Canada: ‘ಡಾಕ್ಟ್ರೇ, ಡಾಕ್ಟ್ರೇ ಪ್ಲೀಸ್ ಈ ಎರಡು ಕೈ ಬೆರಳು ಕತ್ತರಿಸಿ’ ಎಂದು ಹಠ ಹಿಡಿದ ಯುವಕ – ಕಾರಣ ?

Canada : ವೈದ್ಯರು ನಮ್ಮ ಪಾಲಿನ ದೇವರೆಂದೇ ಹೇಳಬಹುದು. ಏಕೆಂದರೆ ಆರೋಗ್ಯದಲ್ಲಿ ಕೊಂಚ ಏರುಪೇರಾದರೂ, ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆಗಳು ಉಂಟಾದರೂ ಕೂಡ ನಮಗೆ ಅವರು ಗುಣಪಡಿಸಿ ಮರುಜೀವವನ್ನು ನೀಡುತ್ತಾರೆ. ಹೀಗಾಗಿ ನಾವು ಎಲ್ಲರಿಗಿಂತ ಹೆಚ್ಚಾಗಿ ನಂಬುವುದು ವೈದ್ಯರನ್ನೇ. ಆದರೆ ಇಲ್ಲೊಬ್ಬ ವ್ಯಕ್ತಿ ಸೀದಾ ವೈದ್ಯರ ಬಳಿ ಹೋಗಿ ತನ್ನ ಎರಡು ಕೈಬೆರಳನ್ನು ಕತ್ತರಿಸಿ ಕೊಡಿ ಎಂದು ಹಠ ಹಿಡಿದಿದ್ದಾನೆ.

ಇದನ್ನೂ ಓದಿ: Suicide: ಖ್ಯಾತ ಯೌಟ್ಯೂಬ್ ಜೋಡಿ 7 ಅಂತಸ್ತಿನ ಅಪಾರ್ಟ್ಮೆಂಟ್ ನಿಂದ ಹಾರಿ ಆತ್ಮಹತ್ಯೆ

ಹೌದು, ಕೆನಾಡದಲ್ಲಿ(Canada) ಆರೋಗ್ಯವಂತ ಯುಶಕನೊಬ್ಬ ವೈದ್ಯರ ಬಳಿ ಹೋಗಿ ತನ್ನ ಎರಡು ಕೈ ಬೆರಳುಗಳನ್ನು ಕತ್ತರಿಸುವಂತೆ ದುಂಬಾಲು ಬಿದ್ದ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯ ಆತಂಕಗಮನಿಸಿದ ವೈದ್ಯರು ಪರೀಕ್ಷೆ ನಡೆಸಿದಾಗ ಆ ಬೆರಳುಗಳಿಗೆ ಏನೂ ಆಗಿರಲಿಲ್ಲ. ಎಲ್ಲವೂ ಆರೋಗ್ಯಕರವಾಗಿದ್ದವು. ವೈದ್ಯರು ನಮಗೆ ಕಣ್ಣಿಗೆ ಕಾಣಿಸದಿರುವುದು ಏನೋ ಇದೆ ಎಂದು ಅರಿತು ಕೈಗಳ ಎಕ್ಸ್-ರೇ ಕೂಡ ಮಾಡಿದ್ದಾರೆ ಆದರೆ ಅದರಲ್ಲೂ ಯಾವುದೇ ಸಮಸ್ಯೆ ಕಾಣಿಸಲಿಲ್ಲ. ಆದರೂ ಆತ ಕತ್ತರಿಸುವಂತೆ ಕೇಳಿದ್ದು ವೈದ್ಯರನ್ನು ಬೆಚ್ಚಿಬೀಳಿಸಿದೆ. ನಂತರ ವೈದ್ಯರು ನಿಧಾನವಾಗಿ ಎಲ್ಲವನ್ನೂ ಗಮನಿಸಿದಾಗ ನಿಜಾಂಶ ಬಯಲಾಗಿದೆ.

ಇದನ್ನೂ ಓದಿ: US: ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯ ಲವ್ವಿ ಡವ್ವಿ – ಬೆತ್ತಲೆಯಾಗಿಯೇ ಪೋಲಿಸರಿಗೆ ತಗಲಾಕ್ಕೊಂಡ್ಲು !!

ಅಷ್ಟಕ್ಕೂ ಆ ಯುವಕನಿಗೆ ಆಗಿದ್ದೇನು?

20 ವರ್ಷ ವಯಸ್ಸಿನ ಈ ವ್ಯಕ್ತಿಗೆ ಸದಾ ತನ್ನ ಎಡಗೈಯಲ್ಲಿ ನಾಲ್ಕು ಮತ್ತು ಐದನೇ ಬೆರಳುಗಳು ನೋಯುತ್ತಿರುವಂತೆ ಭಾಸವಾಗುತ್ತಿತ್ತು. ಒಮ್ಮೊಮ್ಮೆ ಆ ಬೆರಳುಗಳು ತನ್ನದಲ್ಲವೇನೋ ಎಂದೂ ಅನಿಸುತ್ತಿತ್ತು. ಬೆರಳುಗಳಲ್ಲಿ ತೀವ್ರ ನೋವು, ಸುಟ್ಟ ಅನುಭವ, ಕೊಳೆತಂತೆಲ್ಲಾ ಅನಿಸುತ್ತಿತ್ತು. ಇದೊಂದು ಖಾಯಿಲೆ ಎಂದು ತಿಳಿದುಬಂದಿದೆ.

ಏನಿದು ಖಾಯಿಲೆ?

ವೈದ್ಯರು ಆ ಯುವಕನ ತೊಳಲಾಟ ಕಂಡು ಇತರ ಪರೀಕ್ಷೆ ನಡೆಸಿದಾಗ ಆತನಿಗೆ BIID ಎನ್ನುವ ಕಾಯಿಲೆಯಿಂದ ಬಳಲುತ್ತಿರುವುದು ತಿಳಿದುಬಂದಿದೆ. ಇದು ಮಾನಸಿಕ ಅಸ್ವಸ್ಥತೆಯಾಗಿದ್ದು, ಈ ಸಮಸ್ಯೆ ಹೊಂದಿರುವವರು ದೇಹದ ಹಲವು ಭಾಗಗಳನ್ನು ತನ್ನದಲ್ಲ, ಅವು ಸರಿ ಇಲ್ಲ ಎಂದೇ ಭಾವಿಸುತ್ತಾರೆ. ಹಾಗೆಯೇ ಆ ಭಾಗಗಳು ದೇಹದ ಭಾಗವಾಗಿರಬಾರದು ಎಂದು ಬಯಸುತ್ತಾರೆ

Leave A Reply

Your email address will not be published.