Smartphone Tips: ರೈಲ್ವೆ ಪ್ರಯಾಣಿಕರಿಗೆ ಮುಖ್ಯ ಮಾಹಿತಿ- ನಿಲ್ದಾಣದಲ್ಲಿ ಮೊಬೈಲ್ ನಲ್ಲಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

Technology news smartphone tips don't do these things on mobile at railway station

Smartphone Tips: ಭಾರತೀಯ ರೈಲ್ವೇ( Indian Railways) ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ. ರೈಲು ಪ್ರಯಾಣ ಆರ್ಥಿಕ ದೃಷ್ಟಿಯಿಂದ ಮಾತ್ರವಲ್ಲದೇ, ಆರಾಮದಾಯಕ ಪ್ರಯಾಣದಿಂದಾಗಿ ಹೆಚ್ಚು ಖ್ಯಾತಿ ಪಡೆದಿದೆ.

ನೀವು ರೈಲಿನಲ್ಲಿ ಪ್ರಯಾಣಿಸುವಾಗ ಕೆಲವು ವಿಷಯಗಳ ಕಡೆಗೆ ಹೆಚ್ಚು ಗಮನ ವಹಿಸಬೇಕು. ನೀವು ಸಣ್ಣ ನಿರ್ಲಕ್ಷ್ಯ ತೋರಿದರೂ ಕೂಡ ನಿಮ್ಮ ಖಾತೆ ಸಂಪೂರ್ಣವಾಗಿ ಖಾಲಿಯಾಗಬಹುದು(Smartphone Tips)ಎಚ್ಚರ !! ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನೀವು ರೈಲಿನಲ್ಲಿ ಹಾಗೂ ರೈಲು ನಿಲ್ದಾಣದಲ್ಲಿ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬಾರದು.

* ರೈಲ್ವೆ ನಿಲ್ದಾಣದಲ್ಲಿ ಚಾರ್ಜಿಂಗ್
ಹೆಚ್ಚಿನ ಸಲ ಸ್ಕ್ಯಾಮರ್‌ಗಳು ಈ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಪ್ರಯಾಣಿಕರನ್ನು ಮೋಸ ಮಾಡಿ ಅವರ ಫೋನ್‌ಗಳಿಂದ ವೈಯಕ್ತಿಕ ಮಾಹಿತಿಗಳನ್ನು ಕಳ್ಳತನ ಮಾಡುವ ಸಾಧ್ಯತೆಗಳಿವೆ. ಹೀಗಾಗಿ, ನೀವು ಎಚ್ಚರಿಕೆ ವಹಿಸಬೇಕು.

ಇದನ್ನು ಓದಿ: Stove Cleaning Tips: ಗ್ಯಾಸ್ ಸ್ಟವ್ ಕ್ಲೀನ್ ಮಾಡುವ ಸಿಂಪಲ್ ವಿಧಾನಗಳಿವು !!

* ಹಾಟ್‌ಸ್ಪಾಟ್
ನೀವೇನಾದರೂ ರೈಲ್ವೆ ನಿಲ್ದಾಣದಲ್ಲಿ ಬೇರೆಯವರಿಂದ ಅದರಲ್ಲೂ ಅಪರಿಚಿತರಿಂದ ಹಾಟ್‌ಸ್ಪಾಟ್ ಕನೆಕ್ಷನ್ ಮಾಡಿಕೊಂಡರೆ ಎಚ್ಚರ!! ಇದರಿಂದ ನಿಮ್ಮ ವೈಯುಕ್ತಿಕ ಮಾಹಿತಿಗಳನ್ನು ಹ್ಯಾಕರ್ ಗಳು ಕದಿಯುವ ಸಾಧ್ಯತೆಯಿದೆ. ನೀವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸುರಕ್ಷಿತವಾಗಿರಿಸಲು ಜಾಗೃತೆ ವಹಿಸಬೇಕು. ರೈಲಿನಲ್ಲಿ ಪ್ರಯಾಣಿಸುವ ಸಂದರ್ಭ ಈ ವಿಚಾರದ ಬಗ್ಗೆ ಜಾಗ್ರತೆ ವಹಿಸಿರಿ.

* ವೈ-ಫೈ
ರೈಲಿನಲ್ಲಿ ಪ್ರಯಾಣಿಸುವಾಗ ನೆಟ್ವರ್ಕ್ ಸಮಸ್ಯೆ ಉಂಟಾಗುವುದು ಸಹಜ. ಆದರೆ, ನೀವು ರೈಲಿನಲ್ಲಿ ಪ್ರಯಾಣ ಮಾಡುವಾಗ ಯಾವುದೇ ಪಾಸ್ವರ್ಡ್ ಇಲ್ಲದ ತೆರೆದ ವೈಫೈ ಇದೆ ಎಂದು ನಿಮ್ಮ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬೇಡಿ. ಇದರಿಂದ ನಿಮ್ಮ ಖಾತೆ ಮಾತ್ರವಲ್ಲದೇ ವೈಯಕ್ತಿಕ ಮಾಹಿತಿ ಕೂಡ ಕಳ್ಳತನ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ: Kitchen Tips: ಮಹಿಳೆಯರೇ ಅಪ್ಪಿ ತಪ್ಪಿಯೂ ಈ ಪಾತ್ರೆಗಳನ್ನು ಉಲ್ಟಾ ಇಡಬೇಡಿ !! ಇಟ್ಟರೆ ತಪ್ಪಿದ್ದಲ್ಲ ಅಪಾಯ

Leave A Reply

Your email address will not be published.