Home Breaking Entertainment News Kannada ಮತ್ತೆ ನಾಲಿಗೆ ಹರಿಬಿಟ್ಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ | ಅದೃಷ್ಟ ಲಕ್ಷ್ಮಿ ಬಗ್ಗೆ ವಿವಾದದ ಮಾತು...

ಮತ್ತೆ ನಾಲಿಗೆ ಹರಿಬಿಟ್ಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ | ಅದೃಷ್ಟ ಲಕ್ಷ್ಮಿ ಬಗ್ಗೆ ವಿವಾದದ ಮಾತು | ನೆಟ್ಟಿಗರಿಂದ ಫುಲ್‌ ಟ್ರೋಲ್‌

Hindu neighbor gifts plot of land

Hindu neighbour gifts land to Muslim journalist

ಮಾತು ಆಡಿದರೆ ಹೋಯಿತು.. ಮುತ್ತು ಒಡೆದರೆ ಹೋಯಿತು..ಎಂಬ ಮಾತಿನಂತೆ ಬಾಯಿಗೆ ಬಂದಂತೆ ಮಾತನಾಡಿ ವಿವಾದ ಸೃಷ್ಟಿಸಿಕೊಳ್ಳುವುದು ಸಾಮಾನ್ಯ ವಿಚಾರವಾಗಿ ಬಿಟ್ಟಿದೆ.

ಇದೀಗ ನಟನೆಯ ಮೂಲಕ ಸೈ ಎನಿಸಿಕೊಂಡಿರುವ ದರ್ಶನ್ ತಮ್ಮ ಮಾತಿನ ಮೂಲಕ ಸದಾ ಒಂದಲ್ಲ ಒಂದು ವಿವಾದ ಮೈ ಮೇಲೆ ಎಳೆದು ಕೊಳ್ಳುತ್ತಿರುತ್ತಾರೆ. ಈ ಹಿಂದೆ ಮಾಧ್ಯಮಗಳ ಬಗ್ಗೆ ಮಾತನಾಡಿ ಟ್ರೊಲ್ ಆಗಿದ್ದ ದರ್ಶನ್ ಈ ಬಾರಿ ಕೂಡ ನಾಲಿಗೆ ಹರಿಬಿಟ್ಟು ಟ್ರೊಲ್ ಆಗುತ್ತಿದ್ದು, ಹೆಚ್ಚಿನವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇತ್ತೀಚೆಗೆ ನಡೆದ ತಮ್ಮ ಕ್ರಾಂತಿ ಸಿನಿಮಾ ಬಗ್ಗೆ ಮಾತನಾಡುತ್ತಾ ಆ ಸಂದರ್ಶನದ ವೇಳೆ ಅದೃಷ್ಟ ದೇವತೆಯ ಬಗ್ಗೆ ಪ್ರಸ್ತಾಪವಾಗಿದ್ದು, ಅದೃಷ್ಟ ದೇವತೆ ಯಾವಾಗಲೂ ಬಾಗಿಲು ತಟ್ಟುವುದಿಲ್ಲ ಎಂದಿದ್ದು, ಯಾವಾಗ ಆಕೆ ಬಾಗಿಲು ತಟ್ಟುತ್ತಾಳೋ ಆಗ, ಆಕೆಯನ್ನು , ಅವಳನ್ನು ಹಿಡಿದು ತಂದು ಬಟ್ಟೆ ಬಿಚ್ಚಿ ಬೆಡ್ ರೂಮ್ ನಲ್ಲಿ ಕೂರಿಸಬೇಕು ಎಂದಿದ್ದಾರೆ ಅಷ್ಟೆ ಅಲ್ಲದೆ, ಬಟ್ಟೆ ಕೊಟ್ಟರೆ ಆಕೆ ಇನ್ನೊಬ್ಬರ ಮನೆಗೆ ಹೋಗುತ್ತಾಳೆ’ ಎಂದಿದ್ದಾರೆ.

ಈ ಮೂಲಕ ಕೆಳಮಟ್ಟದ ವಿಮರ್ಶೆಯ ಒಳನೋಟಗಳನ್ನು ದರ್ಶನ್ ಹೊಂದಿದ್ದಾರಾ ??? ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ದರ್ಶನ್ ಮಾತನಾಡಿರುವ ಈ ವಿಡಿಯೋ ವೈರಲ್ ಆಗಿದ್ದು,ಇದನ್ನು ನೋಡಿದ ನೆಟ್ಟಿಗರು ಅಸಮಾಧಾನದ ಜೊತೆಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮತ್ತೆ ಕೆಲವರು ಕಾಂಟ್ರವರ್ಸಿ ಕಿಂಗ್ ನಿಮ್ಮ ಮಾತಿನ ಮೇಲೆ ನಿಗಾ ಇರಲಿ ಎಂಬ ಸಲಹೆ ನೀಡಿದ್ದಾರೆ.

ಯಾರೇ ಆಗಲಿ..ನಾಲಿಗೆ ಹರುಬಿಡುವ ಮೊದಲು ಆಡುವ ಮಾತಿನಿಂದ ಆಗುವ ಪರಿಣಾಮಗಳನ್ನು ಚಿಂತಿಸಿ ಮಾತನಾಡುವುದು ಉತ್ತಮ. ಇಲ್ಲದೇ ಹೋದರೆ ಅದರಿಂದ ತೊಂದರೆಗಳು ಕಟ್ಟಿಟ್ಟ ಬುತ್ತಿ ಎನ್ನುವುದು ಸುಳ್ಳಲ್ಲ.