪಾಂಡೆ ಇತ್ತೆ ನಮ್ಮಮಂಗ್ಳೂರ್ ಶೆಟ್ರೆನ ಮರ್ಮಯೆಗೆ !

ಕ್ರಿಕೆಟ್ಟಿಗ ಮನೀಶ್ ಪಾಂಡೆ ಈಗ ನಮ್ಮ ಮಂಗಳೂರಿನ ಅಫೀಶಿಯಲ್ ಮರ್ಮಯೆ ! ಮನೀಶ್ ಪಾಂಡೆ ಮತ್ತು ಆಶಿತಾ ಶೆಟ್ಟಿ ಮದುವೆಯಾಗುವ ಸುದ್ದಿ ಆವಾಗಾವಾಗ ಪತ್ರಕರ್ತರ ಹದ್ದಿನ ಕಣ್ಣಿಗೆ ಸಿಕ್ಕು ಸುದ್ದಿಯಾಗುತ್ತಿತ್ತು. ಈಗ ಅದಕ್ಕೆ ಅಫೀಶಿಯಲ್ ಮುದ್ರೆ ಬಿದ್ದಿದೆ. ನಿನ್ನೆ ಸೋಮವಾರ ಮುಂಬೈಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಅವರು ಸಪ್ತಪದಿ ತುಳಿದರು. ಭಾನುವಾರವಷ್ಟೇ, ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕವನ್ನು ಮುನ್ನಡೆಸಿ, ತಮಿಳುನಾಡುವಿನ ವಿರುದ್ಧ ಜಯಗಳಿಸಿದ್ದ ಮನೀಶ್ ಪಾಂಡೆ ಸೋಮವಾರಕ್ಕೆ ಮದುವೆ ಮನೆ ಸೇರಿದ್ದರು. ಮುಂಬೈ ವಾಸಿ ಆಶಿತಾ …

ಮನೀಶ್ ಪಾಂಡೆ ಇತ್ತೆ ನಮ್ಮಮಂಗ್ಳೂರ್ ಶೆಟ್ರೆನ ಮರ್ಮಯೆಗೆ ! Read More »

ಬೇಸನ್ ಲಾಡು ನೀವೇ ಮಾಡಿ । ಮಾಡುವ ಮೊದಲು ರೆಟ್ಟೆಯಲ್ಲಿ ಶಕ್ತಿ ಹೂಡಿ

ಬೇಸನ್ ಲಾಡು ಮಾಡಲು ಜಾಸ್ತಿ ಪದಾರ್ಥಗಳು ಬೇಕಿಲ್ಲವಾದರೂ ಇದು ತುಂಬಾ ಶ್ರಮ ಬೇಡುವ ಅಡುಗೆ. ಕಡಲೆ ಹಿಟ್ಟಿನ ಆಯ್ಕೆ, ತುಪ್ಪದಲ್ಲಿ ರೋಸ್ಟ್ ಮಾಡುವ ವಿಧಾನ, ನಿರಂತರ ಕಲಸುತ್ತಾ ಇರಬೇಕಾದ ಶ್ರಮ – ತಾಳ್ಮೆಮತ್ತು ಕೊನೆಯಲ್ಲಿ ತಣಿಸಿ ಸಕ್ಕರೆಯ ಪುಡಿಯನ್ನು ಹಾಕಿ ಉಂಡೆಗಟ್ಟಿಸುವ ಇತ್ಯಾದಿ ಪರಿಣತಿ ಬೇಡುವ ಅಡುಗೆ. ಕಡಲೆ ಹಿಟ್ಟು ಫ್ರೆಶ್ ಆಗಿರಬೇಕು. ಇಲ್ಲದೆ ಹೋದರೆ ಬೇಸನ್ ಲಾಡು ಕಹಿಯಾಗಿ ನಿಮಗೆ ಬೇಸರ ತರಿಸಬಹುದು. ಕಡಲೆ ಹಿಟ್ಟನ್ನು ಜರಡಿ ಹಾಕುವುದು ತುಂಬಾ ಮುಖ್ಯವಾಗುತ್ತದೆ. ಕಡಲೆ ಹಿಟ್ಟನ್ನು ತುಪ್ಪದಲ್ಲಿ …

ಬೇಸನ್ ಲಾಡು ನೀವೇ ಮಾಡಿ । ಮಾಡುವ ಮೊದಲು ರೆಟ್ಟೆಯಲ್ಲಿ ಶಕ್ತಿ ಹೂಡಿ Read More »

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ । ಈ ಶನಿವಾರ ನೀವು ಬಿಡುವು ಮಾಡ್ಕೋಬೇಕು

ಸ್ಥಳ : ಜಯಕರ್ನಾಟಕ ಸಭಾಭವನದ ಆವರಣ, ಕೆಯ್ಯೂರು ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಸಮ್ಮೇಳನ, ಇದರ ಪುತ್ತೂರು ಘಟಕದ, 19 ನೆಯ ವರ್ಷದ ಸಾಹಿತ್ಯ ಸಮ್ಮೇಳನವು ಇದೇ ಶನಿವಾರ, ಪುತ್ತೂರು ತಾಲ್ಲೂಕಿನ ಕೆಯ್ಯೂರಿ ನಲ್ಲಿ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ, ಪತ್ರಕರ್ತ ಡಾ.ನರೇಂದ್ರ ರೈ ದೇರ್ಲ ಅವರು ವಹಿಸಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುವ ಕನ್ನಡ ಭುವನೇಶ್ವರಿಯ ದಿಬ್ಬಣದಿಂದ ಮೊದಲ್ಗೊಂಡು ಸಂಜೆ 7.30 ರವರೆಗೆ ನಡೆಯಲಿದೆ. ಸಭಾ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 9.15 ರಿಂದ 11.15 ಮಧ್ಯದಲ್ಲಿ …

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ । ಈ ಶನಿವಾರ ನೀವು ಬಿಡುವು ಮಾಡ್ಕೋಬೇಕು Read More »

error: Content is protected !!
Scroll to Top