Home latest One plus & Oppo : ನೀವು ಒನ್ ಪ್ಲಸ್ ಹಾಗೂ ಒಪ್ಪೋ ಬಳಕೆದಾರರೇ? ಸ್ವಲ್ಪ...

One plus & Oppo : ನೀವು ಒನ್ ಪ್ಲಸ್ ಹಾಗೂ ಒಪ್ಪೋ ಬಳಕೆದಾರರೇ? ಸ್ವಲ್ಪ ಇತ್ತ ಗಮನಿಸಿ!!!

Hindu neighbor gifts plot of land

Hindu neighbour gifts land to Muslim journalist

ಟೆಲಿಕಾಮ್ ದೈತ್ಯ ಕಂಪನಿ ಭಾರತಿ ಏರ್ಟೆಲ್ , 4G ಸೇವೆಯಿಂದ 5G ಸೇವೆ ನೀಡಲು ಮುಂದಾಗಿದ್ದು, ಮನರಂಜನೆಯ ಜೊತೆಗೆ ಕೆಲಸವನ್ನು ನಿರ್ವಹಿಸಲು ಎಲ್ಲ ಟೆಲಿಕಾಮ್ ಸರ್ವೀಸ್ ಗಳು 5ಜಿ ಸೇವೆಯ ಮೂಲಕ ಅಪ್ಗ್ರೇಡ್ ಮಾಡುತ್ತಿದೆ.ಅವುಗಳಲ್ಲಿ ಇದೀಗ ಜನಪ್ರಿಯ ಮೊಬೈಲ್‌ ಸಂಸ್ಥೆಗಳಾದ ಒನ್‌ಪ್ಲಸ್‌ (OnePlus) ಹಾಗೂ ಒಪ್ಪೋ (Oppo) ಸಂಸ್ಥೆಯು ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳು 5G ಸೇವೆ ಸಪೋರ್ಟ್‌ ಪಡೆದಿವೆ.

ನರೇಂದ್ರ ಮೋದಿಯವರು, ಏರ್ಟೆಲ್ 5G ಸೇವೆಗೆ ಇತ್ತೀಚೆಗಷ್ಟೇ ಚಾಲನೆ ನೀಡಿದ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರ. ಈ ನಡುವೆ ಟೆಲಿಕಾಮ್ ಸರ್ವೀಸ್ ಗಳು ಜನರಿಗೆ ನೆರವಾಗಲು 5G ಸೇವೆಗೆ ಅಣಿಯಾಗಿದ್ದು, ಈಗಾಗಲೇ ಪ್ರಮುಖ ನಗರಗಳಲ್ಲಿ ಈ ಸೇವೆಯು ಆರಂಭವಾಗಿದೆ.

ಏರ್ಟೆಲ್ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿದಂತೆ ಪ್ರಮುಖ ನಗರಗಳಲ್ಲಿ 5G ಸೇವೆಯು ಫ್ರಾರಂಭ ಮಾಡುವ ಯೋಜನೆಯನ್ನು ಹಾಕಿಕೊಂಡಿತ್ತು. ಅದರಂತೆ ಇದೀಗ, ಭಾರ್ತಿ ಏರ್‌ಟೆಲ್‌ ಟೆಲಿಕಾಂ ಎಂಟು ನಗರಗಳಲ್ಲಿ 5G ಸೇವೆಯನ್ನು ಪ್ರಾರಂಭಿಸಿದೆ.

ಹಾಗೆಯೇ ಏರ್‌ಟೆಲ್‌ 5G ಸಪೋರ್ಟ್‌ ಪಡೆದ ಕೆಲವು ಬ್ರಾಂಡ್‌ಗಳ ಫೋನ್‌ಗಳ ಬಗ್ಗೆ ಭಾರ್ತಿ ಏರ್‌ಟೆಲ್‌ನ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ಇದರ ಜೊತೆಗೆ ರಿಲಯನ್ಸ್ ಜಿಯೋ ದೆಹಲಿ, ಮುಂಬೈ, ಕೋಲ್ಕತ್ತಾ, ವಾರಣಾಸಿ ಮತ್ತು ಚೆನ್ನೈ ಸೇರಿದಂತೆ ಐದು ನಗರಗಳಲ್ಲಿ ಜಿಯೋದ 5G ನೆಟ್‌ವರ್ಕ್ ಸೇವೆಗಳು ಲಭ್ಯವಿದೆ.

ಇತ್ತೀಚಿಗೆ ರಾಜಸ್ಥಾನದ ದೇವಾಲಯ ಪಟ್ಟಣವಾದ ನಾಥದ್ವಾರದಲ್ಲಿ, ಜಿಯೋ ಉಚಿತ 5G-ಚಾಲಿತ Wi-Fi ಸೇವೆಗಳನ್ನು ಪ್ರಾರಂಭಿಸಿದೆ. ಸದ್ಯ ಏರ್‌ಟೆಲ್‌ನ 5G ನೆಟ್‌ವರ್ಕ್ ಸೇವೆಗಳು ಮುಂಬೈ, ದೆಹಲಿ, ವಾರಣಾಸಿ, ಚೆನ್ನೈ, ಸಿಲಿಗುರಿ, ನಾಗ್ಪುರ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ. ವರ್ಷಾಂತ್ಯದ ವೇಳೆಗೆ ಟೆಲಿಕಾಂಗಳು ಹೆಚ್ಚಿನ ನಗರಗಳನ್ನು ತಲುಪಲಿವೆ .

