Home Entertainment Dog Love: ವೈರಲ್ ಆಯ್ತು ಬಲು ಅಪರೂಪದ ದೃಶ್ಯ:ಮೇಕೆಗೆ ಹಾಲುಣಿಸಿ ಮಾತೃತ್ವ ಮೆರೆದ ಶ್ವಾನ: ನೋಡಿ...

Dog Love: ವೈರಲ್ ಆಯ್ತು ಬಲು ಅಪರೂಪದ ದೃಶ್ಯ:ಮೇಕೆಗೆ ಹಾಲುಣಿಸಿ ಮಾತೃತ್ವ ಮೆರೆದ ಶ್ವಾನ: ನೋಡಿ ಭಾವುಕರಾದ ನೆಟ್ಟಿಗರು!!

Hindu neighbor gifts plot of land

Hindu neighbour gifts land to Muslim journalist

Dog Love : ದೊಡ್ಡಬಳ್ಳಾಪುರದಲ್ಲಿ ಶ್ವಾನವೊಂದು (Dog Love) ಮೇಕೆ ಮರಿಗೆ ಹಾಲುಣಿಸಿದ್ದು, ಈ ಅಪರೂಪದ ದೃಶ್ಯವನ್ನು (Dog motherhood) ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

 

ದೊಡ್ಡಬಳ್ಳಾಪುರದ‌ ರಘುನಾಥಪುರದಲ್ಲಿ ಅಪರೂಪದ ಘಟನೆ ವರದಿಯಾಗಿದೆ. ಗ್ರಾಮದ ಕೃಷ್ಣಪ್ರಸಾದ್ ಎಂಬುವವರ‌ ಮನೆಯ ಶ್ವಾನವು ಮೇಕೆ ಮರಿಗೆ ಹಾಲುಣಿಸುತ್ತಿದೆ. ಮೇಕೆ ಮರಿಯು ಜನ್ಮ ನೀಡಿದ ತಾಯಿಗಿಂತ ಹೆಚ್ಚಾಗಿ ನಾಯಿಯೊಂದಿಗೆ ಒಡನಾಟ ಇಟ್ಟುಕೊಂಡ ಅಪರೂಪದ ಘಟನೆ ವರದಿಯಾಗಿದೆ. ತಾಯಿ ಶ್ವಾನವು 15ದಿನಗಳ ಹಿಂದಷ್ಟೇ ಮೂರು ಮರಿಗಳಿಗೆ ಜನ್ಮ ನೀಡಿತ್ತಂತೆ. ಆದರೆ ಅದರಲ್ಲಿ ಒಂದು ನಾಯಿ ಮರಿ ತೀರಿ ಹೋಗಿದೆ. ಉಳಿದೆರಡು ನಾಯಿಮರಿಗಳು ತಾಯಿಯಿಂದ ಬೇರ್ಪಟಿದೆ. ಕರುಳಿನ ಬಳ್ಳಿಗಳನ್ನು ಕಳೆದುಕೊಂಡ ನೋವಲ್ಲಿದ್ದ ತಾಯಿ ಶ್ವಾನದ ಜೊತೆಗೆ ವಾರದ ಹಿಂದಷ್ಟೇ ಜನಿಸಿದ ಮೇಕೆ ಮರಿಯೊಂದು ಒಡನಾಟ ಬೆಳೆಸಿಕೊಂಡಿದೆ. ನಾಯಿಯ ಕಂಡು ಓಡೋಡಿ ಬರುವ ಮೇಕೆ ಮರಿಗೆ ಶ್ವಾನವು ಹಾಲುಣಿಸುತ್ತಿದೆ. ಈ ಅಪರೂಪರದ ಮಾತೃತ್ವಕ್ಕೆ ಜನರು (Dog Love) ಮನಸೋತಿದ್ದಾರೆ.

ಕಳೆದ ಒಂದು ವಾರದಿಂದ ಮೇಕೆಮರಿ ಮತ್ತು ಶ್ವಾನದ ವಾತ್ಸಲ್ಯವು ಮುಂದುವರಿದಿದೆಯಂತೆ. ಶ್ವಾನದ ಮೊಲೆಹಾಲು ಕುಡಿಯುವ ಮೇಕೆ ಮರಿಯನ್ನು ನೋಡುವುದ ಗಮನಿಸಿದ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ. ಶ್ವಾನಕ್ಕೆ ತನ್ನ ಮರಿಗಳಿಲ್ಲ ಎಂಬ ಕೊರಗನ್ನು ಮೇಕೆಮರಿ ನೀಗಿಸಿದೆ. ಶ್ವಾನದ ಈ ಅಪರೂಪದ ತಾಯಿ ವಾತ್ಸಲ್ಯಕ್ಕೆ ಜನರು ಅಚ್ಚರಿಗೊಂಡು ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.