Home Interesting ATM Withdraw : ಎಟಿಎಂನಿಂದ ಬಂತು ಹಣದ ಸುರಿಮಳೆ | 1 ಸಾವಿರ ಎಂಟ್ರಿ...

ATM Withdraw : ಎಟಿಎಂನಿಂದ ಬಂತು ಹಣದ ಸುರಿಮಳೆ | 1 ಸಾವಿರ ಎಂಟ್ರಿ ಮಾಡಿದರೆ 2000 ಬಂತು | ಕಿಕ್ಕಿರಿದು ನಿಂತ ಜನ!!!

Hindu neighbor gifts plot of land

Hindu neighbour gifts land to Muslim journalist

ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬ್ಯಾಂಕಿಂಗ್ ಕೆಲಸಗಳು ಮನೆಯಲ್ಲೆ ಕುಳಿತು ಸರಾಗವಾಗಿ ಹಣ ವರ್ಗಾವಣೆಯ ಜೊತೆಗೆ ಪಾವತಿ ಮಾಡುವ ಸೌಕರ್ಯವನ್ನು ಎಲ್ಲ ಬ್ಯಾಂಕ್ಗಳು ಒದಗಿಸಿ, ಪ್ರತಿ ಕೆಲಸಕ್ಕೂ ಬ್ಯಾಂಕಿನ ಶಾಖೆಗೆ ಓಡಾಡುವ ತಾಪತ್ರಯವನ್ನು ಕೂಡ ತಪ್ಪಿಸಿದೆ.

ಹಣ ರವಾನೆ, ಪಡೆಯಲು ಹಿಂದಿನಂತೆ ಸರತಿ ಸಾಲಿನಲ್ಲಿ ನಿಂತು ಕಾದು ಟೋಕನ್ ಪಡೆದು ಹಣ ಪಡೆಯಬೇಕಾದ ಸಂಕಷ್ಟ ಈಗಿಲ್ಲ. ಎಟಿಎಂ ಕೇಂದ್ರಗಳಿಗೆ ಭೇಟಿ ನೀಡಿ ಎಟಿಎಂ ಕಾರ್ಡ್ ಮೂಲಕ ಬ್ಯಾಂಕ್ನ ದಿನನಿತ್ಯದ ವಹಿವಾಟು ಮಿತಿಯಲ್ಲಿ ಬೇಕಾದಷ್ಟು ಹಣ ತೆಗೆಯಬಹುದು.

ಕಾಲ ಬದಲಾದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆಗಳಾಗಿ ಜನರ ಜೀವನ ಶೈಲಿಗೆ ತಕ್ಕಂತೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ . ಆದರೆ ಈ ಪುಟ್ಟ ಎಟಿಎಂ ನಮ್ಮ ಸಮಯವನ್ನು ಉಳಿಸುವುದು ಒಂದೆಡೆಯಾದರೆ, ಇದರಿಂದ ಎದುರಾಗುವ ಸಮಸ್ಯೆಗಳೂ ಕೂಡ ಇವೆ.

ಕೆಲವೊಮ್ಮೆ ಇದು ಖಾತೆಯಿಂದ ಹೆಚ್ಚುವರಿ ಹಣವನ್ನೂ ಕಡಿತಗೊಳಿಸುತ್ತದೆ. ಇದರಿಂದ ಕಂಗೆಟ್ಟ ಖಾತೆದಾರರು ಮತ್ತೆ ಬ್ಯಾಂಕ್​ಗೆ ತೆರಳಿ ದೂರು ನೀಡಿ ಎಲ್ಲವನ್ನು ಸರಿ ಮಾಡಿಸುವ ಹೊತ್ತಿಗೆ ಹೈರಾಣಾಗುತ್ತಾರೆ.

ಇನ್ನು ಕೆಲವೊಮ್ಮ ಅದೃಷ್ಟ ಚೆನ್ನಾಗಿದ್ದರೆ ಹಣದ ಸುರಿಮಳೆಯಾಗಿ ಬಂಪರ್ ಆಫರ್ ನಂತೆ ನಮೂದಿಸಿದ ಹಣಕ್ಕಿಂತ ಹೆಚ್ಚುವರಿ ಹಣ ಸಿಗಬಹುದು.

ತೆಲಂಗಾಣದ ಸಿದ್ಧಿಪೇಟೆಯಲ್ಲಿ ಈ ರೀತಿಯ ಘಟನೆ ಜರುಗಿದೆ. ಹೌದು ಇಲ್ಲಿ ಎಟಿಎಂನಿಂದ ಕ್ಯಾಶ್ ಪಡೆಯಲು ಬಂದ ಗ್ರಾಹಕರಿಗೆ ಹೆಚ್ಚುವರಿ ಹಣ ಸಿಕ್ಕಿದೆ.

ಸಿದ್ಧಿಪೇಟೆಯ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಒಂದು ಸಾವಿರ ರೂಪಾಯಿ ಪಡೆಯಲು ಬಂದ ಗ್ರಾಹಕರಿಗೆ 2,000 ರೂ. ನೋಟುಗಳು ಸಿಕ್ಕಿವೆ. ಈ ವಿಷಯ ತಿಳಿಯುತ್ತಿದ್ದಂತೆ ಸಿದ್ದಿಪೇಟೆ ಪಟ್ಟಣದ ಎಟಿಎಂ ಹೊರಗೆ ಹಣ ವಿತ್​ಡ್ರಾ ಮಾಡಲು ಜನ ಮರುಳೋ… ಜಾತ್ರೆ ಮರುಳೋ… ಎಂಬಂತೆ ಜನ ಸಾಗರವೇ ಹಣ ಪಡೆಯಲು ನೆರೆದಿದ್ದ ಘಟನೆ ನಡೆದಿದೆ.

ಬಿಟ್ಟಿಗೆ ಸಿಕ್ಕಾಗ ನನಗೂ ಇರಲಿ..ನನ್ನ ಮನೆಯವರಿಗೂ ಇರಲಿ ಎಂಬಂತೆ ಜನರು ಕಿಕ್ಕಿರಿದು ನಿಂತಿದ್ದರು. ಆದರೆ ಹೋದ ಜನರಿಗೆ ಆಸೆಗೆ ತಣ್ಣೀರು ಎರಚಿದಂತೆ ಅಷ್ಟರಲ್ಲಿ ಬ್ಯಾಂಕ್ ಅಧಿಕಾರಿಗಳು ಎಟಿಎಂಗೆ ಆಗಮಿಸಿ ತಾಂತ್ರಿಕ ದೋಷ ಸರಿಪಡಿಸಿದ್ದಾರೆ.

ಅಲ್ಲದೇ ಹೆಚ್ಚುವರಿ ನಗದು ಪಡೆದ ಗ್ರಾಹಕರ ಮಾಹಿತಿಯನ್ನೂ ಸಂಗ್ರಹಿಸಲಾರಂಭಿಸಿದ ಘಟನೆ ನಡೆದಿದೆ.