ಒನ್‌ಪ್ಲಸ್‌ ಸಂಸ್ಥೆಯು ಫ್ಲ್ಯಾಗ್‌ಶಿಪ್‌ ಫೋನ್‌ಗಳು ಸೇರಿದಂತೆ ಕೆಲವು ಫೋನ್‌ಗಳು ಏರ್‌ಟೆಲ್‌ನ 5G ನೆಟ್‌ವರ್ಕ್‌ ಬೆಂಬಲ ಪಡೆದಿದ್ದು, ಇನ್ನು ಕೆಲವು ಫೋನ್‌ಗಳು 5G ಸಪೋರ್ಟ್‌ ಅನ್ನು ಪಡೆದಿಲ್ಲ.

ಬರೀ ಒನ್‌ಪ್ಲಸ್‌ ಅಷ್ಟೇ ಅಲ್ಲದೆ, ಕೆಲವು ಒಪ್ಪೋ ಫೋನ್‌ಗಳು 5G ಬೆಂಬಲ ಹೊಂದಿಲ್ಲ ಎಂಬ ಕುರಿತಾದ ಬಗ್ಗೆ ಟೆಲಿಕಾಂ ಟಾಕ್ ವರದಿ ಮಾಡಿದೆ.

5G ಸಪೋರ್ಟ್‌ ಪಡೆದ ಒನ್‌ಪ್ಲಸ್‌ ಹಾಗೂ ಒಪ್ಪೋ ಫೋನ್‌ಗಳ ಲಿಸ್ಟ್‌ ಹೀಗಿದೆ:

ಒನ್‌ಪ್ಲಸ್‌ ನಾರ್ಡ್‌

ಒನ್‌ಪ್ಲಸ್‌ 9

ಒನ್‌ಪ್ಲಸ್‌ 9 ಪ್ರೊ

ಒನ್‌ಪ್ಲಸ್‌ ನಾರ್ಡ್‌ CE

ಒನ್‌ಪ್ಲಸ್‌ ನಾರ್ಡ್‌ CE 2

ಒನ್‌ಪ್ಲಸ್‌ 10 ಪ್ರೊ 5G

ಒನ್‌ಪ್ಲಸ್‌ ನಾರ್ಡ್‌ CE LITE 2

ಒನ್‌ಪ್ಲಸ್‌ 10R

ಒನ್‌ಪ್ಲಸ್‌ 10T

ಒನ್‌ಪ್ಲಸ್‌ 8

ಒನ್‌ಪ್ಲಸ್‌ 8T

ಒನ್‌ಪ್ಲಸ್‌ 8 ಪ್ರೊ

ಒನ್‌ಪ್ಲಸ್‌ 9RT

ಒನ್‌ಪ್ಲಸ್‌ ನಾರ್ಡ್‌ 2

ಒನ್‌ಪ್ಲಸ್‌ 9R

ಇಷ್ಟು ವನ್ ಪ್ಲಸ್ ಮೊಬೈಲ್ ಗಳಲ್ಲಿ 5ಜಿ ಸೇವೆ ಲಭ್ಯವಾಗಲಿವೆ.

ಇದರ ಜೊತೆಗೆ 5ಜಿ ಸೇವೆ ನೀಡುವ ಒಪ್ಪೋ ಸ್ಮಾರ್ಟ್ ಫೋನ್ ಗಳ ಲಿಸ್ಟ್ ಹೀಗಿದೆ

ಒಪ್ಪೋ ರೆನೋ 5G ಪ್ರೊ

ಒಪ್ಪೋ ರೆನೋ 6

ಒಪ್ಪೋ ರೆನೋ 6 ಪ್ರೊ

ಒಪ್ಪೋ F19 ಪ್ರೊ ಪ್ಲಸ್‌

ಒಪ್ಪೋ A53s

ಒಪ್ಪೋ A74

ಒಪ್ಪೋ ರೆನೋ 7 ಪ್ರೊ 5G

ಒಪ್ಪೋ ರೆನೋ F21 ಪ್ರೊ 5G

ಒಪ್ಪೋ ರೆನೋ 7

ಒಪ್ಪೋ ರೆನೋ 8

ಒಪ್ಪೋ ರೆನೋ 8 ಪ್ರೊ

ಒಪ್ಪೋ K10 5G

ಒಪ್ಪೋ F21s ಪ್ರೊ 5G

ಒಪ್ಪೋ ಫೈಂಡ್‌ X2

ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಮಾಡುತ್ತದೆಯೇ ಎಂಬುದನ್ನು ತಿಳಿಯಲು ಹೀಗೆ ಚೆಕ್‌ ಮಾಡಿ:

ನಿಮ್ಮ ಫೋನ್‌ನಲ್ಲಿ, ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋದ ಬಳಿಕ, ‘Wi-Fi ಮತ್ತು Network’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಆ ಬಳಿಕ ‘SIM ಮತ್ತು Network’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.’ Preferred network type’ ಆಯ್ಕೆಯಲ್ಲಿ ನೀವು ಲಭ್ಯವಿರುವ ನೆಟ್‌ವರ್ಕ್ ಮಾಹಿತಿ ಬಗ್ಗೆ ತಿಳಿಯಬಹುದು.

ನಿಮ್ಮ ಫೋನ್ 5G ಅನ್ನು ಬೆಂಬಲಿಸಿದರೆ, ಅಲ್ಲಿ 2G / 3G / 4G / 5G ಎಂದು ಪಟ್ಟಿ ಮಾಡಲಾಗುತ್ತದೆ. ಈ ವಿಧಾನದ ಮೂಲಕ ಮೊಬೈಲ್ನಲ್ಲಿ 5ಜಿ ಬೆಂಬಲದ ಬಗ್ಗೆ ಮಾಹಿತಿ ಪಡೆಯಬಹುದು.