Home Entertainment ಮಂಗಳೂರು ವಿಶೇಷ ರೈಲುಗಳ ಘೋಷಣೆ

ಮಂಗಳೂರು ವಿಶೇಷ ರೈಲುಗಳ ಘೋಷಣೆ

Hindu neighbor gifts plot of land

Hindu neighbour gifts land to Muslim journalist

ರೈಲ್ವೆ ಇಲಾಖೆ ಜನತೆಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಈಗಾಗಲೇ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿದೆ. ಇದೀಗ, ರೈಲ್ವೆಯ ಮತ್ತೊಂದು ಹೊಸ ಸೇವೆಯಿಂದ, ಪ್ರಯಾಣಿಕರು ಹಬ್ಬದ ಸಂಭ್ರಮದಲ್ಲಿ ಓಡಾಟ ನಡೆಸಲು ಅನುಕೂಲವಾಗಲಿದೆ .

ಇನ್ನೇನೂ ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಲಿದ್ದು, ಹೊಸ ಹುರುಪಿನಿಂದ ಹೊಸ ಆಲೋಚನೆಗಳ ಜೊತೆಗೆ ಹೊಸ ವರ್ಷವನ್ನು ಕೂಡ ಬರ ಮಾಡುವ ಸಂದರ್ಭ ಅನೇಕ ದಿನಗಳು ರಜೆ ಇರಲಿದ್ದು, ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡು ಬರಲಿದೆ. ಹೀಗಾಗಿ, ಮಂಗಳೂರು ಜಂಕ್ಷನ್ ಹಾಗೂ ಗುಜರಾತ್​ನ ಉಧ್ನಾ ನಗರಗಳ ನಡುವೆ ಮಧ್ಯೆ ವಿಶೇಷ ರೈಲುಗಳನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧಾರ ಮಾಡಿದೆ.

ಕ್ರಿಸ್​ಮಸ್ ಹಬ್ಬಕ್ಕೆ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಹೊರ ರಾಜ್ಯಗಳಿಂದ ಊರಿಗೆ ಹಿಂತಿರುಗಲು, ಪ್ರವಾಸ ಕೈಗೊಳ್ಳಲು ಬಯಸುವವರಿಗೆ ಹೆಚ್ಚು ಪ್ರಯೋಜನವಾಗಲಿದೆ. ಮತ್ತೊಂದೆಡೆ ಕ್ರಿಸ್​ಮಸ್ ರಜೆ ವೇಳೆ ಜನರ ಓಡಾಟಕ್ಕೂ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ವಿಶೇಷ ರೈಲುಗಳನ್ನು ಆರಂಭಿಸಲು ತೀರ್ಮಾನಿಸಿದೆ. ಹೀಗಾಗಿ, ಮಂಗಳೂರು ಜಂಕ್ಷನ್ ಹಾಗೂ ಗುಜರಾತ್​ನ ಉಧ್ನಾ ನಗರಗಳ ನಡುವೆ ಮಧ್ಯೆ ವಿಶೇಷ ರೈಲುಗಳ ಸಂಚಾರ ಸೇವೆ ನಡೆಸಲು ಕೊಂಕಣ ರೈಲ್ವೆ ನಿರ್ಧಾರ ಮಾಡಿದೆ.

ವಿಶೇಷ ರೈಲು ಡಿಸೆಂಬರ್ 25, 28 ಹಾಗೂ ಜನವರಿ 1ರಂದು ರಾತ್ರಿ 8ಕ್ಕೆ ಉಧ್ನಾದಿಂದ ಹೊರಟು ಮಂಗಳೂರು ಜಂಕ್ಷನ್​ಗೆ ಮರುದಿನ ಸಂಜೆ 6:30ಕ್ಕೆ ತಲುಪಲಿದೆ. ಇದೇ ರೀತಿ ಮಂಗಳೂರು ಜಂಕ್ಷನ್​ನಿಂದ ಡಿಸೆಂಬರ್ 22, 26, 29 ಹಾಗೂ ಜನವರಿ 2ರಂದು ಹೊರಟು ಮರುದಿನ ರಾತ್ರಿ 7:25ಕ್ಕೆ ಉಧ್ನಾ ತಲುಪಲಿದೆ. ಜೊತೆಗೆ ಈ ವಿಶೇಷ ರೈಲು 2 ಟೈರ್ ಎಸಿ ಸೇರಿದಂತೆ ಒಟ್ಟು 24 ಕೋಚ್​ಗಳನ್ನು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಮಾಹಿತಿ ನೀಡಿದೆ.

ವಲ್ಸಡ್, ವಾಪಿ, ಫಾಲ್ಗರ್, ವಸಾೖ ರೋಡ್, ಪನ್ವೇಲ್, ರೋಹ, ಖೇಡ್, ಚಿಪ್ಳೂಣ, ಸಂಗಮೇಶ್ವರ ರೋಡ್, ರತ್ನಾಗಿರಿ, ಕಂಕಾವಿಲಿ, ಸಿಂಧೂದುರ್ಗ, ಕುಡಾಳ್, ಸಾವಂತವಾಡಿ ರೋಡ್, ತಿವಿಂ, ಕರ್ಮಾಲಿ, ಮಡಗಾಂವ್, ಕಾರವಾರ, ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ/ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್​ಗಳಲ್ಲಿ ಈ ವಿಶೇಷ ರೈಲು ನಿಲ್ಲಲಿದ್ದು, ಪ್ರಯಾಣಿಕರು ಈ ರೈಲ್ವೇ ಸೇವೆಯ ಸದುಪಯೋಗ ಪಡಿಸಿಕೊಳ್ಳಬಹುದು.

ಹಬ್ಬದ ಸಂಭ್ರಮದಲ್ಲಿ ನಗರ ಪ್ರದೇಶದಲ್ಲಿರುವ ಜನರು ತಮ್ಮ ತವರಿಗೆ ಹಿಂತಿರುಗುವ ಹಿನ್ನೆಲೆ ಜನದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಕೊಂಕಣ ರೈಲ್ವೆ ಕ್ರಿಸ್​ಮಸ್ ಮತ್ತು ವರ್ಷಾಂತ್ಯದ ವಿಶೇಷ ಸಂದರ್ಭಕ್ಕೆ ಒದಗಿಸಿರುವ ಈ ವಿಶೇಷ ರೈಲು ಸೌಲಭ್ಯವನ್ನು ರೈಲ್ವೆ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.