Home Entertainment BBK9 : ಬಿಗ್ ಬಾಸ್ ಮನೆಯಿಂದ ಮಂಗಳ ಗೌರಿ ಔಟ್!

BBK9 : ಬಿಗ್ ಬಾಸ್ ಮನೆಯಿಂದ ಮಂಗಳ ಗೌರಿ ಔಟ್!

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ 9 ನಲ್ಲಿ ಬರ್ತಾ ಬರ್ತಾ ಕಾಂಪಿಟೇಷನ್ ಹೆಚ್ಚಾಗ್ತ ಇದೆ. ನೂರರ ಗಡಿ ಹತ್ತಿರ ಇರುವ ಮನೆ ಮಂದಿಗೆ ಈ ವಾರ ಸಂತೋಷದ ಗಳಿಗೆಗಳಿಗೆ ಸಾತ್ ನೀಡಿತ್ತು ಬಿಗ್ ಬಾಸ್. ಸ್ಪರ್ಧಿಗಳ ಮನೆಯವರನ್ನು ಕರೆಸಿ ಸಂತೋಷಗಳನ್ನು ಮೆಲುಕು ಹಾಕುವ ಸುಂದರ ವಾರ ಇದಾಗಿತ್ತು.

ಈ ವಾರ ಎಲಿಮಿನೇಷನ್ ಯಾರು ಅಂತ ಗೊತ್ತಾ?
ಕಪ್ಪೆ ಜೊತೆ ಬೆಸ್ಟ್ ಫ್ರೆಂಡ್ ಆಗಿ, ಅದರ ಜೊತೆಗೆ ನೋವುಗಳನ್ನು ಹಂಚಿಕೊಳ್ಳುತ್ತಿದ್ದ ಹುಡುಗಿ ಕಾವ್ಯ. ಹೌದು, ಮಂಗಳಗೌರಿ ಮದುವೆ ಸೀರಿಯಲ್ ಮೂಲಕ ಮನೆ ಮಾತಾದ ನಟಿ ಕಾವ್ಯಶ್ರೀ ಗೌಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಇದೀಗ ಈ ವಾರ ಕಾವ್ಯಶ್ರೀ ಆಟಕ್ಕೆ ಬ್ರೇಕ್ ಬಿದ್ದಿದೆ.

ಮನೆಗೆ ಬರ್ತಾ ಖಡಕ್ ಆಗಿ ಮಾತಾಡಿ. ‘ಅಳೊಲ್ಲ ಅಳಸ್ತೀನಿ’ ಅಂತ ಕಾವ್ಯ ವೇದಿಕೆಯ ಮೇಲೆ ನಿಂತು ಈ ಮಾತನ್ನು ಹೇಳಿದ್ದರು. ಇದೀಗ ಕೊನೆಯ ಹಂತದಲ್ಲಿ ಮನೆಯಿಂದ ಹೊರಗೆ ಬರ್ತಾ ಇದ್ದಾರೆ. ನಿರೂಪಕಿಯಾಗಿ ವೃತ್ತಿ ಜೀವನ ಶುರು ಮಾಡಿದ್ದ ನಟಿ ಕಾವ್ಯಶ್ರೀ ಮಂಗಳಗೌರಿಯಾಗಿ ಮೋಡಿ ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಮನರಂಜನೆ, ಟಾಸ್ಕ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ಸ್ಪರ್ಧಿ ಕಾವ್ಯಶ್ರೀ ಈ ವಾರ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ನೋಡೋಣ ಇಂದು ಕಿಚ್ಚನ ಜೊತೆ ಏನೆಲ್ಲ ವಿಷಯಗಳನ್ನು ಕಾವ್ಯ ಹಂಚಿಕೊಳ್ಳುತ್ತಾರೆ ಅಂತ.