Home Breaking Entertainment News Kannada ಬಿಗ್ ಬಾಸ್ ವೈಷ್ಣವಿ ಎಂಗೇಜ್ಮೆಂಟ್ | ವೈರಲ್ ಆಯಿತು ಫೋಟೋಸ್!

ಬಿಗ್ ಬಾಸ್ ವೈಷ್ಣವಿ ಎಂಗೇಜ್ಮೆಂಟ್ | ವೈರಲ್ ಆಯಿತು ಫೋಟೋಸ್!

Hindu neighbor gifts plot of land

Hindu neighbour gifts land to Muslim journalist

ಕನ್ನಡದ ಜನಪ್ರಿಯ ಧಾರಾವಾಹಿ ಅಗ್ನಿ ಸಾಕ್ಷಿ ಮೂಲಕ ಮನೆ ಮಾತಾದ ಚೆಲುವೆ ವೈಷ್ಣವಿ ಗೌಡ ಅವರ ಬಗ್ಗೆ ಹೊಸ ಸುದ್ದಿಯೊಂದು ಜೋರಾಗಿ ಸದ್ದು ಮಾಡುತ್ತಿದೆ.ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ವೈಷ್ಣವಿಗೆ ಕಂಕಣ ಭಾಗ್ಯ ಕೂಡಿ ಬರುವ ನಿರೀಕ್ಷೆ ದಟ್ಟವಾಗಿದೆ. ಅಲ್ಲದೆ, ಮದುವೆ ಆಫರ್​ಗಳು ನಟಿಯನ್ನು ಅರಸಿಕೊಂಡು ಬಂದಿದ್ದವು. ಈ ಬಗ್ಗೆ ವೈಷ್ಣವಿ ಲೈವ್​ನಲ್ಲಿ ಹೇಳಿದ್ದು ಕೂಡ ಇದೆ.

ಅಗ್ನಿಸಾಕ್ಷಿ’ ಧಾರಾವಾಹಿ (Agnisakshi) ಮೂಲಕ ಎಲ್ಲರ ಮನ ಸೆಳೆದ ನಟಿ ವೈಷ್ಣವಿ (Vaishnavi) ಗೌಡರವರಿಗೆ ಅಗ್ನಿ ಸಾಕ್ಷಿ ಎಂಬ ಧಾರಾವಾಹಿ ದೊಡ್ದ ಮಟ್ಟದ ನೇಮ್, ಫೇಮ್ ತಂದುಕೊಟ್ಟಿದ್ದಂತು ಸುಳ್ಳಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 8’ಕ್ಕೆ ಎಂಟ್ರಿ ಕೊಟ್ಟು ದೊಡ್ಮನೆಯ ಆಟದಲ್ಲಿ ಭಾಗಿಯಾಗಿ ಕೊನೆಯ ಹಂತದವರೆಗೂ ಮನೆಯಲ್ಲಿ ಉಳಿದು ಸಾಕಷ್ಟು ಮನರಂಜನೆ ನೀಡಿದ್ದರು ಕೂಡ ಬಿಗ್ ಬಾಸ್ ಮನೆಯಲ್ಲಿ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ಆದರೂ ಕೂಡ ಪಕ್ಕಾ ಎಂಟ್ಟೈನ್ಮೆಂಟ್ ನೀಡಿ ಅಭಿಮಾನಿಗಳಿಗೆ ಖುಷಿ ನೀಡಿದ್ದರ ಜೊತೆಗೆ ಅವರ ನಗು, ಹಾಸ್ಯಗಳೆಲ್ಲವೂ ಪ್ರೇಕ್ಷಕರಿಗೆ ಬಾರಿ ಇಷ್ಟವಾಗಿತ್ತು.

ಇದರ ಜೊತೆಗೆ ಕೆಲ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದು, ಅಲ್ಲದೆ, ಇತ್ತೀಚೆಗೆ ಅವರು ‘ಲಕ್ಷಣ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಈ ನಡುವೆ ವೈಷ್ಟವಿ ಅವರ ಫೋಟೋ ಒಂದು ವೈರಲ್ ಆಗಿದ್ದು,ಈ ಫೋಟೋ ನಟಿಯ ಅಭಿಮಾನಿಗಳಲ್ಲಿ ಕೂತೂಹಲ ಮೂಡಿಸಿದೆ.ಬಿಗ್ ಬಾಸ್​’ಗೆ ಬಂದಾಗ ವೈಷ್ಣವಿ ಗೌಡ ಅವರು ಮದುವೆ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಮದುವೆಯ ಬಗ್ಗೆ ಅನೇಕ ಕನಸು ಕೂಡ ಹೊತ್ತಿದ್ದ ನಟಿಯ ಕನಸು ಇದೀಗ ನೆರವೇರಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಗ್ ಬಾಸ್​ ಮನೆಯಿಂದ ಹೊರ ಬಿದ್ದ ಬಳಿಕ ಮದುವೆ ಆಫರ್​ಗಳು ನಟಿಯನ್ನು ಅರಸಿಕೊಂಡು ಬಂದಿದ್ದವು ಎನ್ನಲಾಗಿದ್ದು, ಈ ಬಗ್ಗೆ ಅವರು ಲೈವ್​ನಲ್ಲಿ ಹೇಳಿಕೊಂಡಿದ್ದು ನೆನಪಿರಬಹುದು.. ‘ಕನ್ನಡ ಬಿಗ್ ಬಾಸ್ ಸೀಸನ್ 8’ ಪೂರ್ಣಗೊಂಡು ಒಂದು ವರ್ಷದ ಬಳಿಕ ಅವರು ಎಂಗೇಜ್​ಮೆಂಟ್​ ಕೂಡ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದ್ದು, ಅಭಿಮಾನಿಗಳಿಗಂತು ಫುಲ್ ಶಾಕ್ ಆಗಿಬಿಟ್ಟಿದ್ದಾರೆ.

