ಕೆನಡಾದಲ್ಲಿ ಭೀಕರ ಅಪಘಾತ : ಐವರು ಭಾರತೀಯ ವಿದ್ಯಾರ್ಥಿಗಳು ಸಾವು!

ಕೆನಡಾದ ಟೊರೊಂಟೊ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಟೊರೊಂಟೊ ಬಳಿ ಆಟೋ ಅಪಘಾತ ಸಂಭವಿಸಿದ್ದು, ಐವರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಶನಿವಾರ ನಡೆದಿದೆ. ಈ ಆಟೋ ಅಪಘಾತದಲ್ಲಿ ಕನಿಷ್ಠ 5 ಭಾರತೀಯ ವಿದ್ಯಾರ್ಥಿಗಳು ನಿಧನರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಭಾರತದ ಆಯುಕ್ತ ಅಜಯ್ ಬಿಸಾರಿಯಾ ಎಂದು ಮಾಹಿತಿ ನೀಡಿದ್ದಾರೆ.