Home Breaking Entertainment News Kannada Kantara : ಡಿಜಿಟಲ್ ಆರ್ಟ್ ಪೋಸ್ಟರ್ ಬಿಡುಗಡೆ | ಅಭಿಮಾನಿಯ ಅಭಿಮಾನದ ಪ್ರತೀಕ

Kantara : ಡಿಜಿಟಲ್ ಆರ್ಟ್ ಪೋಸ್ಟರ್ ಬಿಡುಗಡೆ | ಅಭಿಮಾನಿಯ ಅಭಿಮಾನದ ಪ್ರತೀಕ

Hindu neighbor gifts plot of land

Hindu neighbour gifts land to Muslim journalist

ಈ ವರ್ಷ ರಿಲೀಸ್ ಆದ ಸಿನಿಮಾದಲ್ಲಿ ನೆಚ್ಚಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಜನರಲ್ಲಿ ಕೇಳಿದರೆ, ಬರುವ ಉತ್ತರ ಕಾಂತಾರ ಅನ್ನೊದರಲ್ಲಿ ಡೌಟೇ ಇಲ್ಲ. ಈ ಸಿನಿಮಾವನ್ನು ಅನೇಕ ಬಾರಿ ಥಿಯೇಟರ್​​ಗೆ ಹೋಗಿ ನೋಡಿದವರು ಕೂಡ ಇದ್ದಾರೆ. ಇದೀಗ ಅಭಿಮಾನಿಯೊಬ್ಬರು ಸಿನಿಮಾದ ಡಿಜಿಟಲ್ ಪೋಸ್ಟರ್ ತಯಾರಿಸಿದ್ದು ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮೊದಲು ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್ ಆದ ಕಾಂತಾರ ಸಿನಿಮಾ ನಂತರ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಿದ್ದು ಮಾತ್ರವಲ್ಲ ಬರೀ 16 ಕೋಟಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ 450 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ರಿಷಬ್ ಶೆಟ್ಟಿ (Rishab Shetty) ಕಥೆ ಬರೆದು, ನಿರ್ದೇಶನ ಮಾಡಿ, ನಟಿಸಿದ ಕಾಂತಾರ (Kantara) ಸಿನಿಮಾ ಕನ್ನಡ ಚಿತ್ರರಂಗದಲ್ಲಿ 2022ರ ಬಿಗ್ ಹಿಟ್ ಆಗಿದ್ದು ಗೊತ್ತಿರುವ ವಿಚಾರವೇ!!. ಈ ಸಿನೆಮಾದ ಮೂಲಕ ರಿಷಬ್ ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಆಗಿ ಮಿಂಚಿದ್ದು, ಗಣ್ಯಾತಿ ಗಣ್ಯರು ಸಿನಿಮಾಗೆ ಮೆಚ್ಚುಗೆಯ ಸುರಿಮಳೆ ಗೈದಿದ್ದಾರೆ.

ಹೊಂಬಾಳೆ ಫಿಲ್ಮ್ಸ್ (Hombale Films) ತಯಾರಿಸಿದ ಈ ಸಿನಿಮಾ ಭರ್ಜರಿ ಕಮಾಯಿ ಮಾಡಿದ್ದು ಅಲ್ಲದೆ ಅನೇಕ ದಾಖಲೆಗಳನ್ನು ಸೃಷ್ಟಿ ಮಾಡಿದೆ. ಅಷ್ಟೆ ಅಲ್ಲದೆ, ಸಿನಿಮಾದಲ್ಲಿದ್ದವರಿಗೆಲ್ಲ ದೊಡ್ಡ ಮಟ್ಟದ ನೇಮ್ ಫೇಮ್ ತಂದುಕೊಟ್ಟಿದೆ ಎಂದರೆ ತಪ್ಪಾಗದು.

ಈ ಸಿನಿಮಾದ ಅಡಕವಾಗಿರುವ ಅನೇಕ ಸೂಕ್ಷ್ಮ ವಿಚಾರಗಳು ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದು, ದೈವದ ಪಾತ್ರ ವನ್ನು ಜನ ಭಕ್ತಿ ಭಾವದಿಂದ ತನ್ಮಯರಾಗಿ ಮೈ ಮನ ರೋಮಾಂಚನ ಉಂಟು ಮಾಡುವ ರೀತಿ ರಿಷಬ್ ರವರು ನಟಿಸಿದ್ದಾರೆ.

