Home Breaking Entertainment News Kannada BBK9 : ಬಿಗ್‌ ಬಾಸ್‌ ಮನೆಗೆ ಗ್ರ್ಯಾಂಡ್‌ ಎಂಟ್ರಿ ನೀಡಿದ ಬಿಗ್‌ ಬಾಸ್‌ ವಿನ್ನರ್‌ ...

BBK9 : ಬಿಗ್‌ ಬಾಸ್‌ ಮನೆಗೆ ಗ್ರ್ಯಾಂಡ್‌ ಎಂಟ್ರಿ ನೀಡಿದ ಬಿಗ್‌ ಬಾಸ್‌ ವಿನ್ನರ್‌ ಮಂಜು ಪಾವಗಡ

Hindu neighbor gifts plot of land

Hindu neighbour gifts land to Muslim journalist

ಮನರಂಜನೆಯ ಉಣ ಬಡಿಸುತ್ತಿರುವ ಬಿಗ್ ಬಾಸ್ ದೊಡ್ಮನೆಯ ಆಟಗಳು ಜನರಿಗೆ ಕುತೂಹಲ ಮೂಡಿಸುತ್ತಾ ಮಂದೆನಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿದೆ.

‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದೀಗ ದೊಡ್ಮನೆ ಆಟ ಕೊನೆಯ ಹಂತಕ್ಕೆ ತಲುಪಿದೆ. ಈ ವರ್ಷದ ಕೊನೆಯಲ್ಲಿ ಇಲ್ಲವೇ ಹೊಸ ವರ್ಷದ ಶುಭ ಸಂದರ್ಭದಲ್ಲಿ ಬಿಗ್ ಬಾಸ್ ಆಟ ಮುಗಿಯಲಿದೆ. ಈ ವಿಚಾರವನ್ನು ವೇದಿಕೆ ಮೇಲೆ ಕಿಚ್ಚ ಸುದೀಪ್ ಸ್ವತಃ ಘೋಷಣೆ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸದ್ಯ ಎಂಟು ಆಟಗಾರರು ಉಳಿದಿದ್ದಾರೆ. ಅರುಣ್ ಸಾಗರ್, ಅಮೂಲ್ಯ ಗೌಡ, ಆರ್ಯವರ್ಧನ್​ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ದೊಡ್ಮನೆ ಯಲ್ಲಿ ಸೇಫ್ ಆಗಿ ಉಳಿದುಕೊಂಡಿದ್ದಾರೆ.

‘ಬಿಗ್ ಬಾಸ್​’ ಫಿನಾಲೆಗೂ ಮುನ್ನ ಮಂಜು ಪಾವಗಡ (Manju Pavagada) ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಹೀಗಿದ್ದ ಮಾತ್ರಕ್ಕೆ ಇದು ವೈಲ್ಡ್ ಕಾರ್ಡ್ ಎಂಟ್ರಿ ಎಂದು ಭಾವಿಸಬೇಕಾಗಿಲ್ಲ ಬದಲಿಗೆ ಟಾಸ್ಕ್​ ಒಂದಕ್ಕಾಗಿ ಮಂಜು ಅವರನ್ನು ಮನೆ ಒಳಗೆ ಪ್ರವೇಶ ನೀಡಲಾಗಿದೆ.

