Home latest WhatsApp Update : ವಾಟ್ಸಪ್ ನಲ್ಲಿ ಬಂತು ಅಚ್ಚರಿಯ ವೈಶಿಷ್ಟ್ಯ | ಇನ್ಮುಂದೆ ಈ ಫೀಚರ್...

WhatsApp Update : ವಾಟ್ಸಪ್ ನಲ್ಲಿ ಬಂತು ಅಚ್ಚರಿಯ ವೈಶಿಷ್ಟ್ಯ | ಇನ್ಮುಂದೆ ಈ ಫೀಚರ್ ನಿಮ್ಮೆಲ್ಲರಿಗೂ ಲಭ್ಯ!

Hindu neighbor gifts plot of land

Hindu neighbour gifts land to Muslim journalist

ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿ ಬೆಳೆದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging Platform) ವಾಟ್ಸಪ್ (WhatsApp) ದಿನಕ್ಕೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವ ವಾಟ್ಸ್​ಆ್ಯಪ್ ಇದೀಗ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್‌ ಅನ್ನು (WhatsApp Community) ಪರಿಚಯಿಸಿದ ಬೆನ್ನಲ್ಲೇ ಮತ್ತೊಂದು ವೈಶಿಷ್ಟ್ಯವನ್ನು ಪರಿಚಯ ಮಾಡಿದೆ .

ಇದೀಗ ವಾಟ್ಸಪ್​ನಲ್ಲಿ ‘ಡು ನಾಟ್ ಡಿಸ್ಟರ್ಬ್’ (Do Not Disturb) ಎಂಬ ಹೊಸ ನವೀಕರಣವನ್ನು ಬಿಡುಗಡೆ ಮಾಡಲು ಮುಂದಾಗಿದೆ. ಸಾಮಾನ್ಯವಾಗಿ ಬಳಕೆದಾರರು ತಮ್ಮ ಫೋನ್‌ನಲ್ಲಿ ‘ಡು ನಾಟ್ ಡಿಸ್ಟರ್ಬ್’ ಮೋಡ್ ಅನ್ನು ಆನ್ ಮಾಡಿದಾಗ, ಫೋನ್ ಕರೆಗಳು ಮತ್ತು ಎಸ್​ಎಮ್​ಎಸ್​ (SMS) ನಂತಹ ಎಲ್ಲಾ ಎಚ್ಚರಿಕೆಗಳನ್ನು ಮ್ಯೂಟ್ (Mute) ಮಾಡಲಾಗುತ್ತದೆ.

ಕರೆಗಳು (Call) ಬಂದಾಗ ಯಾವುದೇ ವೈಬ್ರೇಶನ್​ಗಳು, ಸ್ಕ್ರೀನ್ ಆನ್ ಆಗುವುದಿಲ್ಲ. ಹಾಗಾಗಿ ಈ ಮೋಡ್‌ನಲ್ಲಿರುವಾಗ ಫೋನ್ ಕರೆ ಬಂದರೂ ಕೂಡ ತಿಳಿಯುವುದಿಲ್ಲ . ಇದೇ ರೀತಿಯ ಫೀಚರ್ ಅನ್ನು ಇನ್ನು ಮುಂದೆ (Feature) ವಾಟ್ಸಪ್ ಅಕೌಂಟ್​ನಲ್ಲಿಯೂ ಬರಲಿದೆ ಎಂದು ತಂತ್ರಜ್ಞರು ಹೇಳುತ್ತಿದ್ದಾರೆ.

ವಾಟ್ಸಾಪ್‌ನಲ್ಲಿ ಡು ನಾಟ್ ಡಿಸ್ಟರ್ಬ್ ಮೋಡ್ ಆನ್ ಆಗಿರುವುದರಿಂದ ಇದರ ಮೂಲಕ ಕರೆಯನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ, ವಾಟ್ಸಾಪ್ ಟ್ಯಾಗ್‌ಲೈನ್‌ನೊಂದಿಗೆ ಕಾರಣವನ್ನು ಬಳಕೆದಾರರಿಗೆ ತಿಳಿಸುತ್ತದೆ. ಆದ್ದರಿಂದ ಬಳಕೆದಾರರು ಈ ಸೂಚನೆಗಳನ್ನು ಕರೆ ಮಾಡಿದ ವ್ಯಕ್ತಿಗೆ ತೋರಿಸಬಹುದು ಮತ್ತು ಅವರು ಕರೆಯನ್ನು ಏಕೆ ಎತ್ತಲು ಸಾಧ್ಯವಾಗಲಿಲ್ಲ ಎಂದು ಅವರಿಗೆ ತಿಳಿಸಬಹುದಾಗಿದೆ.

ಈ ಡು ನಾಟ್ ಡಿಸ್ಟರ್ಬ್ ಫೀಚರ್ಸ್ ವಾಟ್ಸಪ್​ನಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ ಫೀಚರ್ ಆಗಿದ್ದು, ‘ಡು ನಾಟ್ ಡಿಸ್ಟರ್ಬ್’ ಮೋಡ್‌ ಅನ್ನು ಗೂಗಲ್ ವಾಟ್ಸಾಪ್ ಟ್ರ್ಯಾಕರ್ WABetaInfo ಮೂಲಕ ಕೆಲವು ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಬಹಿರಂಗಪಡಿಸಿದ್ದು, ಈ ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ಸ್ಕ್ರೀನ್‌ಶಾಟ್ ಅನ್ನು ಕೂಡ ಹಂಚಿಕೊಂಡಿದ್ದಾರೆ.

