Viral Video: ಛತ್ತೀಸ್ ಗಢ ಒಲಿಂಪಿಕ್ಸ್ ವೇಳೆ ಸೀರೆಯಲ್ಲಿ ಕಬಡ್ಡಿ ಆಡಿದ ಮಹಿಳೆಯರು |

ಛತ್ತೀಸ್ಗಡ ಒಲಿಂಪಿಕ್ಸ್ 2022-23ರ ಸಮಯದಲ್ಲಿ ಮಹಿಳೆಯರ ಗುಂಪೊಂದು ಕಬಡ್ಡಿ ಆಡಿದ ವೀಡಿಯೊ ವೈರಲ್‌ ಆಗಿದೆ. ಅದರ ವಿಶೇಷತೆ ಏನು ಎಂದು ಯೋಚಿಸುತ್ತಿದ್ದೀರಾ? ಕಬ್ಬಡಿ ಕಬ್ಬಡಿ ಅನ್ನುತ್ತಾ ಅಡ್ತಿರೋ ಎಲ್ಲಾ ಮಹಿಳೆಯರು ಸೀರೆ ಉಟ್ಟಿದ್ದಾರೆ..! ಹೌದು, ನಮ್ಮಲ್ಲಿ ಹೆಚ್ಚಿನವರು ಸೀರೆಯಲ್ಲಿ ನಡೆಯಲು ಕಷ್ಟ ಪಡುತ್ತಾರೆ. ಆದರೆ ಇಲ್ಲಿ ಮಹಿಳೆಯರು ಉತ್ಸಾಹದಿಂದ ಆಟವನ್ನು ಆಡುತ್ತಿರುವುದು ಕಂಡುಬಂದಿದೆ.

ವಿಶೇಷವೆಂದರೆ, ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅಕ್ಟೋಬರ್ 7 ರಂದು ಕ್ರೀಡಾ ಸ್ಪರ್ಧೆ ಸಮಾರಂಭವನ್ನು ಉದ್ಘಾಟಿಸಿದರು. ಇದು ಮುಂದಿನ ವರ್ಷದ ಜನವರಿ 6 ರವರೆಗೆ ಮುಂದುವರಿಯುತ್ತದೆ
ವೀಡಿಯೊದಲ್ಲಿ, ಮಹಿಳೆಯರು ಪೂರ್ಣ ಉತ್ಸಾಹದಿಂದ ಕಬಡ್ಡಿ ಆಡುವುದನ್ನು ಕಾಣಬಹುದು. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್ನಲ್ಲಿ ಮರುಹಂಚಿಕೆ ಮಾಡಿದ್ದಾರೆ. “ನಾವು ಯಾರಿಗಿಂತಲೂ ಕಡಿಮೆ ಇದ್ದೇವಾ!!! ಛತ್ತೀಸ್ ಗಢೀಯ ಒಲಿಂಪಿಕ್ಸ್ ನಲ್ಲಿ ಮಹಿಳಾ ಕಬಡ್ಡಿ” ಎಂದು ವೀಡಿಯೊದೊಂದಿಗೆ ಬರೆಯಲಾಗಿದೆ.

“ಇದಕ್ಕಿಂತ ಹೆಚ್ಚು ದೇಸಿಯಾಗಲು ಸಾಧ್ಯವಿಲ್ಲ. ಅದನ್ನು ಪ್ರೀತಿಸಿ, “ಎಂದು ಬಳಕೆದಾರರೊಬ್ಬರು ಬರೆದಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

Leave A Reply

Your email address will not be published.