

ಭಾರೀ ಗಾತ್ರದ ಲೋಹದ ಸಿಲಿಂಡರ್ವೊಂದು ಪಶ್ಚಿಮ ಆಸ್ಟ್ರೇಲಿಯಾದ(Australia)ಕಡಲ ತೀರದಲ್ಲಿ ತೇಲಿಬಂದಿದ್ದು, ಇದು ಮೊನ್ನೆ ಮೊನ್ನೆ ತಾನೆ ಭಾರತ ಉಡಾಯಿಸಿದ ಚಂದ್ರಯಾನ-3ರ(Chandrayana -3) ಅವಶೇಷಗಳೇ ಎಂಬ ಚರ್ಚೆ ಶುರುವಾಗಿದ್ದು ಜನರಲ್ಲಿ ಆತಂಕ ಮನೆಮಾಡಿದೆ.
ಹೌದು, ಕಳೆದ ಶುಕ್ರವಾರವಷ್ಟೇ ಚಂದ್ರಯಾನ-3ರ (Chandrayaan-3) ರಾಕೆಟ್ ಉಡಾವಣೆಯಾಗಿತ್ತು. ಭಾರತದ ಐತಿಹಾಸಿಕ ಕ್ಷಣವನ್ನು ವಿಶ್ವವೇ ನಿಬ್ಬೆರಗಾಗಿ ವೀಕ್ಷಿಸಿತ್ತು. ಇಸ್ರೋ ಕೂಡ ದಿನೇ ದಿನೇ ನೌಕೆಯ ಕಕ್ಷೆ ಬದಲಾವಣೆ ಬಗ್ಗೆ ಮಾಹಿತಿ ನೀಡಿ, ನಮ್ಮ ಕಾರ್ಯ ಯಶಸ್ವಿಯಾಗಿದೆ ಎಂದು ವರದಿ ನೀಡುತ್ತಿತ್ತು. ಆದರೀಗ ಆಸ್ಟ್ರೇಲಿಯಾದ (Australia) ಪಶ್ಚಿಮ ಭಾಗದ ಗ್ರೀನ್ ಹೆಡ್ ಕರಾವಳಿ ಪ್ರದೇಶದಲ್ಲಿ ನಿಗೂಢ ವಸ್ತುವೊಂದು ಪತ್ತೆಯಾಗಿದೆ. ಈ ವಸ್ತು ಚಂದ್ರಯಾನ-3ಕ್ಕೆ ಸಂಬಂಧಪಟ್ಟಿರಬಹುದೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಚಂದ್ರಯಾನ-3 ಮಿಷನ್ ಅನ್ನು ಭಾರತದ ಅತ್ಯಂತ ಭಾರವಾದ ರಾಕೆಟ್, ಲಾಂಚ್ ವೆಹಿಕಲ್ ಮಾರ್ಕ್-III ಅನ್ನು ಇತ್ತೀಚೆಗೆ ಉಡಾವಣೆ ಮಾಡಲಾಗಿದೆ. ರಾಕೆಟ್ ಉಡಾವಣೆಯಾದ ಬಳಿಕ ಅದು ರಾತ್ರಿ ವೇಳೆ ಆಸ್ಟ್ರೇಲಿಯಾದ(Australia)ಆಕಾಶದಲ್ಲೂ ಪ್ರಕಾಶಮಾನವಾಗಿ ಕಂಡುಬಂದಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಆಸ್ಟ್ರೇಲಿಯಾದ ಬೀಚ್‌ನಲ್ಲಿ ಪತ್ತೆಯಾಗಿರುವ ನಿಗೂಢ ವಸ್ತು ಚಂದ್ರಯಾನ-3ಕ್ಕೆ ಸಂಬಂಧಪಟ್ಟಿರುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಕೆಟ್ ಉಡಾವಣೆಯಾದ ಬಳಿಕ ಅದರಿಂದ ಕಳಚಿಕೊಂಡ ಎಲ್‌ವಿಎಂ-3ರ ಹಂತಗಳಲ್ಲಿ ಒಂದಾಗಿರಬಹುದು ಎಂದು ಊಹಿಸಲಾಗುತ್ತಿದೆ.
