South African Cheetah Dies: ಆಕ್ರಮಣಕಾರಿಯಾಗಿ ಸಂಭೋಗಿಸಿದ ಗಂಡು ಚೀತಾ! ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ಮತ್ತೊಂದು ಚೀತಾ ಸಾವು!

Aggressive intercourse by male cheetah South African Cheetah Dies

South African Cheetah Dies: ದಕ್ಷಿಣ ಆಫ್ರಿಕಾದಿಂದ (South Africa) ಭಾರತಕ್ಕೆ (India) ತರಲಾಗಿದ್ದ ಮತ್ತೊಂದು ಚೀತಾ (Cheetah) ಮಧ್ಯಪ್ರದೇಶದ (Madhya Pradesh)ದಲ್ಲಿ ಮಂಗಳವಾರ ಸಾವನ್ನಪ್ಪಿದೆ (South African Cheetah Dies). ಈ ಮೂಲಕ ಕಳೆದ 40 ದಿನಗಳಲ್ಲಿ ಮೂರು ಚೀತಾಗಳು  ಸಾವಿಗೀಡಾಗಿವೆ.

ಹೌದು, ದಕ್ಷಿಣ ಆಫ್ರಿಕಾ(South Africa) ಮೂಲದ ಇನ್ನೊಂದು ಹೆಣ್ಣು ಚೀತಾ ದಕ್ಷಾ ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ(Kuno National Park) ಮಂಗಳವಾರ ಸಾವು ಕಂಡಿದೆ. ಭಾರತಕ್ಕೆ ಬಂದ ಎರಡೇ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಮೂಲದ ಚೀತಾದ ಮೂರನೇ ಸಾವು ಇದಾಗಿದೆ. ಮಂಗಳವಾರ ಗಂಡು ಚೀತಾದ ಆಕ್ರಮಣಕಾರಿ ಸಂಭೋಗದಿಂದಾಗಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದ ‘ದಕ್ಷಾ'(Dksha) ಹೆಸರಿನ ಚೀತಾ ಸಾವು ಕಂಡಿದೆ.

ದಕ್ಷಾಳನ್ನು ಉದ್ಯಾನವನದ ಆವರಣದಲ್ಲಿ ಬಿಡಲಾಗಿತ್ತು. ಅಲ್ಲದೆ ಅಲ್ಲಿ ಎರಡು ಗಂಡು ಚೀತಾಗಳನ್ನು ಬಿಡಲಾಗಿತ್ತು. ಈ ವೇಳೆ ಗಂಡು ಚೀತಾದ ಆಕ್ರಮಣಕಾರಿ ಸಂಭೋಗದ ಕಾರಣದಿಂದಾಗಿ ಚೀತಾ ಸಾವು ಕಂಡಿದೆ ಎಂದು ಹೇಳಲಾಗಿದೆ. ದಕ್ಷ ಚೀತಾ ಮೊದಲು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಅದಕ್ಕೆ ಅಗತ್ಯ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಧ್ಯಾಹ್ನ 12 ರ ವೇಳೆಗೆ ಅದು ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು(Forest Officer’s) ತಿಳಿಸಿದ್ದಾರೆ

ಅಂದಹಾಗೆ ಕುನೋದಲ್ಲಿ ಕಳೆದ ಎರಡು ತಿಂಗಳಲ್ಲಿ ಸಾವು ಕಂಡ ಮೂರನೇ ಆಫ್ರಿಕಾದ ಚೀತಾ ಇದಾಗಿದೆ. ಆ ಮೂಲಕ ಕೇಂದ್ರ ಸರ್ಕಾರದ ಚೀತಾ ಸಂರಕ್ಷಣಾ ಯೋಜನೆಗೆ ಮತ್ತೊಂದು ದೊಡ್ಡ ಪೆಟ್ಟು ಬಿದ್ದಂತಾಗಿದೆ. ಕೆಲವು ವಾರಗಳ ಹಿಂದೆ, ಏಪ್ರಿಲ್‌ನಲ್ಲಿ, ದಕ್ಷಿಣ ಆಫ್ರಿಕಾದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಗೊಂಡಿದ್ದ ಆರು ವರ್ಷದ ಗಂಡು ಚೀತಾ ಉದಯ್ ಹೃದಯಾಘಾತದಿಂದ(Hart Attack) ಸಾವು ಕಂಡಿತ್ತು. ಇದಕ್ಕೂ ಮೊದಲು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿದ್ದ ಚೀತಾ ‘ಸಾಶಾ’ ಮೂತ್ರಪಿಂಡದ ಕಾಯಿಲೆಯಿಂದ ಸಾವು ಕಂಡಿತ್ತು.

70 ವರ್ಷಗಳ ಹಿಂದೆ ದೇಶದಲ್ಲಿ ಕಣ್ಮರೆಯಾಗಿದ್ದ ಚೀತಾ(Cheeta) ಪ್ರಭೇದವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ 20 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಕೇಂದ್ರ ಸರ್ಕಾರದ(Central Government) ಯೋಜನೆ ಅಡಿಯಲ್ಲಿ ಸೆಪ್ಟೆಂಬರ್ ಮತ್ತು ಫೆಬ್ರವರಿಯಲ್ಲಿ ಒಟ್ಟು 20 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿತ್ತು.

ಆರಂಭಿಕ ಹಂತದ ಭಾಗವಾಗಿ ಕಳೆದ ಸೆಪ್ಟೆಂಬರ್‌ನಲ್ಲಿ 8 ಚೀತಾಗಳನ್ನು ನಮೀಬಿಯಾದಿಂದ ಕರೆತಂದಿದ್ದರೆ, ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇವುಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್‌ಗೆ ಬಿಡಲಾಗಿತ್ತು. ಆದರೆ, ಈ ಚೀತಾಗಳ ಸಾವುಗಳು ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದ ಬಗ್ಗೆ ಕಳವಳವನ್ನುಂಟು ಮಾಡಿದೆ. ಆದರೆ, ಉಳಿದ ಚೀತಾಗಳು ಉತ್ತಮವಾಗಿದ್ದು ಆರೋಗ್ಯದಿಂದಿವೆ ಎಂದು ಸರ್ಕಾರವು ಹೇಳಿದೆ.

ಇದನ್ನೂ ಓದಿ:A student pepper sprayed a teacher in the face: ಫೋನ್‌ ಕಿತ್ಕೊಂಡ ಶಿಕ್ಷಕನ ಮುಖಕ್ಕೆ ​​ಪೆಪ್ಪರ್ ಸ್ಪ್ರೇ ಮಾಡಿದ ವಿದ್ಯಾರ್ಥಿನಿ.. ಮುಂದೇನಾಯ್ತು? ಇಲ್ಲಿದೆ ನೋಡಿ ವಿಡಿಯೋ!

Leave A Reply

Your email address will not be published.