Home Interesting LPG Gas: ಜನಸಾಮಾನ್ಯರಿಗೆ ಗುಡ್‌ನ್ಯೂಸ್‌!! ಗ್ಯಾಸ್‌ ಬೆಲೆ ಕುರಿತು ಸರಕಾರದಿಂದ ಮಹತ್ವದ ಘೋಷಣೆ!!!

LPG Gas: ಜನಸಾಮಾನ್ಯರಿಗೆ ಗುಡ್‌ನ್ಯೂಸ್‌!! ಗ್ಯಾಸ್‌ ಬೆಲೆ ಕುರಿತು ಸರಕಾರದಿಂದ ಮಹತ್ವದ ಘೋಷಣೆ!!!

Hindu neighbor gifts plot of land

Hindu neighbour gifts land to Muslim journalist

LPG Cylinder Subsidy: ಸಿಲಿಂಡರ್‌ ಬೆಲೆ ನಗರದಿಂದ ನಗರಕ್ಕೆ ಬೇರೆಯಾಗಿರುತ್ತದೆ. ಗ್ಯಾಸ್‌ ಬೆಲೆ ಕಳೆದ ಎರಡ್ಮೂರು ವರ್ಷಗಳಲ್ಲಿ ಹೆಚ್ಚಳ ಕಂಡಿದೆ. ಕೇಂದ್ರ ಸಬ್ಸಿಡಿಯನ್ನು ಪಂಚರಾಜ್ಯ ಚುನಾವಣೆಗೂ ಮುನ್ನ ನೀಡಿತುತು.

ಸಿಲಿಂಡರ್‌ ಬೆಲೆ ನಿಯಂತ್ರಣಕ್ಕೆ ಕೇಂದ್ರದ ಜೊತೆ ಜೊತೆಗೆ ರಾಜ್ಯ ಸರಕಾರಗಳು ಕೂಡಾ ಮಹತ್ವದ ಕ್ರಮಗಳನ್ನೆಲ್ಲ ತೆಗೆದುಕೊಳ್ಳುತ್ತಿದೆ. ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಈ ಕಾರಣದಿಂದ ಕೇಂದ್ರ ಸರಕಾರ ಗ್ಯಾಸ್‌ ಬೆಲೆ ಇಳಿಕೆಯ ಕುರಿತು ಚಿಂತನೆ ಮಾಡಿದೆ ಎಂದು ವರದಿಯಾಗಿದೆ.

ಹಾಗಾಗಿ ಜನತೆಗೆ ಶೀಘ್ರದಲ್ಲಿಯೇ ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯ ಕುರಿತು ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆ ಹೆಚ್ಚಿದೆ. ಬಡ ಮತ್ತು ಮಧ್ಯಮ ವರ್ಗದ ಜನರ ಮತಗಳ ಮೇಲೆ ಸರಕಾರ ಒಲವು ತೋರಿದ್ದು, ಬೆಲೆ ಇಳಿಕೆ ಕುರಿತು ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.

ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 2023 ರಲ್ಲಿ 200 ರೂ.ಗಳಷ್ಟು ಇಳಿಸಿತ್ತು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 400 ರೂ. ಗಳಷ್ಟು ಹಣ ಉಳಿತಾಯವಾಗಿತ್ತು. ಇದೀಗ ಕೇಂದ್ರ ಸರಕಾರ 300 ರೂ. ವರೆಗೆ ಬೆಲೆ ಇಳಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ಕುರಿತು ಸರಕಾರ ಶೀಘ್ರವೇ ಅಧಿಕೃತ ಪ್ರಕಟಣೆಯನ್ನು ಹೊರಡಿಸುವ ಸಾಧ್ಯತೆ ಇದೆ.