ಅಂದಹಾಗೆ ಅಸ್ಟ್ರೇಲಿಯದ ಬಾಹ್ಯಾಕಾಶ ಸಂಸ್ಥೆಯು ಸೋಮವಾರದಂದು ತನ್ನ ಟ್ವಿಟ್ಟರ್‌ನಲ್ಲಿ ಸಮುದ್ರದಲ್ಲಿ ಬಿದ್ದು ಹಾನಿಗೊಳಗಾದ ವಸ್ತುವಿನ ಚಿತ್ರವನ್ನು ಹಂಚಿಕೊಂಡಿದ್ದು. “ನಾವು ಪ್ರಸ್ತುತ ಪಶ್ಚಿಮ ಆಸ್ಟ್ರೇಲಿಯದ ಜುರಿಯನ್ ಕೊಲ್ಲಿಯ ಸಮುದ್ರತೀರದಲ್ಲಿರುವ ಈ ವಸ್ತುವಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದೇವೆ. ವಸ್ತು ವಿದೇಶಿ ಬಾಹ್ಯಾಕಾಶ ಉಡಾವಣಾ ವಾಹನದಿಂದ ಬಂದಿರಬಹುದು ಮತ್ತು ಹೆಚ್ಚಿನ ಮಾಹಿತಿ ಒದಗಿಸಲು ಸಾಧ್ಯವಾಗುವ ಜಾಗತಿಕ ಇತರೆ ದೇಶಗಳೊಂದಿಗೆ ಹಾಗೂ ಸಂಸ್ಥೆಗಳೊಂದಿಗೆ ನಾವು ಸಂಪರ್ಕ ಹೊಂದಿದ್ದೇವೆ’’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗ್ತಿದ್ದಂತೆ ಸೋಷಿಯಲ್ ಮೀಡಿಯಾ ಬಳಕೆದಾರರು ಇದನ್ನು ತಮ್ಮ ಇಚ್ಛೆಗೆ ಅನುಸಾರವಾಗಿ ವರ್ಣಿಸುತ್ತಿದ್ದಾರೆ.
ಇಷ್ಟೇ ಅಲ್ಲದೆ ಅಂದಹಾಗೆ ಈ ವಸ್ತುವಿನ ಬಗ್ಗೆ ನಾನಾ ವಂದಂತಿಗಳು ಹರಡುತ್ತಲೇ ಇದೆ. ಅನೇಕ ಜನರು ಇದನ್ನು UFO ಗಳಿಗೆ ಲಿಂಕ್ ಮಾಡಿದ್ದಾರೆ ಮತ್ತು ಇತರರು ಅದನ್ನು ಕಾಣೆಯಾದ ಮಲೇಷಿಯಾದ MH370 ವಿಮಾನಕ್ಕೆ ಲಿಂಕ್ ಮಾಡಿದ್ದಾರೆ. ಆದರೆ, ಈವರೆಗೂ ಇದರ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರಕಿಲ್ಲ. ಸದ್ಯಕ್ಕೆ ತನಿಖೆ ನಡೆಯುತ್ತಿದೆ ಮತ್ತು ಹೆಚ್ಚಿನ ಮಾಹಿತಿ ಲಭ್ಯವಾಗುವವರೆಗೆ, ಊಹಾಪೋಹಗಳನ್ನು ಹಬ್ಬಿಸದಂತೆ ಜನರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಆದರೆ ಈ ನಡುವೆಯೂ ಆಸ್ಟ್ರೇಲಿಯ ಬಾಹ್ಯಾಕಾಶ ಸಂಸ್ಥೆ ಪ್ರಸ್ತುತ ಈ ವಸ್ತುವಿನ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು ಅದರ ಮೂಲವನ್ನು ನಿರ್ಧರಿಸಲು ಇತರೆ ದೇಶಗಳಿಂದ ಸಹಾಯ ಪಡೆಯುತ್ತಿದೆ.
ಇನ್ನು ಆದರೂ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಈ ನಿಗೂಢ ವಸ್ತು ಏನು ಎಂಬುದನ್ನು ದೃಢಪಡಿಸಿಲ್ಲ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಕೂಡಾ ಇಲ್ಲಿವರೆಗೆ ಈ ಬಗ್ಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ನಿಗೂಢ ವಸ್ತುವಿನ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆಯ ವಕ್ತಾರರು ಸಹ ಹೇಳಿದ್ದಾರೆ.












