ಒಂದು ಕಾಫಿ ಪೋಟೊ ವೈರಲ್ ! ಏನು ಈ ವಿಶೇಷತೆ ?
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಗೊಂದಲಕ್ಕೀಡು ಮಾಡಿದ ಒಂದು ಚಿತ್ರ, ಇದು ಕಂಪ್ಯೂಟರ್ನಲ್ಲಿ ಮಾಡಿದ್ದೇ ಅಥವಾ ಕೈಯಿಂದ ಬರೆದ ಚಿತ್ರವೇ ಅಥವಾ ಛಾಯಾಚಿತ್ರವೇ ಎಂದು ತುಂಬಾನೇ ತಲೆ ಕೆಡಿಸಿಕೊಂಡಿದ್ದಾರೆ. ಇದೊಂದು ಛಾಯಾಚಿತ್ರವಲ್ಲ ಎಂದು ನಂಬಲು ತುಂಬಾ ಕಷ್ಟಕರ ಎನಿಸುವಂತಹ ವರ್ಣಚಿತ್ರ ಇದು. ಒಂದು ಸಣ್ಣ ಲೋಟದಲ್ಲಿ ತುಂಬಿದ ಬಿಸಿಯಾದ ಕಾಫಿಯನ್ನು, ಅದನ್ನು ತಂಪಾಗಿಸಿಕೊಳ್ಳಲು ಕೆಳಗಡೆ ಒಂದು ಚಿಕ್ಕ ತಟ್ಟೆಯಂತಿರುವುದನ್ನು ನಾವು ಈ ಫೋಟೋದಲ್ಲಿ ನೋಡಬಹುದಾಗಿದೆ. ಹತ್ತಿರದಿಂದ ಇದನ್ನು ನೋಡಿದಾಗ ಉತ್ತಮ ಕ್ಯಾಮೆರಾದಿಂದ ಸೆರೆ ಹಿಡಿಯಲಾದ ಛಾಯಾಚಿತ್ರದಂತೆ ಕಾಣುತ್ತದೆ. …