Home latest Karwara: ರಾಮನ ಪ್ರತಿಷ್ಠಾಪನೆ ಆಗುತ್ತಿದ್ದಂತೆ ಉದ್ರೇಕಕಾರಿ ಸಂದೇಶ ರವಾನಿಸಿದ ಅಪ್ರಾಪ್ತ ಮುಸ್ಲಿಂ ಯುವಕ !!

Karwara: ರಾಮನ ಪ್ರತಿಷ್ಠಾಪನೆ ಆಗುತ್ತಿದ್ದಂತೆ ಉದ್ರೇಕಕಾರಿ ಸಂದೇಶ ರವಾನಿಸಿದ ಅಪ್ರಾಪ್ತ ಮುಸ್ಲಿಂ ಯುವಕ !!

Karwara

Hindu neighbor gifts plot of land

Hindu neighbour gifts land to Muslim journalist

Karwar: ರಾಮ ಮಂದಿರದಲ್ಲಿ ಶ್ರೀರಾಮನ(Ayodhya rama) ಪ್ರಾಣ ಪ್ರತಿಷ್ಠೆ ನೆರವೇರಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋಟ್ಯಾಂತರ ಜನರು ಜಾತಿ, ಮತ, ಧರ್ಮ, ಭೇದಗಳನ್ನು ಮರೆತು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೂ ಹಿಂದೂ-ಮುಸ್ಲಿಂಮರು ಸಹೋದರರಂತೆ ಸಂಭ್ರಮಿಸಿದ್ದಾರೆ. ಆದರೆ ಕೆಲವೆಡೆ ಅಹಿತಕರ ಘಟನೆ ನಡೆದಿದ್ದು, ಕೋಮುಸಂಘರ್ಷಗಳೂ ನಡೆದಿರುವುದು ಬೇಸರದ ಸಂಗತಿ.

ಅಂತೆಯೇ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಆಗುತ್ತಿದ್ದಂತೆ ಕಾರವಾರದಲ್ಲಿ(Karwar) ಆಪ್ರಾಪ್ತ ಮುಸ್ಲಿಂ ಯುವಕನೋರ್ವ ಕೋಮು ಭಾವನೆ ಕೆರಳಿಸುವ ಸಂದೇಶ ಹಾಕಿದ ಉದ್ವಿಗ್ನ ಪರಿಸ್ಥಿತಿ ಉಂಟಾಗುವಂತೆ ಮಾಡಿದ್ದಾನೆ.

ಇದನ್ನೂ ಓದಿ: Hired person: ‘ಬಾಡಿಗೆ ವ್ಯಕ್ತಿ’ ಎಂದು ದುಡ್ಡು ಪಡೆದು ಜೊತೆಗೆ ಬಂದು ಲಕ್ಷ ಲಕ್ಷ ಸಂಪಾದಿಸ್ತಾನೆ ಈ ಹುಡುಗ – ಜೊತೆಯಾಗುತ್ತಿದ್ದಂತೆ ಈತ ಮಾಡೋ ಕೆಲಸ ಕೇಳಿದ್ರೆ ಆಗುತ್ತೆ ಶಾಕ್ !!

ಹೌದು, ರಹೀಲ್ ಎಸ್‌ಎಚ್‌ಕೆ ಎಂಬ ಕಾಲೇಜು ಓದುವ ಮುಸ್ಲಿಂ ಹುಡುಗನು ರಾಮನ ಪ್ರತಿಷ್ಠಾಪನೆ ಆಗುತ್ತಿದ್ದಂತೆ ತನ್ನ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಬಾಬರಿ ಮಸೀದಿ ಫೋಟೊ ಶೇರ್ ಮಾಡಿ ‘ಸಬರ್ ಜಬ್ ವಕ್ತ್ ಹಮಾರಾ ಆಯೇಗಾ ತಬ್ ಸಿರ್ ದಡ್ ಸೇ ಅಲಗ್ ಕಿಯೇ ಜಾಯೇಂಗೆ’ ಎಂಬ ಉದ್ರೇಕಕಾರಿ ಸಂದೇಶ ಬರೆದುಕೊಂಡಿದ್ದಾನೆ. ಇದನ್ನು ನೋಡುತ್ತಿದಂತೆ ಕಾರವಾರದ ಅನೇಕರು ಕೆರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಕಾರವಾರದ ನೂರರು ಜನರು ಚಿತ್ತಾಕುಲ ಪೊಲೀಸ್ ಠಾಣೆ ಎದುರು ಜಮಾಯಿಸಿ ಯುವಕನ ಬಂಧನಕ್ಕೆ ಆಗ್ರಹಿಸಿದ್ದಾರೆ. ಇತ್ತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತಪ್ಪೊಪ್ಪಿಗೆ ಸಂದೇಶ ಹಾಕಿರುವ ಯುವಕ. ಆಪ್ರಾಪ್ತ ಯುವಕನನ್ನು ವಶಕ್ಕೆ ವಿಚಾರಣೆ ನಡೆಸಿದ ಚಿತ್ತಾಕುಲ ಪೊಲೀಸರು ಯುವಕನಿಂದ ತಪ್ಪೊಪ್ಪಿಗೆ ಮುಚ್ಚಳಿಕೆ ಬರೆಸಿ ಕಳುಹಿಸಿದ್ದಾರೆ.