ಈ ಸ್ಕ್ರೀನ್‌ಶಾಟ್‌ನಲ್ಲಿ, ವಾಟ್ಸಾಪ್ ಕರೆಗಳ ಟ್ಯಾಬ್‌ನಲ್ಲಿನ ಕಾಲ್ ಲೀಸ್ಟ್​ನಲ್ಲಿ ‘ಸೈಲೆನ್ಸ್ಡ್ ಬೈ ಡು ನಾಟ್ ಡಿಸ್ಟರ್ಬ್’ ಎಂದು ಹೇಳುವ ಮಾಹಿತಿಯನ್ನು ಟ್ಯಾಗ್‌ಲೈನ್ ಮೂಲಕ ನೀಡಲಾಗಿದೆ. ವಾಟ್ಸಪ್ ಡು ನಾಟ್ ಡಿಸ್ಟರ್ಬ್ ಅಪ್ಡೇಟ್ ಫೀಚರ್ ಕರೆಯನ್ನು ನೀಡಿದ, ಸ್ವೀಕರಿಸಿದ ಬಳಕೆದಾರರಿಗೆ ಮಾತ್ರ ಬರುತ್ತದೆ. ನಿಮ್ಮ ಫೋನ್‌ನಲ್ಲಿ ಡು ನಾಟ್ ಡಿಸ್ಟರ್ಬ್ ಮೋಡ್ ಅನ್ನು ಇನೇಬಲ್ ಮಾಡುವ ಮೂಲಕ ಇತರ ವ್ಯಕ್ತಿಗೆ ಕರೆಯನ್ನು ಮಿಸ್ ಮಾಡಿದ್ದಾರೆ ಎಂದು ತಿಳಿಯದಂತೆ ಮಾಡಬಹುದಾಗಿದೆ.

ಸದ್ಯಕ್ಕೆ ವಾಟ್ಸಪ್​​ನ ಈ ಫೀಚರ್ ಆಂಡ್ರಾಯ್ಡ್ 2, 22, 24, 17 ವರ್ಷನ್​ನಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ, ಆದ್ದರಿಂದ ಸಾಮಾನ್ಯ ಬಳಕೆದಾರರು ಇನ್ನೂ ಕೆಲವು ದಿನಗಳವರೆಗೆ ಕಾಯಬೇಕಾಗುತ್ತದೆ. ಈ ಫೀಚರ್ ವಾಟ್ಸಪ್​ನಲ್ಲಿ ಬಿಡುಗಡೆಯಾದ ಹೊಸ ಫೀಚರ್​ ಆಗಿದ್ದು, ಇತ್ತೀಚೆಗೆ ವಾಟ್ಸಪ್ ಹೊಸ ಹೊಸ ಫೀಚರ್ ಪರಿಚಯಿಸುತ್ತಿದ್ದು, ಇದು ಕೂಡ ಒಂದಾಗಿದೆ.

ಡು ನಾಟ್ ಡಿಸ್ಟರ್ಬ್ ಅನ್ನು ಹೇಗೆ ಸೆಟ್ ಮಾಡುವ ವಿಧಾನ ಈ ವೈಶಿಷ್ಟ್ಯವು ಬಳಕೆದಾರರ ಖಾತೆಗೆ ಲಭ್ಯವಿದೆಯೇ ಎಂದು ಕಂಡುಹಿಡಿಯುವುದು ಸುಲಭವಾಗಿದ್ದು, ಇದಕ್ಕಾಗಿ ಬಳಕೆದಾರರು ತಮ್ಮ ಫೋನ್ ಸೆಟ್ಟಿಂಗ್‌ಗಳಲ್ಲಿ ಡು ನಾಟ್ ಡಿಸ್ಟರ್ಬ್ ಮೋಡ್ ಅನ್ನು ಆನ್ ಮಾಡಬೇಕು. ಸ್ವಲ್ಪ ಸಮಯದ ನಂತರ ನಿಮ್ಮ ವಾಟ್ಸಪ್​ಗೆ ಕರೆ ಮಾಡಲು ಫ್ರೆಂಡ್ ಬಳಿ ಹೇಳಬಹುದು. ಆದರೆ ಆ ಕಾಲ್​ ಅನ್ನು ರಿಸೀವ್ ಮಾಡಬಾರದು. ಸ್ವಲ್ಪ ಸಮಯದ ನಂತರ, ನಿಮ್ಮ ವಾಟ್ಸಪ್ ಅಪ್ಲಿಕೇಶನ್​ನ ಕಾಲ್ ಹಿಸ್ಟರಿಯಲ್ಲಿ ನಿಮ್ಮ ಸ್ನೇಹಿತರ ಕಾಲ್ ಲೀಸ್ಟ್​ನಲ್ಲಿ ‘ಸೈಲೆನ್ಸ್​ಡ್ ಬೈ ಡು ನಾಟ್ ಡಿಸ್ಟರ್ಬ್ ‘ ಎಂಬುದನ್ನು ನೀವು ನೋಡಿದರೆ ಈ ಫೀಚರ್ ನಿಮ್ಮ ವಾಟ್ಸಪ್​ನಲ್ಲಿ ಅಪ್ಡೇಟ್ ಆಗಿದೆ ಎಂಬುದು ತಿಳಿಯುತ್ತದೆ.