Home daily horoscope ಮೈಸೂರಿನ ಶ್ರೀನಗರದಲ್ಲಿ ಜೋಡಿ ಕೊಲೆ | ತಂದೆ,ತಂದೆಯ ಪ್ರೇಯಸಿಯ ಕೊಂದ ಮಗ

ಮೈಸೂರಿನ ಶ್ರೀನಗರದಲ್ಲಿ ಜೋಡಿ ಕೊಲೆ | ತಂದೆ,ತಂದೆಯ ಪ್ರೇಯಸಿಯ ಕೊಂದ ಮಗ

Hindu neighbor gifts plot of land

Hindu neighbour gifts land to Muslim journalist

ಮೈಸೂರಿನ ಹೊರವಲಯದಲ್ಲಿ ಜೋಡಿ ಕೊಲೆಯಾಗಿದೆ. ಮಗನಿಂದಲೇ ತಂದೆ ಮತ್ತು ತಂದೆಯ ಪ್ರೇಯಸಿ ಕೊಲೆ ನಡೆದ ಘಟನೆ ಮೈಸೂರಿನ ಶ್ರೀನಗರದಲ್ಲಿ ನಡೆದಿದೆ.

ಕೆ.ಜಿ ಕೊಪ್ಪಲು ನಿವಾಸಿ ಶಿವಪ್ರಕಾಶ್ (56) ಮತ್ತು ಶ್ರೀನಗರದ ನಿವಾಸಿ ಲತಾ (48) ಕೊಲೆಯಾದವರು. ಕೊಲೆಗೈದ ಆರೋಪಿ ಸಾಗರ್ ನಾಪತ್ತೆಯಾಗಿದ್ದಾನೆ.

ಲತಾ ಮನೆಗೆ ನುಗ್ಗಿದ್ದ ಸಾಗರ್ ಮಚ್ಚಿನಿಂದ ಬರ್ಬರವಾಗಿ ಹತ್ಯೆ ನಡೆಸಿದ್ದಾನೆ. ಮೊದಲು ತಂದೆಯನ್ನು ಕೊಲೆ ಮಾಡಿದ ಸಾಗರ್ ನಂತರ ಲತಾಳಿಗೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾನೆ.

ಲತಾ ಮೇಲೆ ಹಲ್ಲೆಗೆ ನಡೆಸುವಾಗ ಲತಾ ಪುತ್ರ ನಾಗಾರ್ಜುನ ತಡೆಯಲು ಬಂದಿದ್ದು, ನಾಗರ್ಜುನನಿಗೂ ಮಚ್ಚಿನಿಂದ ಹಲ್ಲೆ ಮಾಡಿರುವ ಸಾಗರ್ ನಂತರ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ.

ಗಾಯಗೊಂಡಿರುವ ನಾಗಾರ್ಜುನನನ್ನು ಆಸ್ಪತ್ರೆ ದಾಖಲು ಮಾಡಲಾಗಿದ್ದು, ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.