ಮರದ ಮೇಲಿದ್ದ ಕೋತಿಯನ್ನು ಅದ್ಭುತವಾಗಿ ಜಿಗಿದು ಹಿಡಿದು ತನ್ನ ಬೇಟೆಯನ್ನಾಗಿಸಿಕೊಂಡ ಚಿರತೆ !! |ಭಯಾನಕ ಹಂಟಿಂಗ್ ವೀಡಿಯೋ ವೈರಲ್
ಇದು ಇಂಟರ್ನೆಟ್ ಯುಗ. ನಮಗೆ ಬೇಕಾಗಿದ್ದೆಲ್ಲಾ ಬೆರಳ ತುದಿಯಲ್ಲೇ ಸಿಗುತ್ತದೆ. ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವೀಡಿಯೋಗಳಲ್ಲಿ ಕಾಡಿನ ಪ್ರಾಣಿಗಳ ವೀಡಿಯೋಗಳು ಸೇರಿವೆ. ಇತ್ತೀಚಿಗೆ ಟ್ವಿಟ್ಟರ್‌ನಲ್ಲಿ ಕೋತಿಯನ್ನು ಬೇಟೆಯಾಡಿದ ಚಿರತೆಯ ಅದ್ಭುತ ವೀಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ಅಪರೂಪದ ಭಯಾನಕ ವೀಡಿಯೋವನ್ನು ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ. ಈ ವೀಡಿಯೋ ಕ್ಲಿಪ್ನಲ್ಲಿ ಹಸಿದ ಚಿರತೆ ಮರವನ್ನು ಹತ್ತಿ ಕೋತಿಯ ಮೇಲೆ ದಾಳಿ ಮಾಡುವುದನ್ನು ಕಾಣಬಹುದು. ಮರದಿಂದ ಇಳಿಯುವಾಗ ಚಿರತೆ …