‘ಕನ್ನಡ ಬಿಗ್ ಬಾಸ್ ಸೀಸನ್ 8’ರ ಮೂಲಕ ಮಂಜು ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅವರ ಆಟದ ವೈಖರಿ ಹೆಚ್ಚಿನವರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರಲ್ಲಿ ಕೂಡ ಅವರ ಕಾಮಿಡಿ ಪಂಚ್ ಕೂಡ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಿ ಎಲ್ಲರ ಪಾಲಿನ ಹೈಲೈಟ್ ಆಗಿತ್ತು. ಈ ಸೀಸನ್​ನ​ಲ್ಲಿ ಹಳೆಯ ಸ್ಪರ್ಧಿಗಳಿಗೆ ಅವಕಾಶ ದೊರೆಯಲಿದೆ ಎಂಬ ಮಾತುಗಳು ಬಂದಾಗ ಮಂಜು ಅವರು ಕೂಡ ಎಂಟ್ರಿ ಕೊಡಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಎಲ್ಲರ ಅನಿಸಿಕೆಗೆ ಊಹಾಪೋಹದ ನಡುವೆ ಮಂಜು ಎಂಟ್ರಿ ಕೊಡದೆ ಬೇರೆಯವರು ದೊಡ್ಮನೆಯಲ್ಲಿ ಜಾಗ ಪಡೆದುಕೊಂಡಿದ್ದರು. ಈಗ ಮಂಜು ಒಂದು ಟಾಸ್ಕ್​ಗೋಸ್ಕರ ಮತ್ತೆ ದೊಡ್ಮನೆ ಪ್ರವೇಶ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸದ್ಯ ಎಂಟು ಆಟಗಾರರು ಇದ್ದಾರೆ. ಅರುಣ್ ಸಾಗರ್, ಅಮೂಲ್ಯ ಗೌಡ, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ದೊಡ್ಮನೆ ಯಲ್ಲಿ ಸೇಫ್ ಆಗಿ ಉಳಿದುಕೊಂಡಿದ್ದಾರೆ. ‘ಬಿಗ್ ಬಾಸ್ ನಲ್ಲಿ ಈ ವಾರ ಎಲ್ಲರೂ ನಾಮಿನೇಟ್ ಆಗಿರುವುದರಿಂದ ಉತ್ತಮ ಪ್ರದರ್ಶನ ನೀಡಿ ಗೆಲುವಿನತ್ತ ಮುಖ ಮಾಡಬೇಕಾದ ಅವಶ್ಯಕತೆ ಎಲ್ಲರಿಗೂ ತಲೆದೋರಿದೆ.

ಈ ವಾರ ಸ್ಪರ್ಧಿಗಳಿಗೆ ಹಾವು ಏಣಿ ಆಟ ನೀಡಲಾಗಿದ್ದು, ಮಂಜು ಪಾವಗಡ ಈ ಆಟಕ್ಕೆ ದಾಳ ಹಾಕಲು ಬಂದಿದ್ದಾರೆ. ಈ ಸಂದರ್ಭ ಅವರು ಹಾಸ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದು, ಈ ವೇಳೆ ಮಂಜುಗೆ ಅಮೂಲ್ಯ ಗೌಡ ‘ಐ ಲವ್​ ಯೂ’ ಎಂದಿದ್ದಾರೆ. ಇದರಿಂದ ರಾಕೇಶ್ ಅಡಿಗಗೆ ಕೊಂಚ ಮಟ್ಟಿಗೆ ಟೆನ್ಶನ್ ಮಾಡಿಕೊಂಡಿದ್ದಾರೆ.

ರಾಕೇಶ್ ಅಡಿಗ ಹಾಗೂ ಅಮೂಲ್ಯ ಬಿಗ್ ಬಾಸ್ ಮನೆಯಲ್ಲಿ ತುಂಬಾ ಕ್ಲೋಸ್ ಆಗಿದ್ದಾರೆ. ಮಂಜುಗೆ ಅಮೂಲ್ಯ ಐ ಲವ್​ ಯೂ ಎಂದಿದ್ದು ಸಹಜವಾಗಿಯೇ ರಾಕೇಶ್ ಅವರ ಟೆನ್ಷನ್ ಹೆಚ್ಚಿಸಿದ್ದು, ಕಲರ್ಸ್ ಕನ್ನಡ ವಾಹಿನಿ ಈ ಪ್ರೋಮೋ ಶೇರ್ ಮಾಡಿಕೊಂಡಿದೆ. ಏನೇ ಆದರೂ ಬಿಗ್ ಬಾಸ್ ಅಭಿಮಾನಿಗಳಂತೂ ದೊಡ್ಮನೆ ಆಟ ನೋಡಿ ಯಾರ ಮುಡಿಗೆ ಗೆಲುವಿನ ಪಟ್ಟ ದೊರೆಯಲಿದೆ ಎಂದು ಎದುರು ನೋಡುತ್ತಿದ್ದಾರೆ.