ಭಾರೀ ಮಳೆ 25 ಜನ ಸಾವು | ಶಾಲೆಗಳಿಗೆ ರಜೆ ಘೋಷಣೆ

ಭಾರೀ ಮಳೆಗೆ 25 ಜನರು ಸಾವನ್ನಪ್ಪಿರುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಭಾನುವರ ತಡರಾತ್ರಿಯವರೆಗೆ ಸುರಿದ ಭಾರೀ ಮಳೆಗೆ ಈ ಸಾವು ಆಗಿದೆ. ಮನೆ ಕುಸಿದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಕಳೆದ 48 ಗಂಟೆಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದ ಎಲ್ಲಾ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಉತ್ತರ ಪ್ರದೇಶದ ಪೂರ್ವ, ಮಧ್ಯ ಭಾಗಗಳು, ಬುಂದೇಲ್‌ಖಂಡ್, ತೇರಾಯ್ ಬೆಲ್ಟ್ ಮತ್ತು ರೋಹಿಲ್‌ಖಂಡ್ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ರಾಜ್ಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ಇಂದು 12ನೇ ತರಗತಿಯವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಲಕ್ನೋ, ನೊಯ್ಡಾ, ಗಾಜಿಯಾಬಾದ್, ಕಾನ್ಪುರ್, ರಾಂಪುರ ಮತ್ತು ಮೀರತ್‌ನಲ್ಲಿ ಶಾಲಾ ಮಕ್ಕಳಿಗೆ ರಜೆ ಘೋಷಿಸಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಲಕ್ನೋ, ಅಲಿಗಢ, ಮೀರತ್, ಗೌತಮ್ ಬುದ್ಧ ನಗರ ಮತ್ತು ಘಜಿಯಾಬಾದ್ ಸೇರಿದಂತೆ 12 ಜಿಲ್ಲೆಗಳ ಅಧಿಕಾರಿಗಳು ಇಂದು ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಅಲಿಘಢದಲ್ಲಿ 12ನೇ ತರಗತಿಯವರೆಗಿನ ಎಲ್ಲಾ ಶಾಲೆಗಳು ಅಕ್ಟೋಬರ್ 12ರವರೆಗೆ ರಜೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೊಯ್ಡಾ, ಆಗ್ರಾ, ಮಥುರಾ, ಕಾನ್ಪುರ, ಇಟಾಹ್, ಮೈನ್‌ಪುರಿ ಮತ್ತು ಫಿರೋಜಾಬಾದ್‌ನ ಜಿಲ್ಲಾ ಅಧಿಕಾರಿಗಳು ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದಾರೆ.

ಆಗ್ರಾ ಮತ್ತು ಅಲಿಗಢ ಆಡಳಿತಗಳು ಇಂದು ಮತ್ತು ಮಂಗಳವಾರ ಶಾಲೆಗಳಿಗೆ ರಜೆ ಘೋಷಿಸಿವೆ. ಬಲ್ರಾಮ್‌ಪುರ ಜಿಲ್ಲೆಯ ಸುಮಾರು 400 ಹಳ್ಳಿಗಳು ಜಲಾವೃತವಾಗಿದ್ದು, ಗೋರಖ್‌ಪುರದ ಬರ್ಹಲ್‌ಗಂಜ್‌ನಲ್ಲಿ ದೋಣಿಯೊಂದು ಮುಳುಗಿದ ಪರಿಣಾಮ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

Leave A Reply

Your email address will not be published.