ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳೇ ಇರುವ ರೈಲು ನಿಲ್ದಾಣವಿದು ! ಇಲ್ಲಿ ಎಲ್ಲಿ ನೋಡಿದರೂ ನಿಮಗೆ ಕಾಣುವುದು ಮಹಿಳೆಯರೇ!
ಮಹಿಳಾ ದಿನಾಚರಣೆ ಇನ್ನೇನು ಹತ್ತಿರ ಬರ್ತಾ ಇದೆ. ಈ ವಿಶೇಷ ದಿನಾಚರಣೆಯ ಅಂಗವಾಗಿ ಒಂದು ಮಾಹಿತಿ ನಿಮಗೆ ನಾವು ಕೊಡುತ್ತೇವೆ. ಇದು ಎಲ್ಲಾ ಮಹಿಳಾಮಣಿಗಳು ಮೆಚ್ಚುವಂತ ವಿಷಯ. ಆಂಧ್ರಪ್ರದೇಶದ ಚಂದ್ರಗಿರಿಯ ‘ ಮಹಿಳಾ ಚಾಲಿತ ರೈಲು’ ಇಲ್ಲಿ ಪ್ರತಿಯೊಂದು ವಿಭಾಗದಲ್ಲಿ ಕೆಲಸ ನಿರ್ವಹಿಸುವವರು ಮಹಿಳೆಯರೇ. ಇತ್ತೀಚೆಗೆ ಇದು ಭರಪೂರ ಪ್ರಶಂಸೆಯನ್ನು ಪಡೆದುಕೊಂಡಿದೆ. ದಕ್ಷಿಣ ಮಧ್ಯ ರೈಲ್ವೆಯು 2018 ರಲ್ಲಿ ಕೆಲಸದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ನಾಲ್ಕು ರೈಲು ನಿಲ್ದಾಣಗಳನ್ನು ಎಲ್ಲಾ ಮಹಿಳಾ ಉದ್ಯೋಗಿ ನಿಲ್ದಾಣಗಳಾಗಿ ಮಾರ್ಪಡಿಸಿದೆ. ಕಳೆದ ನಾಲ್ಕು …