ಕೆಲಸಕ್ಕೆ ಜನ ಸಿಗ್ತಾ ಇಲ್ಲ ಎಂದು ಈ ಸರಕಾರ ತೆಗೆದುಕೊಂಡ ನಿರ್ಧಾರ ನೋಡಿ!!!

ದೇಶದಾದ್ಯಂತ ಅನೇಕ ಅಭ್ಯರ್ಥಿಗಳು ಉದ್ಯೋಗವನ್ನು ಅರಸಲು ಪರದಾಡುತ್ತಿರುವ ಪ್ರಮೇಯಗಳನ್ನು ನಾವೆಲ್ಲ ಕಂಡಿದ್ದೇವೆ. ವಿಧ್ಯಾಭ್ಯಾಸ ಮುಗಿಯುತ್ತಿದ್ದಂತೆ ಕನಸಿನ ಉದ್ಯೋಗ ಪಡೆಯಲು ಯುವಜನತೆ ನಾನಾ ರೀತಿಯ ಸರ್ಕಸ್ ಮಾಡುವುದು ಸಾಮಾನ್ಯ.

ನಿರುದ್ಯೋಗ ದೇಶದ ಜ್ವಲಂತ ಸಮಸ್ಯೆಯಾಗಿದ್ದು, ಸಮಸ್ಯೆಗೆ ಪರಿಹಾರೋಪಾಯವಾಗಿ ಸರ್ಕಾರ ಅನೇಕ ಯೋಜನೆಗಳ ಮೂಲಕ ಸ್ವ ಉದ್ಯೋಗ ಸೃಷ್ಟಿಗೆ ಮುಕ್ತ ಅವಕಾಶ ಕಲ್ಪಿಸಿದೆ.

ಈ ಸಮಸ್ಯೆ ಮುಂದುವರಿಯುತ್ತಿರುವ ದೇಶ ಭಾರತ ಮಾತ್ರವಲ್ಲದೆ, ಹೊರ ದೇಶಗಳಲ್ಲಿಯೂ ಕಂಡುಬರುತ್ತಿದ್ದು, ಹಾಗಾಗಿ, ನಿರುದ್ಯೋಗ ನಿವಾರಣೆಗೆ ಹೊಸ ಹೆಜ್ಜೆ ಇಡಲು ಮುಂದಾಗಿದೆ.

ಕೆನಡಾದಲ್ಲಿ ನಿರುದ್ಯೋಗ ಪ್ರಮಾಣ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಾಮಾನ್ಯ ಕೆಲಸಗಳಿಗೆ ನೌಕಕರು ಸಿಗದೇ ಇರುವುದರಿಂದ ಅಲ್ಲಿನ ಸರ್ಕಾರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ ಕೆಲವೊಂದು ತಾತ್ಕಾಲಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಕೆನಡಾದಲ್ಲಿ ಹೆಚ್ಚುತ್ತಿರುವ ನೌಕರರ ಕೊರತೆಯನ್ನು ತಗ್ಗಿಸಲು ವಲಸೆ ಮಂತ್ರಿ ಶಾನ್ ಫ್ರೇಸರ್ ತಾತ್ಕಾಲಿಕ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಹೊಸ ನೀತಿಯ ಅನ್ವಯ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಗಂಟೆಗಳ ಕಾಲ ಪಾರ್ಟ್​-ಟೈಮ್ ಉದ್ಯೋಗ ಮಾಡಬಹುದಾಗಿದೆ.ಈ ಮೊದಲು ಕಾಲೇಜು ಆವರಣದ ಹೊರಗೆ ಮಾತ್ರ ಕೆಲಸ ಮಾಡಲು ಅನುಮತಿ ದೊರೆತಿತ್ತು.

ಆದರೆ ಇದೀಗ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತರಗತಿ ಅವಧಿಯಲ್ಲಿಯೂ ಕೂಡ ಕೆಲಸ ಮಾಡಬಹುದಾಗಿದೆ. ಈ ನಿರ್ಧಾರವು ನವೆಂಬರ್ 15 2022 ರಿಂದ ಡಿಸೆಂಬರ್ 31 2023ರ ವರೆಗೆ ಜಾರಿಯಲ್ಲಿ ಇರಲಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಇನ್ನೂ ಮುಂದೆ ವಾರಕ್ಕೆ 20 ಗಂಟೆ ಕೆಲಸ ಮಾಡಬಹುದಾಗಿದೆ.

ನೌಕರರ ಕೊರತೆ ತಗ್ಗಿಸಲು ಸರ್ಕಾರ ಕೈಗೊಂಡಿರುವ ಹೊಸ ಕ್ರಮ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.