KEA ಯಿಂದ ಮುಖ್ಯವಾದ ಪ್ರಕಟಣೆ : ಡಿಪ್ಲೋಮಾ CET 2022 ಕ್ಕೆ ಅರ್ಜಿ ಅವಧಿ ವಿಸ್ತರಣೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, 2022ನೇ ಸಾಲಿನ ಎರಡನೇ ವರ್ಷದ / ಮೂರನೇ ಸೆಮಿಸ್ಟರ್‌ನ ಹಗಲು ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಡಿಪ್ಲೊಮ ಅಭ್ಯರ್ಥಿಗಳಿಂದ 27-09-2022 ರಿಂದ 07-10-2022 ರ ವರೆಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಡಿಪ್ಲೋಮಾ ಸಾಮಾನ್ಯ ಪ್ರವೇಶ ಪರೀಕ್ಷೆ (ಡಿಸಿಇಟಿ-2022) ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯನ್ನು ಹೊರಡಿಸಿದ್ದು, 2022ರ ಡಿಪ್ಲೋಮಾ ಸಿಇಟಿ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಿ ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ.

ಡಿಪ್ಲೋಮಾ ಇನ್ ಲೆದರ್ ಮತ್ತು ಫ್ಯಾಶನ್ ಟೆಕ್ನಾಲಜಿ ಮತ್ತು ಡಿಪ್ಲೋಮಾ ಇನ್ ಪ್ರಿಂಟಿಂಗ್ ಟೆಕ್ನಾಲಜಿ ಕೋರ್ಸ್‌ಗಳಲ್ಲಿ ಡಿಪ್ಲೋಮಾ ಪಡೆದಿರುವ ಅಭ್ಯರ್ಥಿಗಳನ್ನು ಪರಿಗಣಿಸಬೇಕಾಗಿರುವುದರಿಂದ, ಅಂತಹ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ 09-10-2022 ರಿಂದ 13-10-2022 ರಾತ್ರಿ 11.59 ರ ವರೆಗೆ ಡಿಸಿಇಟಿ- 2022 ಕ್ಕೆ ಅರ್ಜಿಯನ್ನು ಸಲ್ಲಿಸಲು ಸರಕಾರದ ನಿರ್ದೇಶನದಂತೆ ಅವಕಾಶ ನೀಡಲಾಗಿದೆ.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಪ್ಲೊಮ ಸಿಇಟಿ-2022ಕ್ಕೆ ದಾಖಲಿಸಿದ ಎಲ್ಲಾ ಮಾಹಿತಿಗಳನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ. ಮತ್ತು ಈ ಮಾಹಿತಿಯೇ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ಆಧಾರವಾಗಿರುತ್ತದೆ ಹಾಗೂ ಯಾವುದೇ ಕಾರಣಕ್ಕೂ ದಾಖಲಿಸಿದ ಮಾಹಿತಿಯನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.