Home Entertainment Best Mileage Electric Car : ಬ್ಯಾಟರಿ ಇಲ್ಲದ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಗೆ ಲಗ್ಗೆ |ಯಾವುದೀ...

Best Mileage Electric Car : ಬ್ಯಾಟರಿ ಇಲ್ಲದ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಗೆ ಲಗ್ಗೆ |ಯಾವುದೀ ಕಾರ್, ಇದರ ಬೆಲೆ, ವಿಶೇಷತೆ ಕಂಪ್ಲೀಟ್‌ ವಿವರ ಇಲ್ಲಿದೆ!

Hindu neighbor gifts plot of land

Hindu neighbour gifts land to Muslim journalist

ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಕಾಮನ್. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲಿಯೂ ಕೂಡ ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಸೃಷ್ಟಿ ಮಾಡುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಬರುತ್ತಿರುವ ಕಾರ್ ಲಿಸ್ಟ್ ನಲ್ಲಿ ಕ್ವಾಂಟಿನೋ ಟ್ವೆಂಟಿಫೈವ್ ಜನಪ್ರಿಯತೆ ಗಳಿಸಿದೆ. ಅಷ್ಟಕ್ಕೂ ಈ ಕಾರ್ ವೈಶಿಷ್ಟ್ಯ ಏನು ಎಂಬುದನ್ನು ಗಮನಿಸಿದರೆ, ಜೈವಿಕ ಇಂಧನದಿಂದ ಕಾರ್ಯ ನಿರ್ವಹಿಸುವ ಎಲೆಕ್ಟ್ರಿಕ್ ಕಾರ್ ಇದಾಗಿದ್ದು, ಇದರಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯ ಬದಲು , ಸಮುದ್ರದ ನೀರು ಅಥವಾ ಕೈಗಾರಿಕಾ ನೀರಿನ ತ್ಯಾಜ್ಯದ ನ್ಯಾನೊ-ಸ್ಟ್ರಕ್ಚರ್ಡ್ ಬೈ-ಐಯಾನ್ ಅಣುಗಳನ್ನು ಬಳಕೆ ಮಾಡಲಾಗುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ, ಕಾರ್ ಫುಲ್ ಟ್ಯಾಂಕ್ ನಲ್ಲಿ ಸುಮಾರು 2000 ಕಿಮೀ ಮೈಲೇಜ್ ನೀಡುವುದಾಗಿ ಕಂಪನಿ ಮಾಹಿತಿ ನೀಡಿದೆ.

ಕ್ವಾಂಟಿನೋ ಟ್ವೆಂಟಿಫೈವ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸವು ತುಂಬಾ ಆಕರ್ಷಕವಾಗಿದ್ದು ನೋಡುಗರ ಮನ ಸೆಳೆಯುವುದರಲ್ಲಿ ಸಂಶಯವಿಲ್ಲ. ಕಂಪನಿ ನೀಡಿರುವ ಮಾಹಿತಿಯ ಅನುಸಾರ, ಈ ಕಾರ್ ಕೇವಲ 3 ಸೆಕೆಂಡುಗಳಲ್ಲಿ 100KMPH ವೇಗವನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ. ಈ ಎಲೆಕ್ಟ್ರಿಕ್ ಕಾರನ್ನು ಸಮುದ್ರದ ನೀರು ಇಲ್ಲವೇ ಕೈಗಾರಿಕಾ ನೀರಿನ ತ್ಯಾಜ್ಯದಿಂದ ಚಲಾಯಿಸಬಹುದಾಗಿದ್ದು, ಈ ನೀರು ಜೈವಿಕ ಇಂಧನವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಿನ ನಾಲ್ಕು ಚಕ್ರಗಳಲ್ಲಿ ಎಲೆಕ್ಟ್ರಿಕ್ ಮೋಟಾರ್ ಗಳಿವೆ.