ವೈಷ್ಣವಿ ಗೌಡ ಹಾಗೂ ಹುಡುಗನೊಬ್ಬ ಮಾಲೆ ಧರಿಸಿ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹುಡುಗನ ಪಕ್ಕ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕೂಡ ನಿಂತಿದ್ದಾರೆ. ಎದುರಿನಲ್ಲಿ ಹೂವು ಹಣ್ಣುಗಳನ್ನು ಇಟ್ಟಿರುವ ದೃಶ್ಯ ಇರುವ ಫೋಟೋ ವೈರಲ್ ಆಗಿದ್ದು, ಸದ್ಯ ವೈಷ್ಣವಿ ಗೌಡ ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ವೈಷ್ಣವಿ ಗೌಡ ವಿದ್ಯಾ ಭರಣ್ ಎನ್ನುವರ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ವಿದ್ಯಾ ಭರಣ್ ಮತ್ತು ವೈಷ್ಣವಿ ಇಬ್ಬರೂ ಮಾಲೆ ಹಾಕಿಕೊಂಡು ನಿಂತಿರುವ ಫೋಟೋ ಈಗ ವೈರಲ್ ಆಗಿದ್ದು, ವೈಷ್ಣವಿ ಮತ್ತು ವಿದ್ಯಾ ಭರಣ್ ಜೋಡಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ವೈಷ್ಣವಿ ಹಸೆಮಣೆ ಏರುತ್ತಿರುವ ಹುಡುಗ ವಿದ್ಯಾ ಭರಣ್ , ಈಗಾಗಲೇ ಒಂದು ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. 2018ರಲ್ಲಿ ರಿಲೀಸ್ ಆಗಿದ್ದ ವಿರಾಜ್ ಎನ್ನುವ ಸಿನಿಮಾದಲ್ಲಿ ವಿದ್ಯಾ ಭರಣ್ ನಟಿಸಿದ್ದರು ಎನ್ನಲಾಗಿದೆ. ಬೆಂಗಳೂರೂ ಮೂಲದ ಹುಡುಗ ವಿದ್ಯಾ ಭರಣ್ ಬಿಎಮ್‌ಎಸ್ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು, ವೈಷ್ಣವಿ ಜೊತೆ ಹೊಸ ದಾಂಪತ್ಯ ಜೀವನಕ್ಕೆ ಅಡಿ ಇಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೊಸ ಧಾರಾವಾಹಿ ಮೂಲಕ ವೈಷ್ಣವಿ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿದೆ.

ವೈಷ್ಣವಿ ಗೌಡ ಅವರು ಕಿರುತೆರೆಯಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗದೇ ಇರುವುದರಿಂದ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ?? ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ.. ಕಿರುತೆರೆಯಲ್ಲಿ ಆಕ್ಟಿವ್ ಆಗದೇ ಇದ್ದರೂ ಕೂಡ ಅವರ ಫ್ಯಾನ್ಸ್ ಗೇನು ಕಡಿಮೆ ಆಗಿಲ್ಲ. ಅವರು ಮತ್ತೆ ಕಿರುತೆರೆಗೆ ಬರಬೇಕು ಎಂಬ ಅಭಿಲಾಷೆ ಹೊತ್ತು ಅಭಿಮಾನಿಗಳು ಕಾಯುತ್ತಿದ್ದು, ‘ಲಕ್ಷಣ’ ಧಾರಾವಾಹಿಯಲ್ಲಿ ಅವರು ಅತಿಥಿ ಪಾತ್ರ ಮೂಲಕ ಎಂಟ್ರಿ ಕೊಟ್ಟು ಅಭಿಮಾನಿಗಳನ್ನು ರಂಜಿಸಿದ್ದಾರೆ.

ಹೀಗಿರುವಾಗಲೇ ಅವರ ಎಂಗೇಜ್​ಮೆಂಟ್ ಸುದ್ದಿ ಹೊರ ಬಿದ್ದಿದ್ದು, ವೈಷ್ಣವಿ ಗೌಡ ಅವರ ಕುಟುಂಬದವರಾಗಲಿ ಅಥವಾ ವೈಷ್ಣವಿ ಆಗಲಿ ಈ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ.