Home Entertainment ತರಗತಿಯಲ್ಲೇ ಜುಟ್ಟು ಹಿಡಿದು ಕಿತ್ತಾಡಿದ ವಿದ್ಯಾರ್ಥಿನಿಯರು!

ತರಗತಿಯಲ್ಲೇ ಜುಟ್ಟು ಹಿಡಿದು ಕಿತ್ತಾಡಿದ ವಿದ್ಯಾರ್ಥಿನಿಯರು!

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಫೈಟ್, ಜಗಳ ಅಂದಾಗ ಆ ಪ್ಲೇಸ್ ನಲ್ಲಿ ಹುಡುಗರು ಕಾಣಸಿಗುತ್ತಾರೆ. ಆದ್ರೆ, ಈಗ ಕಾಲ ಬದಲಾಗಿದೆ ಗುರೂ. ಯಾಕಂದ್ರೆ, ಹುಡುಗರಿಕ್ಕಿಂತ ನಾವೇನು ಕಮ್ಮಿ ಇಲ್ಲ ಎಂಬಂತೆ ಬೀದಿ- ಬೀದಿಗಳಲ್ಲಿ ನಾರಿಮಣಿಯರು ಕಿತ್ತಾಡಿಕೊಂಡ ವೀಡಿಯೊ ವೈರಲ್ ಆಗುತ್ತಲೇ ಇರುತ್ತದೆ.

ಇದೀಗ ಅದೇ ರೀತಿ ದೊಡ್ಡವರಿಗಿಂತ ನಾವೇನು ಕಮ್ಮಿ ಎಂದು ವಿದ್ಯಾರ್ಥಿನಿಯರು ಕೂಡ ಜುಟ್ಟು ಹಿಡಿದು ಹೊರಳಾಡಿಕೊಂಡಿದ್ದಾರೆ. ಹೌದು. ಶಾಲಾ ತರಗತಿಯಲ್ಲೇ ವಿದ್ಯಾರ್ಥಿನಿಯರಿಬ್ಬರು ಮಾರಾಮಾರಿ ಹೊಡೆದಾಡಿಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹುಡುಗಿಯರು ಅಂದ್ರೆ ಗೊತ್ತಲ್ಲ ಮಾತಿನಲ್ಲಿ ಒಂದು ಹೆಜ್ಜೆ ಮುಂದೇನೆ. ಅದೇ ರೀತಿ ಈ ಇಬ್ಬರು ವಿದ್ಯಾರ್ಥಿನಿಯರು ಯಾವುದೋ ಒಂದು ವಿಷಯಕ್ಕೆ ರೊಚ್ಚಿಗೆದ್ದಿದ್ದಾರೆ. ಆರಂಭದಲ್ಲಿ ಒಬ್ಬರಿಗೊಬ್ಬರು ಏರಿದ ದನಿಯಲ್ಲಿ ಕಿತ್ತಾಡಿದ್ದಾರೆ. ಬಳಿಕ ಕೋಪ ನೆತ್ತಿಗೇರಿತೋ ಏನೋ, ಒಬ್ಬರಿಗೊಬ್ಬರು ಡಬ-ಡಬ ಎಂದು ಏಟು ಕೊಟ್ಟುಕೊಳ್ಳುತ್ತಾರೆ.

ಕೊನೆಗೆ ಸಿಕ್ಕಿದ್ದೇ ಜುಟ್ಟು ಎಂಬ ಅಸ್ತ್ರ. ಯಾರು ಗಟ್ಟಿ ನೋಡಿಯೇ ಬಿಡುವ ಎಂಬಂತೆ ಪೈಪೋಟಿಗೆ ಬಿದ್ದು ತಳ್ಳಾಡಿ, ಹೊಡೆದಾಡಿಕೊಳ್ಳುತ್ತಾರೆ. ಈ ವೇಳೆ ಅಲ್ಲೇ ಇದ್ದ ಸಹಪಾಠಿಗಳು ಜಗಳ ತಪ್ಪಿಸಲು ಪ್ರಯತ್ನಿಸುತ್ತಾರೆ, ಆದ್ರೆ ಇವರು ಮಾತ್ರ ಇವರದ್ದೇ ಯುದ್ಧ ಲೋಕದಲ್ಲಿ ಮುಳುಗಿದ್ದಾರೆ.

ಇದೇ ಸಮಯಕ್ಕೆ ಶಿಕ್ಷಕರೂ ತರಗತಿ ಒಳಗೆ ಪ್ರವೇಶ ಮಾಡುತ್ತಾರೆ. ಆದ್ರೆ, ಅವರಿಗೂ ಕ್ಯಾರೇ ಅನ್ನದೆ ಜಗಳ ಮುಂದುವರಿಯುತ್ತಲೇ ಇರುತ್ತದೆ. ಹುಡುಗಿಯರ ಜಗಳ ಅಂದ್ರೆ ಕೇಳಬೇಕಾ? ಅಲ್ಲಿ ನೋಡುಗರಿಗೆ ಸೀರಿಯಸ್ ನೆಸ್ ಅನ್ನೋದಕ್ಕಿಂತ ಕಾಮಿಡಿ ಸೀನ್ ಕ್ರಿಯೇಟ್ ಆಗಿರುತ್ತೆ.

ಅದೇ ರೀತಿ ಅಲ್ಲಿದ್ದ ಹುಡುಗರಿಗೆ ವಿದ್ಯಾರ್ಥಿನಿಯರ ಜಗಳ ಮನರಂಜನೆಯಾಗಿದ್ದು, ಅವರು ಮಜಾ ತೆಗೆದುಕೊಳ್ಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಜಾಲತಾಣದಲ್ಲಿ ವೈರಲ್ ಆದ ವಿಡಿಯೋಗೆ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡಿದ್ದು, ಹೀಗೂ ಇದ್ದಾರಾ ಎಂಬ ಪ್ರಶ್ನೆಯೂ ಮೂಡಿದೆ..

ಆದ್ರೆ, ಈ ಘಟನೆ ಎಲ್ಲಿ ನಡೆದಿದ್ದು, ಏನು ಎಂಬುದರ ಬಗ್ಗೆ ವರದಿಯಾಗಿಲ್ಲ. ಆದ್ರೆ, ಫೋಟೋದಲ್ಲಿ ನೋಡೋ ಪ್ರಕಾರ ವಿದ್ಯಾರ್ಥಿನಿಯರು ತರಗತಿಯಲ್ಲಿ ಜಗಳವಾಡಿದ್ದಾರೆ.