ಇದೀಗ ಅಭಿಮಾನಿಯೊಬ್ಬರು ಕಾಂತಾರ ಸಿನಿಮಾವನ್ನು ಹೊಗಳಿದ್ದು ಅಲ್ಲದೆ ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದಾರೆ.ಕಾಂತಾರ ಸಿನಿಮಾ ನೋಡಿದ ಹೆಚ್ಚಿನ ಅಭಿಮಾನಿಗಳು ಕಾಂತಾರಕ್ಕೆ ಸಂಬಂಧಿಸಿ ಬಹಳಷ್ಟು ಪೋಸ್ಟ್, ಟ್ವೀಟ್, ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೆ, ಅಭಿಮಾನಿ ಯೊಬ್ಬರು ವಿಭಿನ್ನವಾಗಿ ನಟ ರಿಷಬ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಅರೇ… ಅದು ಹೇಗೆ ಅಂತೀರಾ??

ಡಿಜಿಟಲ್ ಆರ್ಟ್ ಮೂಲಕ ಪೋಸ್ಟರ್ ಮಾಡಿದ್ದು, ನೋಡುಗರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸ್ವಲ್ಪ ಗಾಢ ಬಣ್ಣ ಕಾನ್ಸೆಪ್ಟ್ ಹೊಂದಿದ್ದು, ಕಾಂತಾರ ಪೋಸ್ಟರ್ ಡಿಜಿಟಲ್ ಆರ್ಟ್ ತುಂಬಾ ಆಕರ್ಷಕವಾಗಿ ಮೂಡಿ ಬಂದಿದೆ. ಸ್ಪೇಸ್ ಕಾಸ್ಟರ್ ಎನ್ನುವ ಹೆಸರಿನ ಇನ್​​ಸ್ಟಾಗ್ರಾಮ್ ಖಾತೆಯಿಂದ ಪೋಸ್ಟರ್ ಫೋಟೋಗಳನ್ನು ಶೇರ್ ಮಾಡಲಾಗಿದ್ದು , ಇದನ್ನು ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರೂ ಕೂಡ ತಮ್ಮ ಇನ್ಸ್ತಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.

ಈ ಪೋಸ್ಟರ್ ತಯಾರಿಸಿದ ಬಳಿಕ, ಅಭಿಮಾನಿ ಸ್ಪೇಸ್ ಕಾಸ್ಟರ್ ಅಭಿಪ್ರಾಯ ಹಂಚಿಕೊಂಡಿದ್ದು, ಈ ಪೋಸ್ಟರ್ ಡಿಸೈನ್ ಮಾಡಿದ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದುಕೊಂಡಿದ್ದು, ಅದ್ಭುತ ಸಿನಿಮಾಟೋಗ್ರಫಿ ಹಾಗೂ ಬ್ರಿಲಿಯಂಟ್ ಸಿನಿಮಾವನ್ನು ಈಗಾಗಲೇ ನೋಡಿದ್ದೇನೆ ಅಲ್ಲದೆ ನೋಡುತ್ತಿದ್ದೇನೆ, ಇನ್ನೂ ಹಲವು ಬಾರಿ ನೋಡುತ್ತೇನೆ. ಕಾಂತಾರ ಸಿನಿಮಾ ನೋಡಿ ನನಗೆ ಅಷ್ಟೊಂದು ಪ್ರೇರಣೆಯಾಗಿದ್ದು, ದಂತಕಥೆಯಾಗಿರುವ ಈ ಐಕಾನಿಕ್ ಸಿನಿಮಾ ಕಾಂತಾರದ ಪೋಸ್ಟರ್ ಮಾಡಲೇಬೇಕು ಎಂಬ ಬಯಕೆ ಮೂಡಿದ್ದರಿಂದ ಈ ಪೋಸ್ಟರ್ ತಯಾರಿಸಿದೆ ಎಂದಿದ್ದಾರೆ.

https://www.instagram.com/p/CmzWS4oyRrI/?igshid=Yzg5MTU1MDY=

ಈ ಸಿನಿಮಾ ರಿಲೀಸ್ ಆಗುವ ಸಂದರ್ಭ ಈ ಪೋಸ್ಟರ್ ಡಿಜಿಟಲ್ ಆರ್ಟ್ ಮಾಡಲು ಶುರು ಮಾಡಿದೆ. ಆದರೆ ಈ ನಡುವೆ ಬೇರೆ ಡೆಡ್ಲೈನ್ ಜೊತೆಗೆ ಇನ್ನಿತರ ಕಾರಣದಿಂದ ನನಗೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ರಜೆಗಳು ನನಗೆ ಈ ಆರ್ಟ್ ಪೂರ್ಣಗೊಳಿಸಲು ಅವಕಾಶ ಕೊಟ್ಟಿದ್ದು, ಈಗ ಈ ಡಿಜಿಟಲ್ ಪೋಸ್ಟರ್​​ನ್ನು ಫ್ಯಾನ್ ಆರ್ಟ್ ಟ್ರಿಬ್ಯೂಟ್ ಆಗಿ ನೀಡುತ್ತಿದ್ದೇನೆ ಎಂದು ಬರೆದು ರಿಷಬ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿದ್ದಾರೆ.